ಬಸವಣ್ಣನವರು ಉಚ್ಚ ನೀಚ ನೀತಿ ವಿರೊಧಿಸಿ ಸಮಾನತೆ ಸಾರಿದವರು

| Published : May 10 2024, 11:46 PM IST

ಬಸವಣ್ಣನವರು ಉಚ್ಚ ನೀಚ ನೀತಿ ವಿರೊಧಿಸಿ ಸಮಾನತೆ ಸಾರಿದವರು
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನವರು ಉಚ್ಚ ನೀಚ ನೀತಿಗಳನ್ನು ವಿರೋಧಿಸಿ ಸರಿಪಡಿಸುವ ಕೆಲಸ ಮಾಡಿದ್ದಾರೆ.

ಹಗರಿಬೊಮ್ಮನಹಳ್ಳಿ: ಸಮಾನತೆಯ ಹರಿಕಾರ ಜಗಜ್ಯೋತಿ ಬಸವೇಶ್ವರರು ಮನುಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಡಾ.ಮಹೇಶ್ವರ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಬಸವ ಜಯಂತ್ಯುತ್ಸವದ ನಿಮಿತ್ತ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ ಅವರು ಮಾತನಾಡಿದರು. ಬಸವಣ್ಣನವರು ಉಚ್ಚ ನೀಚ ನೀತಿಗಳನ್ನು ವಿರೋಧಿಸಿ ಸರಿಪಡಿಸುವ ಕೆಲಸ ಮಾಡಿದ್ದಾರೆ. ಹಿಂದೂ ಧರ್ಮ ಸಂಸ್ಕೃತಿ, ಪರಂಪರೆ ಆಚಾರ ವಿಚಾರಗಳನ್ನು ಅನುಷ್ಠಾನಕ್ಕೆ ತರಲು ಶ್ರಮಿಸಿದ್ದಾರೆ. ದೇಶಕ್ಕೆ ಸಂವಿಧಾನದ ಮೂಲ ಪರಿಕಲ್ಪನೆಯನ್ನು ಅನುಭಾವ ಮಂಟಪದಲ್ಲೆ ಬಸವಣ್ಣನವರು ಹುಟ್ಟುಹಾಕಿದ್ದರು. ಬಸವಣ್ಣನವರು ಅನಿಷ್ಠ ಆಚರಣೆಯನ್ನು ವಿರೋಧಿಸಿದ್ದರು. ಬಸವಣ್ಣನವರ ತತ್ವಾದರ್ಶಗಳನ್ನು ಇಂದಿನವರು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಎಂ.ಶಿವರುದ್ರ, ಹಾಲಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ವಿವಿ ಸಂಘದ ನಿರ್ದೇಶಕ ಬದಾಮಿ ಕರಿಬಸರಾಜ, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಕಲ್ಲೇಶ್ ಇಟ್ಟಿಗಿ, ವಿರೂಪಾಕ್ಷಗೌಡ, ಪಟ್ಟೇದ ಮಂಜುನಾಥ, ಹನಸಿ ದೇವರಾಜ, ಚಿಲಗೋಡು ದೊಡ್ಡಬಸಪ್ಪ, ಎಂ.ಎಂ.ಪೂರ್ಣಯ್ಯ, ವಲ್ಲಬಾಪುರ ಚಂದ್ರಶೇಖರ ಶಾಸ್ತ್ರಿ, ಕೆ.ಪಿ.ದೇವರಾಜ, ಬಿ.ಗಂಗಾಧರ, ಜ್ಞಾನೇಶ್ವರಯ್ಯ, ಕವಿತಾ ಹಾಲ್ದಾಳ್, ಪಂಕಜಾ ಪ್ರಸಾದ್, ಚಂದ್ರಶೇಖರ ರೆಡ್ಡಿ, ಕೊಟ್ರೇಶ್, ಈಶಪ್ಪ, ಅಕ್ಕಿ ಬಸವರಾಜ, ಮಲ್ಲಿಕಾರ್ಜುನ, ಶಬಾದಿ ಬಸಪ್ಪ, ಪೋಟೋ ವೀರೇಶ ಇತರರಿದ್ದರು.

ಹಗರಿಬೊಮ್ಮನಹಳ್ಳಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮಾಜದ ಮಖಂಡರು ಬಸವ ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.