ಕನ್ನಡಪ್ರಭ ವಾರ್ತೆ ಕೋಲಾರಕೋಮುಲ್‌ನಲ್ಲಿ ಅಧ್ಯಕ್ಷ ಕೆ.ವೈ. ನಂಜೇಗೌಡ ನಡೆಸಿರುವ ಅಕ್ರಮ ೩೦೦ ಕೋಟಿಯಲ್ಲ, ಬದಲಾಗಿ ೫೦೪ ಕೋಟಿ. ಇದನ್ನು ನಾನು ಹೇಳುತ್ತಿಲ್ಲ, ಅವರ ಪಕ್ಷದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸಿಎಂಗೆ ಮನವಿ ನೀಡಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಈ ಸರ್ಕಾರ ತನಿಖೆ ಮಾಡಿಸುವುದಿಲ್ಲ, ಶಕ್ತಿಮೀರಿ ಸಿಬಿಐ ತನಿಖೆಗೆ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡ ಕಿಡಿಕಾರಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಮುಲ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಲೋಕಾಯುಕ್ತರಿಗೆ ನೀಡಿರುವ ದೂರಿನಿಂದ ಪ್ರಯೋಜನವಿಲ್ಲ. ಚಲಪತಿ, ಗುಳಿಗಾನಹಳ್ಳಿ ನಾಗರಾಜ್ ಅವರೆಲ್ಲಾ ಪತ್ರಿಕಾಗೋಷ್ಠಿ ಮಾಡಿ ಹಗರಣ ತೆರೆದಿಟ್ಟಿದ್ದಾರೆ. ಕೋಲಾರದಲ್ಲಿ ಗಂಡಸರು ಹುಟ್ಟಿಕೊಂಡಿದ್ದಾರೆ. ಅವರಿಗೆ ಸನ್ಮಾನ ಮಾಡಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಅವರೇ ೩೦೦ ಕೋಟಿ ಹಗರಣ ಎಂಬ ಆರೋಪ ಒಪ್ಪಿಕೊಂಡಿದ್ದಾರೆ. ಮಸಾಜ್ ಎಂಬುದು ಗೊತ್ತಿಲ್ಲ ಎನ್ನುತ್ತಾರೆ. ಶಾಂಗ್ರಿಲಾ ಹೋಟೆಲ್‌ನಲ್ಲಿ ಅವರ ಅಡ್ಮಿನ್ ನಾಗೇಶ್ ಕೊಠಡಿ ಬುಕ್ ಮಾಡಿದ್ದು ಏಕೆ? ನೇಮಕಾತಿಯಲ್ಲಿ ಹಗರಣ ನಡೆದಿದೆ. ಇದೆ ಫ್ಲಾಟ್‌ನಲ್ಲಿ ಬುಕ್‌ಲೇಟ್‌ಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಮಂಜುನಾಥಗೌಡ ಆರೋಪಿಸಿದರು.ಮಾಲೂರಿನಲ್ಲಿ ೩೨ ಡೇರಿಗಳನ್ನು ಸೂಪರ್ ಸೀಡ್ ಮಾಡಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಆಗಿರುವುದಾಗಿ ತಿಳಿಸಿದ್ದೀರಿ. ನೀವು ಚುನಾವಣೆ ನಡೆಸಿದಂತೆ ನಾನೂ ೨೦೨೮ರ ನಂತರ ಚುನಾವಣೆ ನಡೆಸುತ್ತೇನೆ ಎಂದು ಅವರು ಸವಾಲು ಹಾಕಿದರು.
೨೦೧೩ ನಾನು ನಿನ್ನನ್ನು ನಿರ್ದೇಶಕರಾಗಿ ಮಾಡಿದ್ದೇನೆ. ನೀನು ಶಾಸಕರಾಗಲು ಕಾರಣ ಮುಸ್ಲಿಮರು ಹಾಗೂ ಬಿ ಫಾರಂ ಕೊಡಿಸಿದ ಕೆ.ಎಚ್. ಮುನಿಯಪ್ಪರಿಗೆ ಪಾದಪೂಜೆ ಮಾಡಬೇಕು. ನಿನ್ನ ಅಕ್ರಮಗಳು ಸಿಬಿಐ ಮೂಲಕ ಸಾಬೀತು ಆಗುತ್ತವೆ. ನೀನು ನನ್ನನ್ನು ಶಾಸಕರನ್ನಾಗಿ ಮಾಡುವುದು ಬೇಡ. ನೀನು ನನ್ನನು ಶಾಸಕನನ್ನಾಗಿ ಮಾಡಿದರೆ ನೇಣು ಹಾಕಿಕೊಳ್ಳುತ್ತೇನೆ ಅಥವಾ ವಿದೇಶಕ್ಕೆ ಓಡಿ ಹೋಗುತ್ತೇನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಪ್ರಮಾಣ ಮಾಡುವೆ:ಕೋಮುಲ್‌ನಲ್ಲಿ ಅಕ್ರಮ ನಡೆದಿದೆ ಎಂದು ನಾನು ದೇವರ ಮುಂದೆ ಪ್ರಮಾಣ ಮಾಡುತ್ತೇನೆ. ಇಲ್ಲಿಗೇ ಪ್ರಸಾದ ತರಿಸುತ್ತೇನೆ. ಕೋಮುಲ್‌ನಲ್ಲಿ ಆಕ್ರಮ ನಡೆಸಿಲ್ಲ ಎಂದು ಹೇಳಲಿ, ಕೋಮುಲ್ ನಿರ್ದೇಶಕರಿಗೆ ಚಿನ್ನದ ನಾಣ್ಯ ನೀಡಲು ಎಲ್ಲಿಂದ ಹಣ ಬಂತು. ನಿರ್ದೇಶಕರು ಚಿನ್ನದ ನಾಣ್ಯ ಬಿಸಾಕಬೇಕು. ಇಲ್ಲದಿದ್ದರೆ ಅಧ್ಯಕ್ಷರು ನಿಮಗೆ ಕೆಟ್ಟ ಹೆಸರು ತರುತ್ತಾರೆ. ಹಗರಣ ಹೊರಬರುತ್ತದೆ ಎಂದು ಕೋಮುಲ್ ಒಳಗಡೆ ಸ್ಮಾರ್ಟ್ ಫೋನ್ ನಿಲ್ಲಿಸಿದ್ದಾರೆ ಎಂದು ಅವರು ಆರೋಪಿಸಿದರು.ಆಪ್ತ ಶಾಸಕರಿಗೆ ಅಗಲಕೋಟೆ ವಿಚಾರ ಈಗ ಗೊತ್ತಾಗಿದೆಯಂತೆ. ಇಷ್ಟು ದಿನ ಮಾಡಿದ್ದು ಏನು? ಆ ಸ್ಥಳವನ್ನು ನಾವು ಉಳಿಸುತ್ತೇವೆ. ಇನ್ನೂ ಜಾಸ್ತಿ ಜಾಗ ಉಳಿಸುತ್ತೇವೆ. ಈ ಪ್ರಕರಣದಲ್ಲಿ ನಾನು ಹೂಡಿ ವಿಜಯಕುಮಾರ್‌ರನ್ನೂ ಬಿಟ್ಟಿಲ್ಲ. ಜಲ್ಲಿ ಕ್ರಷರ್‌ನಲ್ಲಿ ೨೦೦ ಕೋಟಿ ಹಗರಣ ಮಾಡಿದೆ. ಮುಂದಿನ ದಿನಗಳಲ್ಲಿ ಅದನ್ನು ಬಯಲಿಗೆ ತರುತ್ತೇನೆ ಎಂದರು ತರಾಟೆಗೆ ತೆಗೆದುಕೊಂಡರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಟಿ.ವಿ.ಕೃಷ್ಣಪ್ಪ, ವಕೀಲ ಶ್ರೀನಿವಾಸ್, ನಂದೀಶ್ ಇದ್ದರು.