ಕನ್ನಡಪ್ರಭ ವಾರ್ತೆ ಟಿ. ನರಸೀಪುರಜಗಜ್ಯೋತಿ ಬಸವಣ್ಣನವರ ಜಯಂತಿ ಮಹೋತ್ಸವವು ನಮ್ಮೆಲ್ಲರಿಗೂ ಆತ್ಮಪರಿಶೀಲನೆಗೆ, ಸಮಾಜಮುಖಿ ಚಿಂತನೆಗೆ ಪ್ರೇರಣೆಯಾಗುವ ಪವಿತ್ರ ಕ್ಷಣವಾಗಿದೆ ಎಂದು ಹಲವಾರ ಮುಡುಕನಪುರ ಮಠದ ಶ್ರೀ ಷಡಕ್ಷರ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.ಶ್ರೀ ಬಸವೇಶ್ವರ ಗೆಳೆಯರ ಬಳಗದ ವತಿಯಿಂದ ತಾಲೂಕಿನ ಹಲವಾರ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿ ಅವರು ಮಾತನಾಡಿದರು.ಬಸವಣ್ಣನವರು ಕೇವಲ ಒಂದು ಧರ್ಮದ ಅಥವಾ ಸಮುದಾಯದ ನಾಯಕರಲ್ಲ, ಅವರು ಸಮಸ್ತ ಮಾನವಕುಲಕ್ಕೆ ದಾರಿದೀಪ. ಕಾಯಕವೇ ಕೈಲಾಸ ಎಂಬ ಅವರ ವಚನವು ಪ್ರತಿಯೊಬ್ಬರ ಬದುಕಿಗೆ ಶ್ರಮದ ಮಹತ್ವವನ್ನು ಸಾರುತ್ತದೆ ಎಂದರು. ಅರೆ ಬೊಮ್ಮನಹಳ್ಳಿ ಪಾರಮಾರ್ಥಿಕ ಮಠದ ಪೀಠಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು.

ರೈತ ಮುಖಂಡ ಕುಮಾರಸ್ವಾಮಿ, ನೆರಗ್ಯಾತನಹಳ್ಳಿ ಮಠದ ಶ್ರೀ ಶಿವಕುಮಾರ ಸ್ವಾಮಿ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಎಂ. ಶಿವಮಲ್ಲಪ್ಪ, ಮಹದೇವ ಸ್ವಾಮಿ, ರಾಜಶೇಖರ, ನಿಂಗಪ್ಪ, ಮಾಯಪ್ಪ, ಸಿದ್ದಲಿಂಗಸ್ವಾಮಿ ಇದ್ದರು.