ವೈಚಾರಿಕ ನೆಲೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣ

| Published : May 02 2025, 12:15 AM IST

ಸಾರಾಂಶ

ಬಸವಾದಿ ಶರಣ ಪರಂಪರೆಯ ಪೈಕಿ ಜಗಜ್ಯೋತಿ ಬಸವಣ್ಣನವರು ಗಮನಾರ್ಹ ಕೊಡುಗೆ ನೀಡಿದವರು

ಸಿರುಗುಪ್ಪ: ಸಮಾಜದಲ್ಲಿರುವ ಅಸಮಾನತೆ ತೊಡೆದು ಹಾಕಿ ಸಮಾನತೆಯ ಸಮಾಜ ಕಟ್ಟಲು ಶ್ರಮಿಸಿದ ಬಸವಣ್ಣನವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸುವಂತಾಗಬೇಕು ಎಂದು ಆಧ್ಯಾತ್ಮಿಕ ಪ್ರವಚನಕಾರ ಶ್ರೀನಿರಂಜನ ಸ್ವಾಮಿ ಹೇಳಿದರು.

ನಗರದಲ್ಲಿ ತಾಲೂಕಾಡಳಿತ, ತಾಪಂ, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಸವಾದಿ ಶರಣ ಪರಂಪರೆಯ ಪೈಕಿ ಜಗಜ್ಯೋತಿ ಬಸವಣ್ಣನವರು ಗಮನಾರ್ಹ ಕೊಡುಗೆ ನೀಡಿದವರು. ಅಕ್ಕ ಮಹಾದೇವಿ, ಅಲ್ಲಂ ಪ್ರಭು ಅವರಂತಹ ಮಹಾನ್ ಸಮಾಜ ಸುಧಾರಕರು ಮತ್ತು ಕವಿಗಳನ್ನು ಮುನ್ನಲೆಗೆ ತಂದರು. ಬಸವೇಶ್ವರರು ಸಮಾಜದ ಮೌಢ್ಯತೆ ವಿರುದ್ಧ ಹೋರಾಟ ನಡೆಸಿದರು. ವೈಚಾರಿಕ ನೆಲೆಯಲ್ಲಿ ಸಮಾಜ ನಿರ್ಮಿಸಲು ಶ್ರಮಿಸಿದರು ಎಂದು ತಿಳಿಸಿದರು.

ಗುರುಬಸವ ಮಠದ ಬಸವಭೂಷಣ ಸ್ವಾಮಿಗಳು, ಬಸವ ಬಳಗ ಮುಖ್ಯಸ್ಥ ಶ್ರೀವೆಂಕಟಾಪುರ ಬಸವರಾಜಪ್ಪ ಶರಣರು, ಬಸವ ಬೃಂಗೇಶ್ವರ ಶರಣರು ಹಾಗೂ ಪ್ರಭಾರಿ ತಹಸಿಲ್ದಾರ್ ನರಸಪ್ಪ ಮಾತನಾಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ, ಪೌರಯುಕ್ತ ಗುರುಪ್ರಸಾದ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸನಗೌಡ, ಮಾಜಿ ಶಾಸಕರಾದ ಚಂದ್ರಶೇಖರಯ್ಯ ಸ್ವಾಮಿ, ಎಂ.ಎಸ್. ಸೋಮಲಿಂಗಪ್ಪ, ನಗರಸಭೆ ಅಧ್ಯಕ್ಷೆ ರೇಣುಕಮ್ಮ,ಉಪಾಧ್ಯಕ್ಷೆ ಯಶೋಧ ಮೂರ್ತಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಬಿ.ಆರ್ ಚನ್ನಬಸವನಗೌಡ, ವೀರಶೈವ ತರುಣ ಸಂಘ ಅಧ್ಯಕ್ಷ ಟಿ.ಎಂ. ಶಿವಕುಮಾರ್ ಸ್ವಾಮಿ, ಬಸವ ಬಳಗ ಟ್ರಸ್ಟ್ ಅಧ್ಯಕ್ಷ ಹೆಚ್.ಎಂ. ಶಿವಪ್ರಕಾಶ, ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ಕೊಡ್ಲೆ ಮಲ್ಲಿಕಾರ್ಜುನ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಟಿ. ನರಸಿಂಹ ನಾಯಕ, ಅಕ್ಕನ ಬಳಗದ ಅಧ್ಯಕ್ಷೆ ಸುಮಂಗಳ ಬಳಿಗಾರ, ಟಿ.ಎಂ. ಶಿವಕುಮಾರ್, ಆರ್.ಬಸವಲಿಂಗಪ್ಪ, ಜಿ.ಶಂಭುಲಿಂಗಯ್ಯ, ಮಲ್ಲಿಕಾರ್ಜುನ, ಮಹಾಂತೇಶಸ್ವಾಮಿ, ಟಿ.ಎಂ. ಸಿದ್ದಲಿಂಗಯ್ಯ ಸ್ವಾಮಿ, ವಿ. ಅಮರೇಶಪ್ಪ, ಜಡೆಸ್ವಾಮಿ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.