ಸಾರಾಂಶ
ಮಹಾನ್ ಮಾನವತಾವಾದಿ ಬಸವಣ್ಣನವರ ಜೀವನಾಧಾರಿತ ಕನ್ನಡ ಚಲನಚಿತ್ರ ಶರಣರ ಶಕ್ತಿ ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆ ಸಿದ್ಧವಾಗಿದ್ದು, ಆ ಕಾಲದಲ್ಲಿ ಬಸವಣ್ಣನವರ ಪ್ರಖ್ಯಾತಿ ಹೇಗಿತ್ತು, ಅನುಭವ ಮಂಟಪದ ಆಕರ್ಷಣೆ ಹೀಗೆ ಸಮಗ್ರ ಘಟನೆಗಳನ್ನು ಕಟ್ಟಿಕೊಡುವ ಪ್ರಯತ್ನ ಈ ಸಿನಿಮಾ ಎಂದು ಚಿತ್ರದ ನಿರ್ದೇಶಕ ದಿಲೀಪ್ ವಿ.ಶರ್ಮ ದಾವಣಗೆರೆಯಲ್ಲಿ ಹೇಳಿದ್ದಾರೆ.
- ಜನಕಲ್ಯಾಣಕ್ಕೆ ಬಂದ ಬಗ್ಗೆ ಬೆಳಕು ಚೆಲ್ಲುವ ಸಿನಿಮಾ: ದಿಲೀಪ್ ಶರ್ಮ
- - - ಕನ್ನಡಪ್ರಭ ವಾರ್ತೆ, ದಾವಣಗೆರೆಮಹಾನ್ ಮಾನವತಾವಾದಿ ಬಸವಣ್ಣನವರ ಜೀವನಾಧಾರಿತ ಕನ್ನಡ ಚಲನಚಿತ್ರ ಶರಣರ ಶಕ್ತಿ ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆ ಸಿದ್ಧವಾಗಿದ್ದು, ಆ ಕಾಲದಲ್ಲಿ ಬಸವಣ್ಣನವರ ಪ್ರಖ್ಯಾತಿ ಹೇಗಿತ್ತು, ಅನುಭವ ಮಂಟಪದ ಆಕರ್ಷಣೆ ಹೀಗೆ ಸಮಗ್ರ ಘಟನೆಗಳನ್ನು ಕಟ್ಟಿಕೊಡುವ ಪ್ರಯತ್ನ ಈ ಸಿನಿಮಾ ಎಂದು ಚಿತ್ರದ ನಿರ್ದೇಶಕ ದಿಲೀಪ್ ವಿ.ಶರ್ಮ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಶ್ರೀಷಾ ಪಿಲ್ಮ್ಸ್ ನಿರ್ಮಿಸಿರುವ ಶರಣರ ಶಕ್ತಿ ಕನ್ನಡ ಚಲನಚಿತ್ರದ ಹಾಡುಗಳ ಬಿಡುಗಡೆ ಮೇ 26ರಂದು ಆಗಲಿದ್ದು, ಇಡೀ ಚಿತ್ರದಲ್ಲಿ ಬಸವಣ್ಣನವರ ಶಕ್ತಿಗಳನ್ನು ಚಿತ್ರಿಸಿದ್ದು, ಕಲ್ಯಾಣಕ್ಕೆ ಬೇರೆ ಬೇರೆ ಪ್ರಾಂತ್ಯಗಳಿಂದ ಶರಣರು ಏಕೆ ಬಂದರೆಂಬುದೇ ಕಥೆಯ ಮೂಲವಾಗಿದೆ ಎಂದರು. ಅನುಭವ ಮಂಟಪದಲ್ಲಿ ವಚನ ಸಾಹಿತ್ಯಕ್ಕಾಗಿ ಶರಣ-ಶರಣೆಯರು ಮಾಡಿದ ಜೀವ ಬಲಿದಾನಗಳನ್ನು ಚಿತ್ರ ಎತ್ತಿ ಹಿಡಿಯಲಿದೆ. ಅಳಿವಿನಿಂದ ಉಳಿವಿಯವರೆಗೆ ನಡೆದ ಘಟನೆಗಳನ್ನು ಚಿತ್ರ ಹೊಂದಿದೆ. 40 ದಿನಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಮುಗಿಸಿ, ಸೆನ್ಸಾರ್‌ಗೆ ಸಿನಿಮಾ ಸಿದ್ಧವಾಗಿದೆ ಎಂದು ಅವರು ಹೇಳಿದರು. ದಾವಣಗೆರೆ, ದಾವಣಗೆರೆ ತಾ. ಕಕ್ಕರಗೊಳ್ಳ, ದೊಗ್ಗಳ್ಳಿ, ಕೊಂಡಜ್ಜಿ, ಹುಬ್ಬಳ್ಳಿಯಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ವಿಶೇಷವಾಗಿ ದಾವಣಗೆರೆ ಮಹಾ ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ ವಾಲಿಕಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಬ್ದುಲ್ ಲತೀಫ್ ಈ ಚಿತ್ರದಲ್ಲಿ ಕುರುಬ ಬಲ್ಲಗನಾಗಿ ಅತ್ಯುತ್ತಮವಾಗಿ ನಟಿಸಿದ್ದು, ತಮ್ಮ ಸಹಜ ಅಭಿನಯದಿಂದ ಗಮನ ಸೆಳೆಯತ್ತಾರೆ ಎಂದು ಅವರು ತಿಳಿಸಿದರು. ಉತ್ತಮ ತಾಂತ್ರಿಕ ವರ್ಗವನ್ನು ಚಿತ್ರ ಒಳಗೊಂಡಿದೆ. ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ದಿಲೀಪ್ ವಿ.ಶರ್ಮ ನಿರ್ವಹಿಸಿದ್ದಾರೆ. ಆರಾಧನಾ ಕುಲಕರ್ಣಿ ಚಿತ್ರದ ನಿರ್ಮಾಪಕರಾಗಿದ್ದಾರೆ. ವಿನು ಮನಸ್ಸು ಸಂಗೀತ ನೀಡಿದ್ದು, ಕೆ.ಕಲ್ಯಾಣ ಸಾಹಿತ್ಯ ನೀಡಿದ್ದಾರೆ. ಮುಂಜಾನೆ ಮಂಜು ಛಾಯಾಗ್ರಹಣವಿದ್ದು, ಆರ್.ಮಹಾಂತೇಶ ಸಂಕಲನ ಮಾಡಿದ್ದಾರೆ. ಬಸವಣ್ಣನವರಪಾತ್ರದಲ್ಲಿ ಮಂಜುನಾಥ ಗೌಡ ಪಾಟೀಲ್, ಚನ್ನಬಸವಣ್ಣನವರಾಗಿ ಧೃವಶರ್ಮ ಅಭಿನಯಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ತಳವಾರ, ಕಾಮಿದೇವನಾಗಿ ರಮೇಶ ಪಂಡಿತ್, ನಾಗಮ್ಮ ಪಾತ್ರದಲ್ಲಿ ಆರಾಧನಾ ಕುಲಕರ್ಣಿ, ಹರಳಯ್ಯನಾಗಿ ರಾಮಕೃಷ್ಣ ದೊಡ್ಡಮನಿ, ಸಂಕವ್ವ ಪಾತ್ರದಲ್ಲಿ ಶೃತಿ ಹೆಗಡೆ, ನೀಲಾಂಬಿಕಾ ಪಾತ್ರದಲ್ಲಿ ಸಂಗೀತಾ ಹುಲ್ಲೂರು, ಜಿ.ಶ್ರೀನಿವಾಸ ಇತರರು ನಟಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮ ಸಿನಿಮಾವನ್ನು ನೋಡುವ ಮೂಲಕ ಪ್ರೋತ್ಸಾಹಿಸಬೇಕು. ತಮ್ಮ ಪ್ರಯತ್ನಕ್ಕೆ ನಾಡಿನ ಸಮಸ್ತ ಜನತೆ ಆಶೀರ್ವದಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ದಿಲೀಪ್ ವಿ.ಶರ್ಮ ಮನವಿ ಮಾಡಿದರು. ಚಿತ್ರತಂಡದ ಸದಸ್ಯ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ ವಾಲೀಕಾರ್, ಧೃವ ಶರ್ಮ, ಮಂಜುನಾಥ ಗೌಡ ಪಾಟೀಲ್, ಶ್ರೀನಿವಾಸ, ಭಾರ್ಗವ ಶರ್ಮ ಇತರರು ಇದ್ದರು. ...........................ಇಂದು, ಶರಣರ ನೋಡು ಹಾಡು ಬಿಡುಗಡೆದಾವಣಗೆರೆ ಶ್ರೀ ಶಿವಯೋಗಿ ಮಂದಿರದಲ್ಲಿ ಮೇ.26ರ ಸಂಜೆ 6.30ಕ್ಕೆ ಶರಣರ ಶಕ್ತಿ ಸಿನಿಮಾದ ಶರಣರ ನೋಡು ಹಾಡನ್ನು ಚಿತ್ರದುರ್ಗ ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಬಿಡುಗಡೆ ಮಾಡಲಿದ್ದಾರೆ. ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ಜಿಪಂ ಮಾಜಿ ಸದಸ್ಯ ಕಕ್ಕರಗೊಳ್ಳ ಕೆ.ಜಿ.ಬಸವನಗೌಡ, ಬಿಐಇಟಿ ಕಾಲೇಜು ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ, ರಾಮಕೃಷ್ಣ ದೊಡ್ಡಮನಿ, ಮಾಜಿ ಶಾಸಕ ಶಿರಹಟ್ಟಿ ಭಾಗವಹಿಸುವರು. ಅಬ್ದುಲ್ ಲತೀಫ್ ವಾಲೀಕಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ, ಚಿತ್ರ ನಟ ..................ಕ್ಯಾಪ್ಷನ್ 25ಕೆಡಿವಿಜಿ1-ದಾವಣಗೆರೆಯಲ್ಲಿ ಶನಿವಾರ ಶರಣರ ಶಕ್ತಿ ಸಿನಿಮಾ ನಿರ್ದೇಶಕ ದಿಲೀಪ್ ವಿ.ಶರ್ಮ, ಚಿತ್ರದ ನಟ ಅಬ್ದುಲ್ ಲತೀಫ್, ಧೃವ ಶರ್ಮ, ಮಂಜುನಾಥ ಗೌಡ ಪಾಟೀಲ, ಶ್ರೀನಿವಾಸ, ಭಾರ್ಗವ ಶರ್ಮ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು. ,,,,,,,,,,,,,,,,,,,,,,,,25ಕೆಡಿವಿಜಿ2-ದಾವಣಗೆರೆಯಲ್ಲಿ ಶನಿವಾರ ಶರಣರ ಶಕ್ತಿ ಸಿನಿಮಾ ನಿರ್ದೇಶಕ ದಿಲೀಪ್ ವಿ.ಶರ್ಮ, ಚಿತ್ರದ ನಟ ಅಬ್ದುಲ್ ಲತೀಫ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.