ಸಾರಾಂಶ
- ಬಸವ ಜಯಂತಿ ಕಾರ್ಯಕ್ರಮದಲ್ಲಿ ಚಿಂತಕ ಎ.ಡಿ.ನಾಗಲಿಂಗಪ್ಪ ಸಲಹೆ - - -
ಕನ್ನಡಪ್ರಭ ವಾರ್ತೆ ಜಗಳೂರುಸಾಮಾಜಿಕ ಸಮಾನತೆ ಹಾಗೂ ಪ್ರಜಾಪ್ರಭುತ್ವ ಕಲ್ಪನೆಯ ಪಿತಾಮಹಾ ಜಗಜ್ಯೋತಿ ಬಸವೇಶ್ವರ ಅವರ ವಿಚಾರಧಾರೆಗಳನ್ನು ಪ್ರತಿ ಮನೆ ಮನೆಗೂ ತಲುಪಬೇಕು. ಆಗ ಮಾತ್ರ ಕಲ್ಯಾಣ ರಾಜ್ಯವಾಗಲು ಸಾಧ್ಯ ಎಂದು ಪ್ರಗತಿಪರ ಚಿಂತಕ, ಪ್ರಾಂಶುಪಾಲ ಎ.ಡಿ.ನಾಗಲಿಂಗಪ್ಪ ಹೇಳಿದರು.
ಪಟ್ಟಣದ ಪ್ರೇರಣಾ ಸಮಾಜ ಚರ್ಚ್ ಸಭಾಂಗಣದಲ್ಲಿ ತಾಲೂಕು ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಿದ್ದ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.12ನೇ ಶತಮಾನದಲ್ಲಿ ತುಂಬಿ ತುಳುಕುತ್ತಿದ್ದ ಅಂಧಕಾರ ಮೌಢ್ಯಾಚರಣೆ, ಜಾತಿಭೇದ, ಮೇಲು-ಕೀಳು ಭಾವನೆಗಳ ವಿರುದ್ಧ ಬಸವೇಶ್ವರ ಹೋರಾಟ ನಡೆಸಿದರು. ಸಮಸಮಾಜ ನಿರ್ಮಾಣ ಮಾಡುವ ಕನಸಿನೊಂದಿಗೆ ಅನುಭವ ಮಂಟಪ ನಿರ್ಮಿಸಿದ ಅವರು, ಭವಿಷ್ಯದ ಪ್ರಜಾಪ್ರಭುತ್ವ ಕಲ್ಪನೆಯನ್ನು ಹೊರತಂದರು. ವಚನಗಳ ಮೂಲಕ ಲೋಕದ ಡೊಂಕು ತಿದ್ದಲು ಪ್ರಯತ್ನಿಸಿದರು. ಸಮಾಜದಲ್ಲಿ ಅಂಧಕಾರದ ವಿರುದ್ಧ ಹೋರಾಡಿದ ಫಲವಾಗಿ ಮನುವಾದಿಗಳ ಕುತಂತ್ರಕ್ಕೆ ಬಸವಣ್ಣ ಬಲಿಯಾದರೂ, ನಿಜವಾದ ವಿಶ್ವಗುರು ಎನಿಸಿದ್ದಾರೆ ಎಂದರು.
ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಸಿ.ತಿಪ್ಪೇಸ್ವಾಮಿ ಮಾತನಾಡಿ, ಬಸವಣ್ಣ ಅವರನ್ನು ಕೇವಲ ವಚನದಿಂದ ಮಾತ್ರ ನೋಡಬಾರದು. ಅವರು ಸಮಾಜದಲ್ಲಿ ಹುಟ್ಟದೇ ಇದ್ದಿದ್ದರೆ ಅಂಬೇಡ್ಕರ್ ಅಂತ ನಾಯಕರಿಗೆ ಸಂವಿಧಾನ ಬರೆಯಲು ಸ್ಫೂರ್ತಿ ಆಗುತ್ತಿರಲಿಲ್ಲ ಎಂದರು.ವಕೀಲ ಸಣ್ಣೋಬಯ್ಯ, ವಕೀಲರಾದ ರಂಗಸ್ವಾಮಿ, ರುದ್ರೇಶ್, ಮಹಾಂತೇಶ್, ತಿಪ್ಪೇಸ್ವಾಮಿ, ಡಿಎಸ್ಎಸ್ ಸಂಚಾಲಕ ಬಿ.ಸತೀಶ್, ಪ್ರಗತಿಪರ ಹೋರಾಟಗಾರ ಆರ್.ಓಬಳೇಶ್, ರಾಜಪ್ಪ, ಮಂಜಪ್ಪ, ಬಸವಣ್ಣ ಅವರ ವಿಚಾರಧಾರೆ ಮತ್ತು ಮೌಢ್ಯಮುಕ್ತ, ಸಮ ಸಮಾಜ ನಿರ್ಮಾಣ ಕುರಿತು ಮಾತನಾಡಿದರು.
ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕ ಮರೇನಹಳ್ಳಿ ಬಸವರಾಜ್, ಧನ್ಯಕುಮಾರ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಮಂಜುನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕೆಂಚೋಳ್, ಜಿಲ್ಲಾ ಸಮಿತಿ ಸದಸ್ಯರಾದ ಎಂ.ಎಸ್. ನಜೀರ್ ಅಹಮದ್, ನಾಯಕ ಸಮಾಜದ ಕಾರ್ಯದರ್ಶಿ ತಿಪ್ಪೇಸ್ವಾಮಿ, ನೂರ್ ಅಹಮದ್, ಕುಮಾರ ನಾಯ್ಕ, ಓಬಳೇಶ್ ರಮೇಶ್, ಇಂದಿರಾ ಗುರುಸ್ವಾಮಿ, ಗೌರಿಪುರ ರಾಜಣ್ಣ, ವಕೀಲರು ಭೂಪತಿ, ಗುತ್ತಿದುರ್ಗ ರುದ್ರೇಶ್, ಸತೀಶ್, ಹನುಮಂತಪ್ಪ, ಹಲವರು ಇದ್ದರು.- - - -10 ಜೆ.ಜಿ.ಎಲ್2:
ಜಗಳೂರು ಪಟ್ಟಣದ ಪ್ರೇರಣಾ ಸಮಾಜ ಚರ್ಚ್ ಸಭಾಂಗಣದಲ್ಲಿ ತಾಲೂಕು ಮಾನವ ಬಂಧುತ್ವ ವೇದಿಕೆಯಿಂದ ಬಸವೇಶ್ವರ ಜಯಂತಿ ಆಚರಿಸಲಾಯಿತು.