ವಿಶ್ವಕ್ಕೆ ಭಾರತದ ಶಕ್ತಿ ತೋರಿಸಿದ್ದು ಬಸವಣ್ಣ

| Published : Sep 17 2024, 01:00 AM IST

ಸಾರಾಂಶ

ಅಣ್ಣ ಬಸವಣ್ಣ ಜಗತ್ತಿಗೆ ಸಂವಿಧಾನ ಕೊಟ್ಟು ವಿಶ್ವ ಗುರುವಾಗಿ ಜಗತ್ತಿಗೆ ಭಾರತದ ಶಕ್ತಿಯ ತೋರಿಸಿದ ಮಹಾನ್ ಚೇತನ ಎಂದು ರಾಜ್ಯ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಅಣ್ಣ ಬಸವಣ್ಣ ಜಗತ್ತಿಗೆ ಸಂವಿಧಾನ ಕೊಟ್ಟು ವಿಶ್ವ ಗುರುವಾಗಿ ಜಗತ್ತಿಗೆ ಭಾರತದ ಶಕ್ತಿಯ ತೋರಿಸಿದ ಮಹಾನ್‌ ಚೇತನ ಎಂದು ರಾಜ್ಯ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು.

ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ಸರ್ಕಾರ ಜಲ ಸಂಪನ್ಮೂಲ ಇಲಾಖೆ ಕರ್ನಾಟಕ ನೀರಾವರಿ ನಿಗಮ ನಿಯಮಿತ (ಕರ್ನಾಟಕ ಸರಕಾರದ ಉದ್ಯಮ ) ಇವರ ಸಹಯೋಗದಲ್ಲಿ ನಿರ್ಮಿಸಿರುವ ಬೃಹತ್ ಬಸವಣ್ಣನವವರ ಪಂಚ ಲೋಹದ ಆಶ್ವಾರೂಢ ಪುತ್ಥಳಿ ಲೋಕಾರ್ಪಣೆಗೊಳಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಂತರ ಮಾತನಾಡಿದ ಸಂಸದ ಪಿ.ಸಿ.ಗದ್ದಿಗೌಡರ, ಬಸವಣ್ಣ ಹುಟ್ಟಿದ ನಾಡಿನಲ್ಲಿ ನಾವು ಇರುವುದೇ ನಮ್ಮ ಭಾಗ್ಯ. ಅಂತಹ ಮಹಾ ಪುರುಷ ಹುಟ್ಟಿ ನಮ್ಮ ಕನ್ನಡ ನಾಡಿನ ಕೀರ್ತಿ ವಿಶ್ವಕ್ಕೆ ಬೆಳಗಿದ ಯುಗ ಪುರುಷ ಶರಣ ಸಂಸ್ಕೃತಿ ಮೂಲಕ ಕಾಯಕವೇ ಕೈಲಾಸ ಎಂದು ತೋರಿಸಿದ ಮಹಾನ್‌ ವ್ಯಕ್ತಿ ಎಂದರು.

ನಂತರ ಮಾತನಾಡಿ ಪುರಸಭೆ ಅಧ್ಯಕ್ಷ ಯಲ್ಲಣ್ಣಗೌಡ ಪಾಟೀಲ, ಬಹುದಿನಗಳ ಬೇಡಿಕೆಯಾಗಿದ್ದ ಬಸವ ವೃತ್ತ ಮತ್ತು ಮೂತ್ರಿ ಪ್ರತಿಷ್ಠಾಪನೆ ನನ್ನ ಅವಧಿಯಲ್ಲಿ ಲೋಕಾರ್ಪಣೆಗೊಳ್ಳುತ್ತಿರುವುದು ಸಂಸತದ ಸಂಗತಿ. ನಾನು ಕೂಡಾ ಬಸವಣ್ಣನಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ವಚ್ಛ ಆಡಳಿತ ನೀಡುತ್ತೇನೆ. ಇವನ್ಯಾರವಾ ಇವನ್ಯಾರವಾ ಎನ್ನದೇ ಇಂವ ನಮ್ಮವ ಇಂವ ನಮ್ಮವ ಎಂದೇನಿಸಯ್ಯ ಎನ್ನುವ ಬಸವಣ್ಣವರ ವಚನದಂತೆ ಬದುಕಿದರೆ ನಮ್ಮೆಲ್ಲರ ಬದುಕು ಸುಂದರವಾಗುತ್ತದೆ ಎಂದು ಹೇಳಿದರು.

ಇಂದಿನ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ಸಿದ್ದು ಕೊಣ್ಣೂರ, ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಚನಬಸು ಯರಗಟ್ಟಿ, ಸಜ್ಜನಸಾಬ ಪೆಂಡಾರಿ, ಶೀಲಾ ಭಾವಿಕಟ್ಟಿ, ಅಬ್ದುಲ್ ಭಾಗವಾನ, ರಾಜು ಗೌಡಪ್ಪಗೋಳ ಮತ್ತು ಮಲ್ಲಪ್ಪ ಭಾವಿಕಟ್ಟಿ, ಜಾತ್ರಾ ಕಮಿಟಿ ಅಧ್ಯಕ್ಷ ರವಿಗೌಡ ಪಾಟೀಲ, ಲಕ್ಷ್ಮಣಗೌಡ ಪಾಟೀಲ, ಬಲವಂತಗೌಡ ಪಾಟೀಲ,ವೇದಿಕೆ ಮೇಲೆ ಉಪಸ್ಥಿತರಿದ್ದರು.

ಮಹಾಲಿಂಗಪುರ ಉಪವಿಭಾಗದ ಅಭಿಯಂತರರಾದ ಮಹಾಂತೇಶ ಯಡಪ್ಪನವರ, ಪ್ರದೀಪ ಸಾವಂತ, ಪುರಸಭೆ ಸಿಬ್ಬಂದಿಗಳಾದ ಎಂ. ಎಂ.ಮುಗಳಖೋಡ, ಸಿ.ಎಸ್.ಹಿರೇಮಠ, ಎಸ್.ಎನ್.ಪಾಟೀಲ, ಮುಖಂಡರಾದ ಜಿ.ಎಸ್.ಗೊಂಬಿ, ಚಂದ್ರು ಗೊಂದಿ, ಬಾಲಕೃಷ್ಣ ಮಾಳವದೆ, ಪ್ರಭು ಬೆಳಗಲಿ, ಚನ್ನಪ್ಪ ಪಟ್ಟಣಶೆಟ್ಟಿ,ರಾಜು ಗೌಡಪ್ಪಗೋಳ,ಸುರೇಶ ಜಾಧವ, ಪ್ರಕಾಶ ಮಮದಾಪುರ,ನಜೀರ್ ಅತ್ತಾರ, ಮುಸ್ತಕ ಚಿಕ್ಕೋಡಿ, ಆನಂದ ಹಟ್ಟಿ, ಮಹಾದೇವ ಮಾರಾಪುರ್,ಲಕ್ಷ್ಮಣ ಮಂಗ, ಸುನೀಲಗೌಡ ಪಾಟೀಲ, ನಾನಾ ಜೋಶಿ, ಈಶ್ವರ ಚಮಕೇರಿ, ಎಪ್.ಎಚ್. ಕುಂಟೋಜಿ, ಸಂಜೀವ್ ಅಂಗಡಿ, ಶ್ರೀಶೈಲ್ ನುಚ್ಚಿ, ಅನಿಲ್ ದೇಸಾಯಿ, ಗಿರೆಪ್ಪ ಕಬಾಡಿ. ವಿಠ್ಠಲ ಢವಳೇಶ್ವರ, ರಾಜೇಶ ಭಾವಿಕಟ್ಟಿ, ಮಾನಿಂಗ್ ಮಾಳಿ, ಕಲ್ಲಪ್ಪ ಚಿಂಚಲಿ, ನಿಂಗಪ್ಪ ಬಾಳಿಕಾಯಿ, ಚನ್ನಪ್ಪ ಪಟ್ಟಣಶೆಟ್ಟಿ,ಲಕ್ಕಪ್ಪ ಚಮಕೇರಿ, ಮಲ್ಲಣ್ಣಗೌಡ ಪಾಟೀಲ, ಬಸವರಾಜ ಮೇಟಿ ಮಹಾಲಿಂಗ ತಟ್ಟಿಮನಿ ಸೇರಿ ಹಲವರು ಇದ್ದರು. ಕಾರ್ಯಕ್ರಮವನ್ನು ನರನಗೌಡ ಉತ್ತಂಗಿ ನಿರೂಪಿಸಿ, ವಂದಿಸಿದರು.

---

ಗಮನ ಸೆಳೆದ ಮೆರವಣಿಗೆ

ನಗರದಲ್ಲಿ ಮಹಾಲಿಂಗೇಶ್ವರರ ಜಾತ್ರೆಯ ಕಳೆ ಕಟ್ಟಿತು. ಇಡೀ ನಗರ ಮಧುವನ ಗಿಟ್ಟಿಯಂತೆ ಸಿಂಗಾರಗೊಂಡು ಕಂಗೊಳಿಸುತ್ತಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಸಕಲ ಮಂಗಲ ವಾದ್ಯಗಳೊಂದಿಗೆ ನಂದಿಕೋಲು ಸಮೇತ ಬಸವಣ್ಣವರ ವಚನ ಕಟ್ಟುಗಳನ್ನು ಹೊತ್ತು ಸಾಗಿದ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ಫು ಸವದಿ, ಬಸವ ವೃತ್ತಕ್ಕೆ ತಂದು ಪೂಜೆ ಸಲ್ಲಿಸಿ ಬಸವಣ್ಣನಿಗೆ ಗೌರವ ಸಲ್ಲಿಸಿದರು. ಬಸವೇಶ್ವರ ಮಹಾರಾಜಕಿ ಜಯ ಎಂಬ ಜಯ ಘೋಷಣೆ ಮುಗಿಲು ಮುಟ್ಟಿತು.