ಲೋಕಾಪುರದಲ್ಲಿ ಬಸವೇಶ್ವರ ಪಲ್ಲಕ್ಕಿ ಉತ್ಸವ

| Published : May 13 2024, 01:15 AM IST

ಲೋಕಾಪುರದಲ್ಲಿ ಬಸವೇಶ್ವರ ಪಲ್ಲಕ್ಕಿ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಾಪುರ ಪಟ್ಟಣದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಬಸವ ಜಯಂತಿ ಪ್ರಯುಕ್ತ ಬಸವೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ಕನ್ನಡಪ್ರಭ ವಾರ್ತೆ ಲೋಕಾಪುರ

ಲೋಕಾಪುರ ಪಟ್ಟಣದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಬಸವ ಜಯಂತಿ ಪ್ರಯುಕ್ತ ಬಸವೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಸಂಜೆ ವಿವಿಧ ವಾದ್ಯ ಮೇಳ, ಭಕ್ತಸಮೂಹದೊಂದಿಗೆ ಪಲ್ಲಕ್ಕಿ ಉತ್ಸವ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನಕ್ಕೆ ಬಂದು ಸಮಾಪ್ತಿಗೊಂಡಿತು.

ಈ ವೇಳೆ ಎಸ್.ಎನ್.ಹಿರೇಮಠ, ವ್ಹಿ.ಎಂ.ತೆಗ್ಗಿ, ಶಿವಾನಂದ ಉದಪುಡಿ, ಬಸವರಾಜ ಕಾತರಕಿ, ಸದಾಶಿವ ಉದಪುಡಿ, ಪ್ರವೀಣ ಗಂಗಣ್ಣವರ, ಸಂಗಮೇಶ ಬಟಕುರ್ಕಿ, ಲೋಕಣ್ಣ ಶೆಟ್ಟರ್, ಆನಂದ ಹವಳಖೋಡ, ಚನ್ನಬಸು ಮುದ್ನೂರ, ಮಲ್ಲಪ್ಪ ಅಂಗಡಿ, ಸಂಗಮೇಶ ಪಲ್ಲೇದ, ಪವನ ಉದಪುಡಿ, ಗುರುರಾಜ ಮೋದಿ, ಸಾಗರ ಮುದ್ನೂರ ಚನ್ನಯ್ಯ ಗಣಾಚಾರಿ ಅಪಾರ ಶರಣ ಸಮೂಹ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.