ಸಾರಾಂಶ
12ನೇ ಶತಮಾನದಲ್ಲಿ ಸಮಾಜ ಪರಿವರ್ತನೆಗೆ ಶ್ರಮಿಸಿದ ಬಸವಣ್ಣನವರ ಜ್ಞಾನ ಚಿಕ್ಕರಿದ್ದಾಗಲೇ ಅದ್ಭುತವಾಗಿತ್ತು ಎಂದು ಡಾ. ಪಂಡಿತ ಪುಟ್ಟರಾಜ ಕವಿ ಕವಾಯಿಗಳವರ ಶಿಷ್ಯರಾದ ಶಶಿಧರ ಶಾಸ್ತ್ರೀಗಳು ಹೇಳಿದರು.
ನರಗುಂದ:12ನೇ ಶತಮಾನದಲ್ಲಿ ಸಮಾಜ ಪರಿವರ್ತನೆಗೆ ಶ್ರಮಿಸಿದ ಬಸವಣ್ಣನವರ ಜ್ಞಾನ ಚಿಕ್ಕರಿದ್ದಾಗಲೇ ಅದ್ಭುತವಾಗಿತ್ತು ಎಂದು ಡಾ. ಪಂಡಿತ ಪುಟ್ಟರಾಜ ಕವಿ ಕವಾಯಿಗಳವರ ಶಿಷ್ಯರಾದ ಶಶಿಧರ ಶಾಸ್ತ್ರೀಗಳು ಹೇಳಿದರು.
ಅವರು ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯಮಠದ ಗದ್ದುಗೆ ಶಿಲಾ ಮಂಟಪ ಮತ್ತು ಗೋಪುರ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ನಡೆದ 8ನೇ ದಿನದ ಬಸವ ಪುರಾಣ ಪ್ರವಚನ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.ದಯವೇ ಧರ್ಮದ ಮೂಲವಯ್ಯ, ದಯವಿರಬೇಕು ಸಕಲ ಪ್ರಾಣಿಗಳಲ್ಲಿ ಎಂದು ಉದ್ಘರಿಸುತ್ತ ಉಪನಯನವನ್ನೆ ಧಿಕ್ಕರಿಸಿ ಕೂಡಲ ಸಂಗಮಕ್ಕೆ ನಡೆದ ಬಸವಣ್ಣ, ಅಲ್ಲಿ ಗುರು ಸಂಗಮನಾಥರನ್ನು ಕಂಡು ವಿವರಣೆ ನೀಡಿದರು.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂದ ಬಸವಣ್ಣ ಆಡಿದ ನುಡಿ ಕೇಳಿ, ಅಗಾಧ-ಅದ್ಭುತ ತೇಜಸ್ಸಿನ ಬಾಲಬಸವಣ್ಣನನ್ನು ಕಂಡ ಸಂಗಮನಾಥರು ಗುರುವಿನ ಗುಟ್ಟು ತಿಳಿದ ನಿಜ ಶಿಷ್ಯ ನೀನೆ ಎಂದು ಬಾಚಿ ತಬ್ಬಿ ಬಿಗಿದಪ್ಪಿದರು ಎಂದರು.ಆಧ್ಯಾತ್ಮದ ಹಸಿವಿನಿಂದ ಬಳಲಿ ಸಮಾನತೆ ಸಾರುವ ಮೂಲಕ ಕ್ರಾಂತಿ ಕಾರ್ಯಕ್ಕೆ ತನ್ನನ್ನು ತಾನು ಸಮರ್ಪಿಸುವ ದೃಢ ನಿರ್ಧಾರ ಮಾಡಿದ ಬಸವಣ್ಣ ಆಗಸದ ನಕ್ಷತ್ರವಾಗಿ ಬೆಳಗುವ ಸ್ಪಷ್ಟ ಸಂದೇಶ ಈ ನಾಡಿಗೆ ನೀಡಿದ್ದಾರೆ. ಹಾಗಾಗಿ ಬಸವಣ್ಣ ಅನುಯಾಯಿಗಳಾದ ನಾವು ಅವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಮ್ಮ ಸಮಾಜದ ಸುಧಾರಣೆಯಾಗಲು ಸಾಧ್ಯವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಂತಲಿಂಗ ಶ್ರೀಗಳು, ಕಾರ್ಯಕ್ರಮದ ಉಪಾಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ವೀರಯ್ಯ ದೊಡ್ಡಮನಿ, ಗುರುಬಸಯ್ಯ ಶೆಲ್ಲಿಕೇರಿ, ನಾಗನಗೌಡ ತಿಮ್ಮನಗೌಡ್ರ, ದ್ಯಾಮಣ್ಣ ಕಾಡಪ್ಪನವರ, ಆರ್.ಐ. ನದಾಫ್, ಹನಮಂತ ಕಾಡಪ್ಪನವರ, ಪ್ರಾಚಾರ್ಯ ಬಿ.ಆರ್. ಸಾಲಿಮಠ ಇದ್ದರು.