ರಾಮನಗರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಮನಗರ ತಾಲೂಕು ಶಾಖೆಯ ಕಾರ್ಯಕಾರಿ ಸಮಿತಿಯ ಚುನಾವಣೆ ಶಾಂತಿಯುತವಾಗಿ ನಡೆಯಿತು.
ಸಂಘದ ಮಹಿಳಾ ಮೀಸಲು 4 ಸ್ಥಾನಗಳಿಂದ ಕೆ.ಆರ್.ಗಂಗಾಂಬಿಕ, ಬಿ.ವಿ. ಯೋಗಿತಾ, ಎಸ್.ಜಗದಾಂಬ, ಸಿ.ಶಶಿಕಲಾ. ಹಿರೇಮಠ, ಸಾಮಾನ್ಯ ವರ್ಗದ 7 ಸ್ಥಾನಗಳಿಂದ ಜಿ.ಎಸ್. ಶಿವರುದ್ರಯ್ಯ, ಸಿ.ವೀರೇಂದ್ರ ಕುಮಾರ್, ಎಚ್.ಹನುಮಯ್ಯ, ಪಿ.ವಾಸುದೇವ, ಎಚ್.ಕುಮಾರ್, ಎಲ್.ಜಿ.ಬಸವೇಗೌಡ ಆಯ್ಕೆಯಾಗಿದ್ದಾರೆ. ಮರುಳಸಿದ್ದಯ್ಯ ಮತ್ತು ಬಿ.ಎಲ್.ಮಂಜಯ್ಯ ಸಮಮತಗಳನ್ನು ಪಡೆದಾಗ ಲಾಟರಿ ಮೊರೆ ಹೋಗಲಾಯಿತು. ಅದರಲ್ಲಿ ಬಿ.ಎಲ್.ಮಂಜಯ್ಯ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಪಿ.ಸೋಮಲಿಂಗಯ್ಯ ತಿಳಿಸಿದ್ದಾರೆ.ರಾಮನಗರ ತಾಲೂಕು ಶಾಖೆಯ ಕಾರ್ಯಕಾರಿ ಸಮಿತಿಯ 11 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 25 ಅಭ್ಯರ್ಥಿಗಳು ಚುನಾವಣೆ ಅಂತಿಮ ಕಣದಲ್ಲಿದ್ದರು. ಚುನಾವಣೆಯಲ್ಲಿ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಸಂಘದಲ್ಲಿ ಸಕ್ರಿಯವಾಗಿ ಕೆಲಸ ಮಾಡಲು ಒಂದು ಅವಕಾಶ ಕೊಡಿ ಎಂದು ಅಭ್ಯರ್ಥಿಗಳು, ಬೆಂಬಲಿತ ಪ್ರಮುಖರು ಮತದಾರರ ಮನಸ್ಸು ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಿದ್ದರು.
ನಗರದ ವಾಟರ್ ಟ್ಯಾಂಕ್ ವೃತ್ತದಲ್ಲಿರುವ ಸರ್ಕಾರಿ ಉರ್ದು ಪಾಠಶಾಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು. ಸಂಜೆ ಎಣಿಕೆ ಕಾರ್ಯದ ನಂತರ ಚುನಾವಣಾಧಿಕಾರಿ ಪಿ.ಸೋಮಲಿಂಗಯ್ಯ ವಿಜೇತ ಅಭ್ಯರ್ಥಿಗಳ ಫಲಿತಾಂಶವನ್ನು ಘೋಷಣೆ ಮಾಡಿದರು.2ಕೆಆರ್ ಎಂಎನ್ 7.ಜೆಪಿಜಿ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಮನಗರ ತಾಲೂಕು ಶಾಖೆಯ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ವಿಜೇತರಾದ ನಿರ್ದೇಶಕರು ಸಂಭ್ರಮಿಸಿದರು.