ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕು ತಿದ್ದಲು ಪ್ರಯತ್ನಿಸಿದ್ದ ಬಸವಣ್ಣನವರ ಆದರ್ಶ ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ ಎಂದು ತಹಸೀಲ್ದಾರ್ ಶ್ರೇಯಶ್ ತಿಳಿಸಿದರು.ಪಟ್ಟಣದ ಆಡಳಿತದಿಂದ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಮಾತನಾಡಿ, ಮಹಾನ್ ಮಾನವತಾವಾದಿ ಬಸವೇಶ್ವರರು ಸಮಾಜದಲ್ಲಿದ್ದ ಮೌಢ್ಯಗಳು, ಜಾತಿ, ಪದ್ಧತಿ, ಲಿಂಗಬೇಧ, ವರ್ಣಬೇದ, ಪದ್ಧತಿ ಹೋಗಲಾಡಿಸಲು ಶ್ರಮಿಸಿದ್ದರು ಎಂದರು.
ಎಲ್ಲರೂ ಸಮಾನರು ಎಂಬುದನ್ನು ಅಂತರ್ಜಾತಿ ವಿವಾಹಗಳು, ಲಿಂಗಧಾರಣೆ, ಸರಳ ವಿವಾಹ, ಎಲ್ಲ ಜಾತಿಯ ಒಳಗೊಂಡಂತೆ ಅನುಭವ ಮಂಟಪ ರಚಿಸಿ ಎಲ್ಲರಿಗೂ ಸಮಾನ ಅವಕಾಶ ನೀಡಿದ ಪಣ್ಯಪುರುಷರಾಗಿದ್ದರು. ಬಸವಣ್ಣ ಅವರು ಪ್ರಪಂಚ ಕಂಡ ಶ್ರೇಷ್ಠ ನಾಯಕರು, ಬಸವಣ್ಣ ಅವರ ಆದರ್ಶ, ತತ್ವ,ಸಿದ್ಧಾಂತಗಳು ಜಗತ್ತಿಗೆ ಮಾದರಿ ಎಂದರು.ವೀರಶೈವ ತಾಲೂಕು ಮಾಜಿ ಅಧ್ಯಕ್ಷ ಎಸ್.ಮಂಜುನಾಥ್ ಮಾತನಾಡಿ, ಬಸವಣ್ಣನವರು ನಡೆಸಿದ ಭಕ್ತಿ ಚಳವಳಿ, ಸಾಮಾಜಿಕ ಚಳವಳಿ ಹಾಗೂ ವಚನ ಚಳವಳಿ ವಿಶ್ವದಲ್ಲಿ ದಾಖಲೆಯಾಗಿದೆ. ಇಷ್ಟಾದರೂ ಇಂದಿನ ಸಮಾಜದಲ್ಲಿ ಜಾತಿ ಪದ್ಧತಿ ಸಂಘರ್ಷ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾನ್ ಪುರುಷರು ನೀಡಿದ ತತ್ವಗಳನ್ನು ಯುವ ಜನಾಂಗಕ್ಕೆ ತಿಳಿಸುವ ಕೆಲಸ ಮಾಡಬೇಕಿದೆ ಎಂದರು.
ಈ ವೇಳೆ ಗ್ರೇಡ್-2 ತಹಸೀಲ್ದಾರ್ ಸಂತೋಶ್, ಬಿಇಒ ಚಂದ್ರಶೇಖರ್, ತಾಲೂಕು ಅಧ್ಯಕ್ಷ ನಿರಂಜನ್‌ಬಾಬು, ಡಾ.ಅರವಿಂದ್, ಎಲ್‌ಐಸಿ ಜಗದೀಶ್, ಶಂಕರ್‌ನಂಜಪ್ಪ, ಕೈಲಾಶ್‌ಮೂರ್ತಿ, ಹಾಗನಹಳ್ಳಿ ಜಗದೀಶ್, ಬಸತ್‌ಕುಮಾರ್, ದೇವರಾಜು, ವಿಶ್ವನಾಥ್, ಅಂಕಯ್ಯ ಸೇರಿದಂತೆ ಹಲವರು ಹಾಜರಿದ್ದರು.ವೀರಶೈವ ಮಹಾಸಭಾ ವತಿಯಿಂದ ಬಸವಣ್ಣ ಜಯಂತಿ ಆಚರಣೆ
ಪಾಂಡವಪುರ:ಪಟ್ಟಣದ ಐದು ದೀಪವೃತ್ತದಲ್ಲಿ ತಾಲೂಕು ವೀರಶೈವ ಮಹಾಸಭಾದಿಂದ ಮುಖಂಡರು ಜಗಜ್ಯೋತಿ ಬಸವಣ್ಣ ಜಯಂತಿಯನ್ನು ಆಚರಿಸಿದರು.ಬಸವಣ್ಣ ಅವರ ಭಾವಚಿತ್ರಕ್ಕೆ ತಾಲೂಕು ಅಧ್ಯಕ್ಷ ನಿರಂಜನ್‌ಬಾಬು ಸೇರಿದಂತೆ ಮುಖಂಡರು ಪುಷ್ಪಾರ್ಚನೆ ಮಾಡಿದರು. ನಂತರ ನಿರಂಜನ್ ಬಾಬು ಮಾತನಾಡಿ, ಬಸವಣ್ಣ ಅವರು ಪ್ರಪಂಚ ಕಂಡ ಶ್ರೇಷ್ಠ ನಾಯಕರು, ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾನವ ಪ್ರಜ್ಞೆ ಮೂಡಿಸಿದ, ಮನುಕಲದ ಮೌಲ್ಯವನ್ನು ಬಿತ್ತಿದ್ದ ನಾಯಕರು ಎಂದು ಬಣ್ಣಿಸಿದರು.ಬಸವಣ್ಣ ಅವರ ಆದರ್ಶ, ತತ್ವಸಿದ್ದಾಂತಗಳು ಜಗತ್ತಿಗೆ ಮಾದರಿಯಾಗಿವೆ. ಹಾಗಾಗಿ ಪ್ರತಿಯೊಬ್ಬರು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದರು.
ಈ ವೇಳೆ ಮಹಾಸಭಾ ಕಾರ್ಯದರ್ಶಿ ಜಗದೀಶ್, ತಾಲೂಕು ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಎಸ್.ಮಂಜುನಾಥ್, ಶಂಕರನಂಜಪ್ಪ, ಸುರೇಶ್, ಬಸತ್‌ಕುಮಾರ್, ಎಲ್‌ಐಸಿ ಜಗದೀಶ್, ಕೈಲಾಶ್, ಲಿಂಗರಾಜು, ದೇವರಾಜು, ಶಿವಮಾದಪ್ಪ, ತುಂಗಕುಮಾರ್, ದಸಂಸಮುಖಂಡ ಅಂಕಯ್ಯ, ಸೇರಿದಂತೆ ಹಲವರು ಇದ್ದರು.