ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ಸಮಾಜದಲ್ಲಿ ಮಡುಗಟ್ಟಿದ ಕತ್ತಲೆಯನ್ನು ಅಳಿಸಿ ಹಾಕಿ ದೀನ ದಲಿತರ ಬದುಕಿಗೆ ಆಕಾಶ ದೀಪದಂತೆ ಪ್ರಜ್ವಲಿಸಿದ ಮಹಾನ್ ಕ್ರಾಂತಿಕಾರ ವಿಶ್ವಗುರು ಬಸವಣ್ಣನವರು ಎಂದು ಹಿರಿಯ ಸಾಹಿತಿ ಗುಂಡೇರಾವ ಮುಡುಬಿ ಹೇಳಿದರು.ತಾಲೂಕಿನಲ್ಲಿ ಪಟ್ಟಣದಲ್ಲಿ ತಾಲೂಕ ಆಡಳಿತ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ೮೯೧ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರ ನೇತೃತ್ವದಲ್ಲಿ ಸ್ಥಾಪಿತವಾಗಿರುವ ಅನುಭವ ಮಂಟಪ ಜಗತ್ತಿನಲ್ಲಿಯೇ ಮೊದಲನೆಯ ಸಂಸತ್ತು. ಮೇಲು-ಕೀಳು ಎನ್ನದೇ ಸ್ತ್ರೀ, ಪುರುಷರೆಂಬ ಭೇಧವಿಲ್ಲ. ಅಲ್ಲಿ ಸೇರಿದ ಶರಣ ಸಮೂಹ ಮುಕ್ತವಾಗಿ ಚರ್ಚಿಸಿ ಸಮಾಜಮುಖಿಯಾಗಿ ಎಂದೆಂದಿಗೂ ಪ್ರಸ್ತುತವಾದ ವಿಚಾರ ಧಾರೆಗಳು ದಾಖಲೆಯ ರೂಪದಲ್ಲಿ ವಚನಗಳಾಗಿ ಹೊರಹೊಮ್ಮಿದವು. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ಅತ್ಯಂತ ಅಪಾರ ಕೊಡುಗೆ ನೀಡಿದೆ. ಬಸವಣ್ಣನವರ ವಿಚಾರಗಳು ಕಾಯಕ ಮತ್ತು ದಾಸೋಹ ಎಲ್ಲರೂ ಹಂಚಿಕೊಳ್ಳಬೇಕು ಎಂದರು.
ವೀರಶೈವ ಸಮಾಜದ ಮುಖಂಡರಾದ ಅಜೀತ ಪಾಟೀಲ, ಚಿತ್ರಶೇಖರ ಪಾಟೀಲ, ಸುಭಾಷ ಸೀಳಿನ, ವೀರೇಶ ಎಂಪಳ್ಳಿ, ನೀಲಕಂಠ ಸೀಳಿನ, ಜ್ಯೋತಿ ಬೊಮ್ಮ, ನಾಗರಾಜ ಸೀಳಿನ, ನಾಗರಾಜ ಮಲಕೂಡ, ಗೋಪಾಲರಾವ ಕಟ್ಟಿಮನಿ, ಶಬ್ಬೀರ ಅಹ್ಮದ್, ಜಗನ್ನಾಥ ಗುತ್ತೆದಾರ, ಸಂತೋಷ ಕಡಗದ, ಸೂರ್ಯಕಾಂತ ಹುಲಿ, ರಾಜಶೇಖರ ಮಜ್ಜಗಿ, ಕಾಶಿನಾಥ ನಾಟೀಕಾರ, ಪ್ರೊ.ಶಾಂತವೀರ ಹೀರಾಪೂರ, ಪತ್ರಕರ್ತ ಶಾಮರಾವ ಚಿಂಚೋಳಿ, ನಂದಿಕುಮಾರ ಪಾಟೀಲ, ಎಸ್.ಎನ್ ದಂಡಿನಕುಮಾರ, ಭೀಮಶೆಟ್ಟಿ ಜಾಬಶೆಟಿ ಇನ್ನಿತರಿದ್ದರು. ಅಧ್ಯಕ್ಷತೆಯನ್ನು ಇಂಜನಿಯರ ಗಿರಿರಾಜ ಸಜ್ಜನ ವಹಿಸಿದ್ದರು.ಕಾಶಿನಾಥ ಹುಣಜೆ ಸ್ವಾಗತಿಸಿದರು.ಮಲ್ಲಿಕಾರ್ಜುನ ಪಾಲಾಮೂರ ನಿರೂಪಿಸಿದರು. ಸಂಜೀವಕುಮಾರ ಪಾಟೀಲ ವಂದಿಸಿದರು. ಇದೆ ಸಂದರ್ಭದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಅಲಂಕರಿಸಿ ಮತ್ತು ಎತ್ತುಗಳಿಗೆ ಹೂವುಗಳಿಂದ ಸಿಂಗರಿಸಿ ಗಾಂಧಿ ವೃತ್ತದಿಂದ ಬಸವೇಶ್ವರ ಚೌಕವರೆಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.