ಸಾರಾಂಶ
ಭಾರತೀಯ ಸಮಾಜದಲ್ಲಿರುವಂತಹ ಅಸ್ಪೃಶ್ಯತೆ, ಸಮಾಜಿಕ ಬಹಿಸ್ಕಾರಗಳನ್ನು ಹಾಗೂ ಜಾತೀಯತೆಗಳನ್ನು ಹೊಡೆದು ಹಾಕಿ ಮೂಢನಂಬಿಕೆಗಳ ವಿರುದ್ಧ ಹೋರಾಡಿ ಸಮಾಜವನ್ನು ಸುಧಾರಿಸಲು ಪ್ರಯತ್ನಿಸಿದ ಮಹಾನ್ ನಾಯಕ ಎಂದು ಡಾ. ಸಿ. ಬಸವರಾಜು ಹೇಳಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಬಸವಣ್ಣನವರು ಸಮಾಜದಲ್ಲಿದ್ದ ಅಸ್ಪೃಶ್ಯತೆ, ಮೂಢನಂಬಿಕೆಗಳ ವಿರುದ್ಧ ಹೋರಾಡುವ ಮೂಲಕ ಸಮಾನತೆ ತರುವಲ್ಲಿ ಶ್ರಮಿಸಿದ ಧೀಮಂತ ನಾಯಕರು ಎಂದು ರಾಜ್ಯ ಕಾನೂನು ವಿವಿಯ ಕುಲಪತಿ ಡಾ. ಸಿ. ಬಸವರಾಜು ಹೇಳಿದರು.ಅವರು ಇಲ್ಲಿನ ನವನಗರದಲ್ಲಿರುವ ರಾಜ್ಯ ಕಾನೂನು ವಿಶ್ವವಿದ್ಯಾಲಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಬಸವಣ್ಣನವರ ಕಾಯಕದ ತತ್ವ, ಸಮಾನತೆಯ ನಿಷ್ಠೆ ಹಾಗೂ 12ನೇ ಶತಮಾನದ ಶರಣ ಸಂಪ್ರದಾಯದ ಸಮಾಜ ಸುಧಾರಣೆಯ ಕಾರ್ಯಗಳನ್ನು ಸ್ಮರಿಸಿದರು. ಭಾರತೀಯ ಸಮಾಜದಲ್ಲಿರುವಂತಹ ಅಸ್ಪೃಶ್ಯತೆ, ಸಮಾಜಿಕ ಬಹಿಸ್ಕಾರಗಳನ್ನು ಹಾಗೂ ಜಾತೀಯತೆಗಳನ್ನು ಹೊಡೆದು ಹಾಕಿ ಮೂಢನಂಬಿಕೆಗಳ ವಿರುದ್ಧ ಹೋರಾಡಿ ಸಮಾಜವನ್ನು ಸುಧಾರಿಸಲು ಪ್ರಯತ್ನಿಸಿದ ಮಹಾನ್ ನಾಯಕ. ಅವರ ಕಾಯಕ ದಾಸೋಹ ತತ್ವ ಇಂದಿಗೂ ಜಗತ್ತಿನ ಆದರ್ಶಗಳಲ್ಲೊಂದಾಗಿದೆ. ಕಾಯಕವೇ ಕೈಲಾಸ ಎಂಬುದು ಬಸವಣ್ಣನವರ ಬಲವಾದ ನಂಬಿಕೆಯಾಗಿತ್ತು. ಕಾಯಕದ ಮೂಲಕ ಎಲ್ಲರೂ ಕೈಲಾಸವನ್ನು ಕಾಣುವ ಮಾರ್ಗದಲ್ಲಿ ನಡೆಯೋಣ ಎಂದರು.ವಿಶ್ರಾಂತ ದೈಹಿಕ ನಿರ್ದೇಶಕ ಹಾಗೂ ಬೆಂಗಳೂರು ವಿವಿಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಪ್ರೊ. ಸುಂದರಾಜ ಅರಸ, ಎನ್.ಎಸ್.ಎಸ್. ಸಂಯೋಜಕ ಐ.ಬಿ. ಬಿರಾದಾರ, ಸಹಾಯಕ ಪ್ರಾಧ್ಯಾಪಕ ಮೋಹನ ಆರ್., ಗಿರಿಶಗೌಡ ಪಾಟೀಲ, ಹನುಮಂತಪ್ಪ ತಳವಾರ, ದೀಪಾ ಗೋತಲಿಯಾರ, ಮಂಜಣ್ಣ ಜಂಗವಾಡ ಸೇರಿದಂತೆ ವಿವಿಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.