ಕಾಮೆಡ್‌-ಕೆ ಪರೀಕ್ಷೆ: ಜ್ಞಾನಸುಧಾಕ್ಕೆ ಹಲವು ರ್‍ಯಾಂಕ್‌

| Published : May 26 2024, 01:39 AM IST

ಸಾರಾಂಶ

ವಿದ್ಯಾರ್ಥಿಗಳಾದ ಪ್ರಿಯಾಂಶ್ ಎಸ್.ಯು. ೯೯.೯೯ ಪರ್ಸಂಟೈಲ್‌ನೊಂದಿಗೆ ೧೧ನೇ ರ‍್ಯಾಂಕ್, ಬಿಪಿನ್ ಜೈನ್ ಬಿ.ಎಂ. ೯೯.೯೬ ಪರ್ಸಂಟೈಲ್‌ನೊಂದಿಗೆ ೪೨ನೇ ರ‍್ಯಾಂಕ್ , ಕ್ಷೀರಜ್ ಎಸ್. ಆಚಾರ್ಯ ೯೯.೮೫ ಪರ್ಸಂಟೈಲ್ (೧೬೩ನೇ ರ‍್ಯಾಂಕ್) ಪಡೆದಿದ್ದಾರೆ.

ಉಡುಪಿ: ಕರ್ನಾಟಕ ಖಾಸಗಿ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ೧೫ ವಿದ್ಯಾರ್ಥಿಗಳು ೯೯ಕ್ಕಿಂತ ಅಧಿಕ ಪರ್ಸಂಟೈಲ್‌ನೊಂದಿಗೆ ಸಾವಿರದೊಳಗಿನ ರ‍್ಯಾಂಕ್ ಗಳಿಸಿದ್ದಾರೆ.

ವಿದ್ಯಾರ್ಥಿಗಳಾದ ಪ್ರಿಯಾಂಶ್ ಎಸ್.ಯು. ೯೯.೯೯ ಪರ್ಸಂಟೈಲ್‌ನೊಂದಿಗೆ ೧೧ನೇ ರ‍್ಯಾಂಕ್, ಬಿಪಿನ್ ಜೈನ್ ಬಿ.ಎಂ. ೯೯.೯೬ ಪರ್ಸಂಟೈಲ್‌ನೊಂದಿಗೆ ೪೨ನೇ ರ‍್ಯಾಂಕ್ , ಕ್ಷೀರಜ್ ಎಸ್. ಆಚಾರ್ಯ ೯೯.೮೫ ಪರ್ಸಂಟೈಲ್ (೧೬೩ನೇ ರ‍್ಯಾಂಕ್), ಚಿರಂತನ ಜೆ.ಎ. ೯೯.೮೫ ಪರ್ಸಂಟೈಲ್ (೧೬೪ನೇ ರ‍್ಯಾಂಕ್), ಅನುರಾಗ್ ೯೯.೮೧ ಪರ್ಸಂಟೈಲ್ (೨೦೭ನೇ ರ‍್ಯಾಂಕ್), ನಿಮೇಶ್ ಆರ್. ಆಚಾರ್ಯ ೯೯.೭೩ ಪರ್ಸಂಟೈಲ್ (೨೮೯ ರ‍್ಯಾಂಕ್), ಕೇದಾರ್ ರಮೇಶ್ ಕುಲಕರ್ಣಿ ೯೯.೭೩ ಪರ್ಸಂಟೈಲ್ (೨೯೭ನೇ ರ‍್ಯಾಂಕ್), ಅವನಿ ಆರ್. ಶೆಟ್ಟಿ ೯೯.೭೩ ಪರ್ಸಂಟೈಲ್ (೨೯೯ನೇ ರ‍್ಯಾಂಕ್), ರಿಯಾ ಆಳ್ವ ೯೯.೪೯ ಪರ್ಸಂಟೈಲ್ (೫೭೮ನೇ ರ‍್ಯಾಂಕ್), ಸಮ್ಮಿತ್ ಕೃಷ್ಣ ಯು. ೯೯.೩೮ ಪರ್ಸಂಟೈಲ್ (೬೭೦ನೇ ರ‍್ಯಾಂಕ್), ತ್ರಿಷಾ ಬಾಲಚಂದ್ರ ೯೯.೩೪ ಪರ್ಸಂಟೈಲ್ (೭೦೬ನೇ ರ‍್ಯಾಂಕ್), ನೇಸರ್ ಸಿ.ಪಿ. ೯೯.೧೭ ಪರ್ಸಂಟೈಲ್ (೮೮೬ನೇ ರ‍್ಯಾಂಕ್), ದೇವಾಂಶ್ ದೀಪಕ್ ಬಿ. ೯೯.೧೬ ಪರ್ಸಂಟೈಲ್ (೯೧೮ನೇ ರ‍್ಯಾಂಕ್) ಮತ್ತು ಕ್ಷಮಾ ಜಯಚಂದ್ ೯೯.೦೮ ಪರ್ಸಂಟೈಲ್ (೯೮೨ನೇ ರ‍್ಯಾಂಕ್) ಹಾಗೂ ಪ್ರಣವ್ ಕುಮಾರ್ ಭಂಡಿ ೯೯.೦೫ ಪರ್ಸಂಟೈಲ್ (೯೯೯ನೇ ರ‍್ಯಾಂಕ್) ಪಡೆದಿದ್ದಾರೆ.ಇವರ ಸಾಧನೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಭಿನಂದಿಸಿದ್ದಾರೆ.