ಬಸವಾಪಟ್ಟಣದಲ್ಲಿ ವೀರಶೈವ ಯುವಕ ಬಳಗದಿಂದ ಬಸವೇಶ್ವರ ವರ್ಧಂತಿ

| Published : May 13 2024, 12:09 AM IST

ಬಸವಾಪಟ್ಟಣದಲ್ಲಿ ವೀರಶೈವ ಯುವಕ ಬಳಗದಿಂದ ಬಸವೇಶ್ವರ ವರ್ಧಂತಿ
Share this Article
  • FB
  • TW
  • Linkdin
  • Email

ಸಾರಾಂಶ

೧೨ನೇ ಶತಮಾನದ ಯುಗಪುರಷ ಬಸವನ ಬಾಗೇವಾಡಿ ಶ್ರೀ ಬಸವೇಶ್ವರರ ೮೯೨ನೇ ಜನ್ಮದಿನವನ್ನು ಬಸವಾಪಟ್ಟಣ ಗ್ರಾಮದ ವೀರಶೈವ ಯುವಕರ ಬಳಗದ ವತಿಯಿಂದ ಅಚರಿಸಲಾಯಿತು.

ಬಸವಾಪಟ್ಟಣ: ಸಮಾನತೆಯ ಹರಿಕಾರ ಸಮಾಜದ ಅಂಕುಡೊಂಡುಗಳನ್ನು ತಿದ್ದಿ ಮಹಿಳೆಯರ ಸಮಾನ ಹಕ್ಕುಗಳನ್ನು ನೀಡಿದ, ಆಧುನಿಕ ಪ್ರಜಾಪ್ರಭುತ್ವಕ್ಕೆ ತಳಹದಿ ಹಾಕಿದ ೧೨ನೇ ಶತಮಾನದ ಯುಗಪುರಷ ಬಸವನ ಬಾಗೇವಾಡಿ ಶ್ರೀ ಬಸವೇಶ್ವರರ ೮೯೨ನೇ ಜನ್ಮದಿನವನ್ನು ಬಸವಾಪಟ್ಟಣ ಗ್ರಾಮದ ವೀರಶೈವ ಯುವಕರ ಬಳಗದ ವತಿಯಿಂದ ಅಚರಿಸಲಾಯಿತು.

ಬೆಳಗ್ಗಿನಿಂದಲೇ ಪೂಜಾದಿ ವಿಶೇಷ ಕೈಂಕರ್ಯಗಳಾದ ಕಳಶಸ್ಥಾಪನೆ, ರುದ್ರಾಭಿಷೇಕ, ಬಿಲ್ವಾರ್ಚನೆ, ಅಷ್ಟೋತ್ತರ ಸಹಸ್ರನಾಮ, ಮಹಾಮಂಗಳಾರತಿ, ಅಗಮಿಸಿದ ಭಕ್ತರಿಗೆ ಪಾನಕವನ್ನು ವಿತರಣೆ ಮಾಡಲಾಯಿತು. ಷಡ್ಬವರಹೀತೇಶ್ವರ ಸಂಘದ ಅಧ್ಯಕ್ಷ ಬಸವರಾಜು, ಹಿರಿಯರಾದ ಮೃತ್ಯುಂಜಯ, ದೇವರಾಜು, ಶ್ರೀಕಂಠ, ಸತೀಶ್, ಸುರೇಶ್, ಪ್ರಭು, ರಾಜು, ಯುವಕರಾದ ಶಶಾಂಕ್, ಮಂಜು, ಅಭಿ, ರಾಜು ಟಿ.ಸಿ, ಮಹೇಶ್, ಸಂತೋಷ್, ಸುಮುಕ್, ಅಮೋಘ, ಪ್ರಜ್ವಲ್ ಇತರರು ಹಾಜರಿದ್ದರು.ಅರಸೀಕೆರೆಯಲ್ಲಿ ಬಸವೇಶ್ವರ, ಮರುಳಸಿದ್ದೇಶ್ವರ ಉತ್ಸವ

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಕಣಕಟ್ಟೆ ಹೋಬಳಿ ಯಾಚಗೊಂಡನಹಳ್ಳಿ ಗ್ರಾಮದಲ್ಲಿ ಬಸವೇಶ್ವರ ಜಯಂತಿ ಅಂಗವಾಗಿ ನಡೆದ ಶ್ರೀ ಬಸವೇಶ್ವರ ಸ್ವಾಮಿ, ಕುಪ್ಪೂರು ಗದ್ದಿಗೆ ಮರುಳಸಿದ್ದೇಶ್ವರ ಸ್ವಾಮಿ ಹಾಗೂ ಮಾಡಾಳು ತಿರುಮಲೇಶ್ವರ ಸ್ವಾಮಿ ಉತ್ಸವವು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಭಾನುವಾರ ಮಧ್ಯಾಹ್ನ ವಿಜೃಂಭಣೆಯಿಂದ ನಡೆಯಿತು ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ದೇವಾಲಯ ಹಾಗೂ ಗ್ರಾಮದ ಬೀದಿಗಳನ್ನು ತಳಿರು ತೋರಣ ಹಾಗೂ ಬಾಳೆ ಗಿಡಗಳಿಂದ ಶೃಂಗರಿಸಲಾಗಿತ್ತು. ಈ ಬಾರಿಯ ವಿಶೇಷತೆ ಎಂದರೆ ಕುಪ್ಪೂರು ಗದ್ದಿಗೆ ಮಠದ ಮರಳು ಸಿದ್ದೇಶ್ವರ ಸ್ವಾಮಿ ಮೂರ್ತಿ ಗ್ರಾಮಕ್ಕೆ ಆಗಮಿಸುತ್ತದೆ ಎಂಬ ಸೂಚನೆ ಇದ್ದುದರಿಂದ ಗ್ರಾಮದಿಂದ ವಿವಾಹಿತರಾಗಿ ಹೋಗಿದ್ದ ಹೆಣ್ಣುಮಕ್ಕಳು ಉತ್ಸವವನ್ನು ಕಣ್ತುಂಬಿಕೊಳ್ಳಲು ತವರು ಮನೆಗೆ ಬಂದಿದ್ದರು. ಇತ್ತ ದೇವಾಲಯದಲ್ಲಿ ಬಗೆ ಬಗೆಯ ಹೂಗಳಿಂದ ಅಲಂಕೃತಗೊಂಡಿದ್ದ ಶ್ರೀ ಬಸವೇಶ್ವರ ಸ್ವಾಮಿ ಗೋಪುರ ಗದ್ದಿಗೆ ಮರಳು ಸಿದ್ದೇಶ್ವರ ಸ್ವಾಮಿ, ಮಾಡಾಳು ತಿರುಮಲೇಶ್ವರ ಸ್ವಾಮಿ ಉತ್ಸವ ಮೂರ್ತಿಗಳನ್ನು ಪುಷ್ಪಾಲಂಕೃತವಾದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಅರ್ಚಕರು ಮಹಮಂಗಳಾರತಿ ಸಲ್ಲಿಸುತ್ತಿದ್ದಂತೆ ಉತ್ಸವಕ್ಕೆ ಚಾಲನೆ ನೀಡಲಾಯಿತು.ಮಂಗಲ ಕರಡಿ ವಾದ್ಯ ಹಾಗೂ ನಂದಿ ಧ್ವಜ ಕುಣಿತದೊಂದಿಗೆ ತೆರಳಿದ ಉತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಕಣ್ತುಂಬಿಕೊಂಡು ಧನ್ಯತಾಭಾವ ಹೊಂದಿದರು. ಉತ್ಸವ ವೀಕ್ಷಿಸಲು ಮಾಡಾಳು ಪಿ.ಹೊಸಳ್ಳಿ, ಕಿತ್ತನಕೆರೆ, ಕಡಲ ಮಗೆ, ಡಿಎಂ ಕುರ್ಕೆ, ಚಿಕ್ಕುಂಡಿಹಳ್ಳಿ, ದಿಬ್ಬೂರು ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು. ಉತ್ಸವದ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.ಬಸವಣ್ಣರ ಆದರ್ಶ, ತತ್ವ ಎಂದಿಗೂ ಅಮರ: ಮಾಜಿ ಶಾಸಕ ಎ.ಟಿ.ರಾಮಸ್ವಾಮಿ

ಬಸವಾಪಟ್ಟಣ: ೧೨ನೇ ಶತಮಾನದ ಯುಗಪುರುಷ, ಸಮಾನತೆಯ ಹರಿಕಾರ, ಮಹಿಳಾ ಸಮಾನತೆ, ಸಾಮಾಜಿಕ ಅಸಮತೋಲನದ ವಿರುದ್ದ ಹೋರಾಡಿದ ಮಹಾನ್ ಪುರುಷ ಬಸವಣ್ಣನವರ ೮೯೨ನೇ ಜನ್ಮದಿನದ ಅಂಗವಾಗಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅರಕಲಗೂಡು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎ.ಟಿ.ರಾಮಸ್ವಾಮಿ ಬಸವಣ್ಣನವರ ಕಾಯಕನಿಷ್ಠೆ, ಕಾಯಕವೇ ಕೈಲಾಸ. ನುಡಿದಂತೆ ನಡೆಯುವ ಅವರ ತತ್ವ ಅದರ್ಶಗಳು, ಸಮಾನತೆಯ ಭಾವನೆ ಇಂದಿಗೂ ಎಂದೆಂದಿಗೂ ಅನುಕರಣಿಯ ಎಂದು ತಿಳಿಸಿದರು. ಅವರ ತತ್ವ, ಆದರ್ಶ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಕೊಳ್ಳಬೇಕು. ಪ್ರತಿಯೊಬ್ಬರು ಕಾರ್ಯನಿಷ್ಠರಾಗಿ ಇರಬೇಕು ಎಂದರು. ಎಲ್ಲರಿಗೂ ಬಸವ ಜಯಂತಿಯ ಶುಭಾಷಯಗಳನ್ನು ಕೋರಿದರು. ಇದೇ ವೇಳೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ವಿರೇಶ್, ಮ್ಯತ್ಯುಂಜಯ, ರವಿ, ಪ್ರಭಾಕರ, ವಿರೂಪಾಕ್ಷ, ಯಶ್ವಂತ್, ಎ.ಟಿ.ರಾಮಸ್ವಾಮಿ ಹಾಜರಿದ್ದರು.