ಸಾರಾಂಶ
ಬ್ಯಾಂಕಿನ ಷೇರುದಾರರಿಗೆ ನೀಡಲಿರುವ ಬೆಳ್ಳಿನಾಣ್ಯವನ್ನು ರಾಜ್ಯ ಸಹಕಾರಿ ಸಚಿವ ರಾಜಣ್ಣ ಬಿಡುಗಡೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಬ್ಯಾಂಕಿನ ಗ್ರಾಹಕರ ಸೇವಾ ಕೇಂದ್ರವನ್ನು ಶಿಕಾರಿಪುರ ಕ್ಷೇತ್ರ ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್, ರಾಜ್ಯ ಸಹಕಾರ ಬ್ಯಾಂಕ್‌ಗಳ ಅಧ್ಯಕ್ಷ ಜಿ.ಟಿ. ದೇವೆಗೌಡ, ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ
ಇಲ್ಲಿಯ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ಶತಮಾನೋತ್ಸವ ಹಾಗೂ 111ನೇ ವಷಾರ್ಚರಣೆಯನ್ನು 27ರಂದು ಹಮ್ಮಿಕೊಳ್ಳಲಾಗಿದೆ ಎಂದು ಶಿರಾಳಕೊಪ್ಪ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಕುಪ್ಪಪೇಲೂರ ವೇದಮೂರ್ತಿ ಹೇಳಿದರು.ಶಿರಾಳಕೊಪ್ಪದ ಬ್ಯಾಂಕ್ ಸಭಾಂಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 27ರಂದು ಸೊರಬ ರಸ್ತೆಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಅದ್ಧೂರಿ ಸಮಾರಂಭ ನಡೆಯಲಿದೆ. ಅಂದು ಬ್ಯಾಂಕ್ ಆವರಣದಲ್ಲಿ ನಡೆಯುವ ಬಸವೇಶ್ವರ ಪುತ್ಥಳಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆನಾವರಣ ಮಾಡಲಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಲ್ಲದೇ, ರಾಜ್ಯದ ಹಲವಾರು ಸಚಿವರು, ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಬ್ಯಾಂಕಿನ ಷೇರುದಾರರಿಗೆ ನೀಡಲಿರುವ ಬೆಳ್ಳಿನಾಣ್ಯವನ್ನು ರಾಜ್ಯ ಸಹಕಾರಿ ಸಚಿವ ರಾಜಣ್ಣ ಬಿಡುಗಡೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಬ್ಯಾಂಕಿನ ಗ್ರಾಹಕರ ಸೇವಾ ಕೇಂದ್ರವನ್ನು ಶಿಕಾರಿಪುರ ಕ್ಷೇತ್ರ ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್, ರಾಜ್ಯ ಸಹಕಾರ ಬ್ಯಾಂಕ್‌ಗಳ ಅಧ್ಯಕ್ಷ ಜಿ.ಟಿ. ದೇವೆಗೌಡ, ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಕಾರ್ಯಕ್ರಮದ ಸಾನ್ನಿಧ್ಯವನ್ನು ಸ್ಥಳೀಯ ವಿರಕ್ತ ಮಠದ ಸ್ವಾಮೀಜಿ, ಕೋರಿ ಟೋಪಿ ಸಿದ್ದೇಶ್ವರ ಸ್ವಾಮೀಜಿ ವಹಿಸಲಿದ್ದಾರೆ. ಬ್ಯಾಂಕಿಗೆ ಸೇವೆ ಸಲ್ಲಿಸಿದ ಹಿರಿಯರನ್ನು, ನಿವೃತ್ತ ಸಿಬ್ಬಂದಿಯನ್ನು ಸನ್ಮಾನಿಸಲಾಗುವುದು. ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ಸದಸ್ಯರಿಗೆ ಹಾಗೂ ಜನರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ವೇದಮೂರ್ತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಮಹಾಗಣಪತಿ, ನಿರ್ದೇಶಕರಾದ ಡಾ.ಮುರಘರಾಜ್, ಎಚ್.ಎಂ. ಗಂಗಮ್ಮ, ನಿವೇದಿತಾ ರಾಜು, ಬಿ.ವಿ. ಶೇಷಗಿರಿ, ಚಂದ್ರಮೌಳೇಶ್ವರ, ನಟರಾಜ್, ಪ್ರಭುಲಿಂಗಪ್ಪ, ವಿ.ಸಿ. ಅಶೋಕ, ಆನಂದಪ್ಪ, ಉಮೇಶ್ ಹಾಜರಿದ್ದರು.- - - -26ಕೆಎಸ್ ಎಚ್ ಆರ್1:
ಶಿರಾಳಕೊಪ್ಪ ಬಸವೇಶ್ವರ ಬ್ಯಾಂಕ್ ಸಭಾಭವನದಲ್ಲಿ ಅಧ್ಯಕ್ಷ ವೇದಮೂರ್ತಿ ಮಾತನಾಡಿದರು. ಉಪಾಧ್ಯಕ್ಷ ಮಹಾಗಣಪತಿ, ಗಂಗಮ್ಮ ಇದ್ದರು.