ಮನಕುಲಕ್ಕೆ ಬೆಳಕಾದ ಬಸವಣ್ಣನವರ ವಚನ

| Published : May 02 2025, 12:16 AM IST

ಸಾರಾಂಶ

ಬಸವಣ್ಣನವರ ಸಂದೇಶಗಳು ಮನುಕುಲಕ್ಕೆ ಸದಾ ಬೆಳಕಾಗಿವೆ. ಅಸಮಾನತೆ, ಭೇದಭಾವ, ಅಸ್ಪೃಶ್ಯತೆ ವಿರೋಧಿಸಿ ಸಾಮಾಜಿಕ ಸುಧಾರಣೆಗಳನ್ನು ಸಾಕಾರಗೊಳಿಸಿದ ಕ್ರಾಂತಿಪುರುಷ ಬಸವಣ್ಣ ಆಗಿದ್ದಾರೆ.

ಕುಕನೂರು:

ತಾಲೂಕಿನ ಮಂಗಳೂರು ಗ್ರಾಮದ ಬುದ್ಧ, ಬಸವ, ಅಂಬೇಡ್ಕರ್ ಸರ್ಕಲ್‌ನಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಿಸಲಾಯಿತು.

ಅರಳೆಲೆ ಹಿರೇಮಠದ ಶ್ರೀರೇವಣಸಿದ್ದಯ್ಯ ಸ್ವಾಮೀಜಿ ಅವರ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.

ಮುಖಂಡ ರವೀಂದ್ರನಾಥ ಕೊಟ್ರಪ್ಪ ತೋಟದ ಮಾತನಾಡಿ, ಬಸವಣ್ಣನವರ ಸಂದೇಶಗಳು ಮನುಕುಲಕ್ಕೆ ಸದಾ ಬೆಳಕಾಗಿವೆ. ಅಸಮಾನತೆ, ಭೇದಭಾವ, ಅಸ್ಪೃಶ್ಯತೆ ವಿರೋಧಿಸಿ ಸಾಮಾಜಿಕ ಸುಧಾರಣೆಗಳನ್ನು ಸಾಕಾರಗೊಳಿಸಿದ ಕ್ರಾಂತಿಪುರುಷ ಬಸವಣ್ಣ ಆಗಿದ್ದಾರೆ ಎಂದರು.

ಶಿಕ್ಷಕ ಸುರೇಶ ಮಡಿವಾಳರ ಮಾತನಾಡಿ, ಬಸವಣ್ಣನವರು ಧರ್ಮಕ್ಕೆ ವೈಚಾರಿಕ ವಿವೇಕದ ಸ್ಪರ್ಶ ನೀಡಿದರು. ಇಡೀ ಜಗತ್ತಿಗೆ ಅನ್ವಯವಾಗುವಂತೆ ಜೀವನದ ಸಂವಿಧಾನವನ್ನು ನೀಡಿದ ಮಾನವ ಸಂವಿಧಾನ ಶಿಲ್ಪಿ ಎಂದು ಹೇಳಿದರು.

ಗ್ರಾಮದ ಹಿರಿಯ ಶೇಖರಗೌಡ್ರ ಪೊಲೀಸ್‌ಪಾಟೀಲ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರು, ಉಪಾಧ್ಯಕ್ಷೆ ಅನ್ನಪೂರ್ಣ ಸುರೇಶ ಮ್ಯಾಗಳೇಶಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಶಂಕ್ರಪ್ಪ ಉಳ್ಳಾಗಡ್ಡಿ, ಗ್ರಾಪಂ ಸದಸ್ಯರಾದ ಯಂಕಣ್ಣ ಉಪ್ಪಾರ, ಶರಣಪ್ಪ ಎಮ್ಮಿ, ಶಂಕ್ರಪ್ಪ ನಿಂಗಾಪುರ, ವೀರೇಶ ವಿರೂಪಾಕ್ಷಪ್ಪ ಉಮಚಗಿ, ಅಬ್ದುಲಸಾಬ್‌ ಕಾಲಿಮಿರ್ಚಿ, ರೈಮಾನಸಾಬ್‌ ಗೋಡೆಕಾರ, ವೀರೇಶ ಗಟ್ಟೆಪ್ಪ ಉಮಚಗಿ, ವೀರೇಶ ಉಳ್ಳಾಗಡ್ಡಿ, ರುದ್ರಗೌಡ್ರ ಪಾಟೀಲ, ಬಸಪ್ಪ ಕರಡಿ, ಮಂಜುನಾಥ ಶಿವಲಿಂಗಪ್ಪ ವಿವೇಕಿ, ನಾಗರಾಜ ವಿವೇಕಿ, ಬಸವರಾಜ ಉಮಚಗಿ, ನಿಂಗನಗೌಡ್ರ ಪೋಲೀಸ್‌ಪಾಟೀಲ ಇತರರಿದ್ದರು.