ಬಸವಸಾಗರ ಜಲಾಶಯ ಭರ್ತಿ: ಮುಂದುವರೆದ ಕೃಷ್ಣಾರ್ಭಟ

| Published : Aug 21 2024, 12:34 AM IST

ಸಾರಾಂಶ

Basavasagar Reservoir Filling: Continued

ಕನ್ನಡಪ್ರಭ ವಾರ್ತೆ ಕೊಡೇಕಲ್

ಬಸವಸಾಗರ ಜಲಾಶಯದಿಕ್ಕೆ 45 ಸಾವಿರ ಕ್ಯೂಸೆಕ್‌ಗೂ ಹೆಚ್ಚಿನ ಒಳಹರಿವು ಬರುತ್ತಿರುವುದರಿಂದ ನದಿಗೆ ನೀರು ಹರಿಸಲಾಗುತ್ತಿದ್ದು, ಜಲಾಶಯದ ಕ್ರಸ್ಟ್‌ ಗೇಟ್‌ಗಳಿಂದ ಕೃಷ್ಣೆಯು ಭೋರ್ಗರೆಯುತ್ತ ನದಿಗೆ ಹರಿಯುತ್ತಿದೆ.ಕೊಡೇಕಲ್ ಸಮೀಪದ ಬಸವಸಾಗರ ಜಲಾಶಯವು ಈಗಾಗಲೇ ಭರ್ತಿಯಾಗಿದ್ದು, ಕಳೆದ ಆ.11ರಿಂದ ಇಳಿಮುಖವಾಗಿದ್ದ ನೀರಿನ ಒಳಹರಿವಿನಿಂದ ನದಿಗೆ ನೀರು ಬಿಡುವುದನ್ನು ನಿಲ್ಲಿಸಲಾಗಿತ್ತು. ಕಳೆದೆರಡು ದಿನಗಳಿಂದ ಸ್ಥಳೀಯವಾಗಿ ಮಳೆ ಸುರಿಯುತ್ತಿರುವುದರಿಂದಲೂ ಹಾಗೂ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಲಾಶಯದ ಸಂಗ್ರಹಮಟ್ಟವನ್ನು ಕಾಯ್ದುಕೊಂಡು 16 ಪ್ರಮುಖ ಕ್ರಸ್ಟ್‌ ಗೇಟ್‌ಗಳಿಂದ 43 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ: 33.31 ಟಿ.ಎಂ.ಸಿ ಸಾಮರ್ಥ್ಯದ ಹಾಗೂ 492.252 ಮೀ. ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ 292.25 ಮೀ. ತಲುಪಿದ್ದು 33.31 ಟಿಎಂಸಿ ನೀರಿನ ಸಂಗ್ರಹವಿದೆ.

----

ಫೋಟೊ: 20ವೈಡಿಆರ್‌9 : ಕೊಡೇಕಲ್ ಸಮೀಪದ ನಾರಾಯಣಪುರ ಬಸವಸಾಗರ ಜಲಾಶಯದಿಂದ ಮಂಗಳವಾರ 16 ಕ್ರಸ್ಟ್‌ಗೇಟ್‌ಗಳ ಮೂಲಕ 43 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ.