ಶರಣ ಧರ್ಮದ ಸಾಂಸ್ಕ್ರತಿಕ ನಾಯಕ ಬಸವಣ್ಣ: ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ

| Published : May 02 2025, 12:14 AM IST

ಶರಣ ಧರ್ಮದ ಸಾಂಸ್ಕ್ರತಿಕ ನಾಯಕ ಬಸವಣ್ಣ: ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂಗಳ ಪಾಲಿಗೆ ಅಕ್ಷಯ ತೃತೀಯ ಪ್ರಮುಖ ದಿನವಾಗಿದೆ. ಈ ನಿಟ್ಟಿನಲ್ಲಿ ಅಂಗಡಿಯನ್ನು ಇನ್ನಷ್ಟು ವಿಸ್ತಾರ ಮಾಡಿದ್ದು, ಗ್ರಾಹಕರಿಗೆ ಚಿನ್ನಾಭರಣಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ.

ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ12ನೇ ಶತಮಾನದಲ್ಲಿಯೇ ಬಸವಣ್ಣನವರು ತಮ್ಮ ಕಾಯಕದ ಮೂಲಕ ಕೈಲಾಸವನ್ನು ಕಾಣಬೇಕೆಂದು ತಿಳಿಸಿ, ಶರಣ ಧರ್ಮದ ಸಾಂಸ್ಕ್ರತಿಕ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಉದ್ಧಾನೇಶ್ವರ ವೃತ್ತದಲ್ಲಿ ಸಿದ್ಧಗಂಗಾ ಜ್ಯೂವೆಲರ್ಸ್ ನೂತನ ಅಂಗಡಿ ಉದ್ಘಾಟನೆ ಹಾಗೂ ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಸವಣ್ಣ ಅವರು ಸಮಾಜದ ಕಲ್ಯಾಣಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಭಕ್ತಿಯ ಮೂಲಕ ಆಧ್ಯಾತ್ಮಿಕ ಜ್ಞಾನೋದಯವನ್ನು ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಾಮಾಜಿಕ ನಿಷ್ಠೆ ಪಾಲಿಸಿ ತನ್ನ ವಚನಗಳ ಮೂಲಕ ತಿಳಿಸಿ, ಕರ್ನಾಟಕದ ಇತಿಹಾಸದಲ್ಲಿ ಮೇರು ವ್ಯಕ್ತಿಯಾಗಿ ಉಳಿದಿದ್ದಾರೆ ಎಂದರು.

ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಮಾತನಾಡಿ, ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿಕೋರುತ್ತಾ ಪ್ರತಿಯೊಬ್ಬರೂ ಭಯೋತ್ಪಾದನೆಯನ್ನು ಖಂಡಿಸಬೇಕಿದೆ. ಶೀಘ್ರದಲ್ಲೇ ನಮ್ಮ ಸೈನಿಕರು ನಮಗೆ ಸಿಹಿ ಸುದ್ದಿ ನೀಡುವ ಭರವಸೆಯಿದ್ದು, ನಾವೆಲ್ಲರೂ ಆ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿದ್ದೇವೆ ಎಂದರು.

ಸಿದ್ಧಗಂಗಾ ಜ್ಯೂವೆಲರ್ಸ್ ಮಾಲೀಕ ಚೇತನ್ ಮಾತನಾಡಿ, ಹಿಂದೂಗಳ ಪಾಲಿಗೆ ಅಕ್ಷಯ ತೃತೀಯ ಪ್ರಮುಖ ದಿನವಾಗಿದೆ. ಈ ನಿಟ್ಟಿನಲ್ಲಿ ಅಂಗಡಿಯನ್ನು ಇನ್ನಷ್ಟು ವಿಸ್ತಾರ ಮಾಡಿದ್ದು, ಗ್ರಾಹಕರಿಗೆ ಚಿನ್ನಾಭರಣಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ ಎಂದರು.

ಮುಖಂಡರಾದ ಗ್ರಾಪಂ ಮಾಜಿ ಅಧ್ಯಕ್ಷ ಅಂಚೆಮನೆ ರುದ್ರಪ್ಪ, ಗುರುಸಿದ್ದಪ್ಪ, ಮಹದೇವಯ್ಯ, ಪ್ರಕಾಶ್, ಉಮಾಶಂಕರ್, ಪ್ರತಾಪ್, ಸುಂದರೇಶ್, ಕರುನಾಡ ವಿಜಯಸೇನೆ ರಾಜ್ಯ ಕಾರ್ಯದರ್ಶಿ ವಿನಯ್ ಮತ್ತಿತರರಿದ್ದರು.ಪೋಟೋ 3 : ದಾಬಸ್‍ಪೇಟೆ ಪಟ್ಟಣದ ಉದ್ಧಾನೇಶ್ವರ ವೃತ್ತದಲ್ಲಿ ಸಿದ್ಧಗಂಗಾ ಜ್ಯೂವೆಲರ್ಸ್ ನೂತನ ಅಂಗಡಿ ಉದ್ಘಾಟನೆ ಹಾಗೂ ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಭಾಗವಹಿಸಿರುವುದು.