ಬಸವೇಶ್ವರರು ವಚನ ಕ್ರಾಂತಿಯಲ್ಲಿ ಅಗ್ರಗಣ್ಯರು: ಪ್ರಕಾಶಗೌಡ ಪಾಟೀಲ

| Published : May 02 2025, 12:16 AM IST

ಬಸವೇಶ್ವರರು ವಚನ ಕ್ರಾಂತಿಯಲ್ಲಿ ಅಗ್ರಗಣ್ಯರು: ಪ್ರಕಾಶಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ವಚನಗಳಲ್ಲಿ ಗ್ರಾಮೀಣ ಸೊಗಡಿನ ಜಾನಪದ ಸಾಹಿತ್ಯ ಶೈಲಿಯ ಮೂಲಕ ಅನಕ್ಷರಸ್ಥರಿಗೂ ಸುಲಭವಾಗಿ ಅರ್ಥವಾಗುವಂತೆ ಸಮಾಜದ ಡೊಂಕುಗಳನ್ನು ತಿದ್ದುವ ಶ್ರೇಷ್ಠ ಕೊಡುಗೆಯನ್ನು ನಮ್ಮ ವಚನಕಾರರು ನಾಡಿಗೆ ನೀಡಿದ್ದಾರೆ.

ಅಕ್ಕಿಆಲೂರು: 12ನೇ ಶತಮಾನದಲ್ಲಿ ನಮ್ಮ ನಾಡಿನಲ್ಲಿ ಶ್ರೇಷ್ಠ ವಚನಕಾರರು ತಮ್ಮ ಜೀವನದ ಅನುಭವಗಳನ್ನು ವಚನ ಸಾಹಿತ್ಯದ ಮೂಲಕ ಪ್ರಚುರಪಡಿಸಿ ವಚನ ಕ್ರಾಂತಿಗೆ ಕಾರಣರಾಗಿದ್ದಾರೆ. ಜಗಜ್ಯೋತಿ ಬಸವೇಶ್ವರರು ಅವರಲ್ಲಿ ಅಗ್ರಗಣ್ಯರು. ಅವರು ಸಾಹಿತ್ಯ ಕ್ಷೇತ್ರದ ಶ್ರೀಮಂತಿಕೆಗೆ ಕಳಶಪ್ರಾಯವಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ತಿಳಿಸಿದರು.ಪಟ್ಟಣದ ಹಳೂರು ಓಣಿಯ ಗಜಾನನ ಯುವಕ ಮಂಡಳ, ಗ್ರಾಮದೇವಿ ಯುವಕ ಮಂಡಳದ ಆಶ್ರಯದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಚನಗಳಲ್ಲಿ ಗ್ರಾಮೀಣ ಸೊಗಡಿನ ಜಾನಪದ ಸಾಹಿತ್ಯ ಶೈಲಿಯ ಮೂಲಕ ಅನಕ್ಷರಸ್ಥರಿಗೂ ಸುಲಭವಾಗಿ ಅರ್ಥವಾಗುವಂತೆ ಸಮಾಜದ ಡೊಂಕುಗಳನ್ನು ತಿದ್ದುವ ಶ್ರೇಷ್ಠ ಕೊಡುಗೆಯನ್ನು ನಮ್ಮ ವಚನಕಾರರು ನಾಡಿಗೆ ನೀಡಿದ್ದಾರೆ. ಅವರ ಜೀವನಾದರ್ಶಗಳನ್ನು ರೂಢಿಸಿಕೊಳ್ಳುವ ಮೂಲಕ ದೇಶದ ಯುವಶಕ್ತಿ ಸಾಹಿತ್ಯಿಕ ಶ್ರೀಮಂತಿಕೆಯನ್ನು ಕಾಪಾಡಿಕೊಳ್ಳುವ ಮನೋಭಾವ ಹೊಂದಬೇಕು ಎಂದರು.ಈ ಸಂದರ್ಭದಲ್ಲಿ ಮಲ್ಲನಗೌಡ ಪಾಟೀಲ, ರಾಜಶೇಖರಗೌಡ ಪಾಟೀಲ, ಜಗದೀಶ ಮುಂಚಿನಮನಿ, ಭರತಗೌಡ ಪಾಟೀಲ, ಶಿವರಾಜ ಹಾಲಭಾವಿ, ಗಿರೀಶ ಕರಿದ್ಯಾವಣ್ಣನವರ, ನಾಗನಗೌಡ ಪಾಟೀಲ, ಪ್ರವೀಣ ಗೌಳಿ, ಸಚೀನ್ ಹಾಲಭಾವಿ, ವೈಭವ್‌ಗೌಡ ಪಾಟೀಲ, ಶಿವಯೋಗಿ ಪಾಟೀಲ, ಮನೋಜ ಹಾಲಭಾವಿ, ಕಾರ್ತಿಕ ಪಾಟೀಲ, ಸಚೀನ್ ಮೂಡೂರು, ಆದಿತ್ಯ ಸಾಲಿಮಠ ಸೇರಿದಂತೆ ಯುವಕ ಮಂಡಳದ ಸದಸ್ಯರು ಪಾಲ್ಗೊಂಡಿದ್ದರು. ಬಸವಣ್ಣ ಮಹಾನ್ ಮಾನವತಾವಾದಿ

ಶಿಗ್ಗಾಂವಿ: ಸಮಾನತೆಯ ಸಂದೇಶ ಸಾರಿದ ಬಸವಣ್ಣ ಮಹಾನ್ ಮಾನವತಾವಾದಿ ಎಂದು ಬಸವಾನುಯಾಯಿ ಬಸನಗೌಡ ಪಾಟೀಲ ತಿಳಿಸಿದರು.ತಾಲೂಕಿನ ಮುಗಳಿ ಗ್ರಾಮದಲ್ಲಿ ವಿಶ್ವಗುರು ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಜರುಗಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ೧೨ನೇ ಶತಮಾನದಲ್ಲಿ ಮನುಷ್ಯರ ಮಧ್ಯೆ ಇದ್ದ ಮೂಢನಂಬಿಕೆ, ಕಂದಾಚಾರ ಹಾಗೂ ಅಸಮಾನತೆ ತೊಲಗಿಸಲು ಅನುಭವ ಮಂಟಪದ ಮೂಲಕ ಬಸವಣ್ಣನವರು ಮಾಡಿದ ಕಾರ್ಯಗಳು ಸಾರ್ವಕಾಲಿಕ ಶ್ರೇಷ್ಠತೆ ಪಡೆದಿವೆ. ಅವರ ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಯನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕಿದೆ ಎಂದರು.

ವಿಶ್ವಗುರು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿ.ಜಿ. ದುಂಡಪ್ಪನವರ, ಉಪಾಧ್ಯಕ್ಷ ವಿ.ಎಸ್. ಭದ್ರಶೆಟ್ಟಿ, ಸದಸ್ಯರಾದ ಮಹಾದೇವಪ್ಪ ಕಾಮನಹಳ್ಳಿ, ಹವಳೆಪ್ಪ ಪೂಜಾರ, ಟಿ.ಕೆ. ಪಾಟೀಲ, ಅಶೋಕ ಬೆಂಗೇರಿ, ಮಹಾದೇವಪ್ಪ ತಳವಾರ, ಬಸವರಾಜ ಹುಲಗೂರ, ಮಂಜು ಬಿಶೆಟ್ಟಿ, ಶಂಕರ ಗೊಬ್ಬಿ, ನಿವೃತ್ತ ಸೈನಿಕ ಮಲ್ಲನಗೌಡ ಭರಮಗೌಡ್ರ, ಗ್ರಾಮದ ಶೇಖಪ್ಪ ಗೊಬ್ಬಿ, ಶೇಖಪ್ಪ ದುಂಡಪ್ಪನವರ, ಪರಪ್ಪ ಗೊಬ್ಬಿ ಇದ್ದರು. ಶಿವಶಂಕರ ಅಕ್ಕಿ ವಚನ ಪಠಿಸಿದರು. ಅರಳಿಕಟ್ಟಿ ಗೂಳಪ್ಪ ನಿರ್ವಹಿಸಿದರು.