ಬಸವಣ್ಣನವರು ಉತ್ತಮ ಆಡಳಿತಗಾರ ಆಗಿದ್ದರು-ಶಶಿಧರ ಶಾಸ್ತ್ರಿ

| Published : Apr 13 2025, 02:01 AM IST

ಬಸವಣ್ಣನವರು ಉತ್ತಮ ಆಡಳಿತಗಾರ ಆಗಿದ್ದರು-ಶಶಿಧರ ಶಾಸ್ತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

12ನೇ ಶತಮಾನದಲ್ಲಿ ಬಿಜ್ಜಳ ರಾಜರ ಆಸ್ಥಾನದಲ್ಲಿ ಬಸವಣ್ಣವರು ಉತ್ತಮ ಆರ್ಥಿಕ ಆಡಳಿತಗಾರರಾಗಿ ಸೇವೆ ಸಲ್ಲಿಸಿದ ಮಹಾನಾಯಕರಾಗಿದ್ದರು ಎಂದು ಶಶಿಧರ ಶಾಸ್ತ್ರಿಗಳು ಹೇಳಿದರು.

ನರಗುಂದ: 12ನೇ ಶತಮಾನದಲ್ಲಿ ಬಿಜ್ಜಳ ರಾಜರ ಆಸ್ಥಾನದಲ್ಲಿ ಬಸವಣ್ಣವರು ಉತ್ತಮ ಆರ್ಥಿಕ ಆಡಳಿತಗಾರರಾಗಿ ಸೇವೆ ಸಲ್ಲಿಸಿದ ಮಹಾನಾಯಕರಾಗಿದ್ದರು ಎಂದು ಶಶಿಧರ ಶಾಸ್ತ್ರಿಗಳು ಹೇಳಿದರು.

ಅವರು ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಶಾಖಾ ಮಠದ ಗದ್ದುಗೆ ಶಿಲಾ ಮಂಟಪ ಮತ್ತು ಗೋಪುರದ ಲೋಕಾರ್ಪಣೆ ಕಾರ್ಯಕ್ರಮ ನಿಮಿತ್ತ 10ನೇ ದಿನದ ಬಸವ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣನವರು ಗಂಗಾಂಬಿಕೆಯನ್ನು ವಿವಾಹವಾಗಿ ಬಿಜ್ಜಳನ ಆಸ್ಥಾನದಲ್ಲಿ ಲೆಕ್ಕಪರಿಶೋಧಕರಾಗಿ ಕೆಲಸ ಆರಂಭಿಸಿದರು. ನ್ಯಾಯ ನಿಷ್ಠುರತೆ, ಕೌಶ್ಯಲದ ಕಾಯಕದಿಂದ ಬಿಜ್ಜಳನ ಆಸ್ಥಾನದ ಜಿಡ್ಡುಗಟ್ಟಿದ ಆರ್ಥಿಕ ವ್ಯವಸ್ಥೆಯನ್ನು ಕೆಲವೇ ಕಲವು ದಿನಗಳಲ್ಲಿ ಸುಧಾರಣೆ ಮಾಡುವ ಮೂಲಕ ಬಿಜ್ಜಳನ ಮನಸ್ಸನ್ನು ಗೆಲ್ಲುತ್ತಾರೆ. ಅತೀ ಸಂತೋಷವಾದ ಬಿಜ್ಜಳ ರಾಜರು ಬಸವಣ್ಣನವರ ಕಾರ್ಯವನ್ನು ಕಂಡು ಬೆರಗಾಗಿ ತನ್ನ ಆಸ್ಥಾನದ ಪ್ರಧಾನ ಮಂತ್ರಿಯನ್ನಾಗಿ ಭಡ್ತಿ ನೀಡುತ್ತಾರೆ. ಈ ಮೂಲಕ ಬಿಜ್ಜಳನ ರಾಜ್ಯವನ್ನು ಆರ್ಥಿಕವಾಗಿ ಸುಭದ್ರವಾಗಿರಿಸಿ, ಇದರ ಜೊತೆಗೆ ಸಾಮಾಜಿಕ ಸುಧಾರಣೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಂತಲಿಂಗ ಶ್ರೀಗಳು, ಪ್ರಕಾಶಗೌಡ ತಿಕರನಗೌಡ್ರ, ವೀರಯ್ಯ ದೊಡ್ಡಮನಿ, ಗುರುಬಸವ ಶೆಲ್ಲಿಕೇರಿ, ನಾಗನಗೌಡ ತಿಮ್ಮನಗೌಡ್ರ, ದ್ಯಾಮಣ್ಣ ಕಾಡಪ್ಪನವರ, ಲಾಲಸಾಬ ಅರಗಂಜಿ, ಆರ್.ಐ. ನದಾಫ, ಹನುಮಂತ ಕಾಡಪ್ಪನರ, ಪ್ರಾಚಾರ್ಯ ಬಿ.ಆರ್. ಸಾಲಿಮಠ ಮುಂತಾದವರು ಇದ್ದರು.