ಬಸವಣ್ಣನವರ ಸಂದೇಶ ಸರ್ವಕಾಲಕ್ಕೂ ಶ್ರೇಷ್ಠ: ಚೆನ್ನಮಲ್ಲಪ್ಪ ಘಂಟಿ

| Published : May 10 2024, 11:45 PM IST

ಬಸವಣ್ಣನವರ ಸಂದೇಶ ಸರ್ವಕಾಲಕ್ಕೂ ಶ್ರೇಷ್ಠ: ಚೆನ್ನಮಲ್ಲಪ್ಪ ಘಂಟಿ
Share this Article
  • FB
  • TW
  • Linkdin
  • Email

ಸಾರಾಂಶ

ದೇವದುರ್ಗ ಪಟ್ಟಣದ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರ ಜಯಂತಿಯನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ದೇವದುರ್ಗ

ಕಾಯಕ ಮತ್ತು ದಾಸೋಹ ಎಂಬ ಶ್ರೇಷ್ಠ ತತ್ವಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಬಸವೇಶ್ವರರ ಜೀವನ ಸಂದೇಶ ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಅವರ ಸಾಮಾಜಿಕ ಸಮಾನತೆ ಸಂದೇಶ ಸರ್ವಕಾಲಿಕ ಸತ್ಯವಾದುದು ಎಂದು ತಹಸೀಲ್ದಾರ್‌ ಚೆನ್ನಮಲ್ಲಪ್ಪ ಘಂಟೆ ತಿಳಿಸಿದರು.

ಪಟ್ಟಣದ ಬಸವೇಶ್ವರ ವೃತ್ತದ ಬಳಿ ತಾಲೂಕು ಆಡಳಿತದಿಂದ ಆಯೋಜಿಸಲಾದ ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬರು ಶರಣರ ಜೀವನ ಆದರ್ಶ ಅಳವಡಿಸಿಕೊಳ್ಳಬೇಕು. ಎಲ್ಲ ಶರಣರಲ್ಲಿ ಬಸವಣ್ಣನವರು ಮಹಾದಂಡನಾಯಕರಂತೆ ಕಾರ್ಯವೆಸಗಿರುವ ಕಾರಣ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಗುರುತಿಸಿರುವುದು ನಾಡಿಗೆ ಹೆಮ್ಮೆಯ ವಿಷಯ. ಬಸವಣ್ಣನವರು ಬೋಧಿಸಿರುವ ನಮ್ಮ ಅರಿವು ನಮಗೆ ಗುರುವಾಗಲೀ ಎಂದು ತಿಳಿಸುತ್ತ, ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಬದುಕು ನಮಗೆ ಆದರ್ಶ ಎಂದು ತಿಳಿಸಿದರು.

ಪಿಡಬ್ಲ್ಯೂಡಿ ಎಇಇ ಬಕ್ಕಪ್ಪ, ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ, ಬಸವ ಕೇಂದ್ರದ ಅಧ್ಯಕ್ಷ ಸುಭಾಶ್ಚಂದ್ರ ಪಾಟೀಲ್, ಅರಿವಿನ ಮನೆಯ ಕುಮಾರ, ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿ ಬಸವರಾಜ ಬ್ಯಾಗವಾಟ ಬಸವಣ್ಣನವರ ಸಾಮಾಜಿಕ ಚಿಂತನೆ ಕುರಿತು ಮಾತನಾಡಿದರು.

ಇದಕ್ಕೂ ಮುಂಚೆ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ನಂತರ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.

ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಡೋಣಿ, ತಾಲೂಕ ಆರೋಗ್ಯ ಅಧಿಕಾರಿ ಡಾ.ಜಿ.ಬನದೇಶ್ವರ, ಪುರಸಭೆ ಮುಖ್ಯಾಧಿಕಾರಿ ವಿ.ಆರ್.ಬಳ್ಳಾರಿ, ಬಿಸಿಎಂ ಮಾನಪ್ಪ ಬಡಿಗೇರ, ದೈಹಿಕ ಶಿಕ್ಷಣ ಅಧಿಕಾರಿ ಎಂ.ವಿ.ಕವಡಿಮಟ್ಟಿ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ನಾಯಕ ಮಸ್ಕಿ, ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಘದ ಅಧ್ಯಕ್ಷ ದೇವೀಂದ್ರಪ್ಪ ಹಂಚಿನಾಳ, ವೀರಶೈವ ಸಮಾಜದ ಅಧ್ಯಕ್ಷ ಡಾ.ಕಿರಣ ಖೇಣೇದ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಪಾಟೀಲ್ ಅಮರಾಪೂರ, ನಾಗರಾಜ ಪಾಟೀಲ್ ಗೌರಂಪೇಟೆ, ಕಂದಾಯ ಇಲಾಖೆಯ ಶರಣಯ್ಯಸ್ವಾಮಿ, ಗೋವಿಂದರಾಜ, ಭೀಮರಾಯ, ಭೀಮನಗೌಡ, ಪ್ರವೀಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದ ಕುಮಾರಿ ಗಂಗಮ್ಮ, ಶಾಂತಾಬಾಯಿ, ಸಿ.ಆರ್.ಪಿ ದಾಕ್ಷಾಯಿಣಿ ಬಸವರಾಜ ಪಾಟೀಲ್, ಬಸವಪರ ಸಂಘಟನೆಗಳ ಮುಖಂಡರಾದ ಗಂಗಣ್ಣಗೌಡ ಗೌರಂಪೇಟೆ, ಗೆಜ್ಜೆಭಾವಿ ಮಲ್ಲನಗೌಡ, ಮಹಾದೇವಿ ಮೂಲಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಬಸವಪರ ಸಂಘಟನೆಗಳು ಮುಖಂಡರು, ಬಸವಾನುಯಾಯಿಗಳು ಪಾಲ್ಗೊಂಡಿದ್ದರು.