ಬಸವೇಶ್ವರರು ಸಮಸಮಾಜದ ಪ್ರತಿಪಾದಕರು: ಶ್ರೀ ‌ಶಿಥಿಕಂಠೇಶ್ವರ ಮಹಾಸ್ವಾಮೀಜಿ

| Published : May 12 2024, 01:21 AM IST

ಬಸವೇಶ್ವರರು ಸಮಸಮಾಜದ ಪ್ರತಿಪಾದಕರು: ಶ್ರೀ ‌ಶಿಥಿಕಂಠೇಶ್ವರ ಮಹಾಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾನತೆಯ ಹರಿಕಾರ ಶ್ರೀ ಬಸವಣ್ಣನವರು ಜಾತಿ, ಮತ, ಪಂಥಗಳನ್ನದೇ ನಾವೆಲ್ಲ ಒಂದೇ ಎಂದು ಸಾರಿದರು. ಅದರಂತೆ ನಾವೆಲ್ಲರೂ ಬದುಕಿ ತೋರಿಸಬೇಕಿದೆ ಎಂದರು.

ಕನ್ನಡಪ್ರಭ ವಾರ್ತೆ ಕುಂದಗೋಳ

12ನೇ ಶತಮಾನದಲ್ಲಿ ವಚನಗಳ ಮೂಲಕ ಜಾಗೃತಿ ಮೂಡಿಸಿದ ಬಸವಣ್ಣನವರು ಸಮ ಸಮಾಜದ ಪ್ರತಿಪಾದನೆ ಮಾಡಿದ್ದರು ಎಂದು ಪಂಚಗ್ರಹ ಹಿರೇಮಠದ ಶ್ರೀ ‌ಶಿಥಿಕಂಠೇಶ್ವರ ಮಹಾಸ್ವಾಮಿಗಳು ‌ಹೇಳಿದರು.

ಪಟ್ಟಣದ ಕಾಳಿದಾಸನಗರದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿಯ ಅಂಗವಾಗಿ ನಡೆದ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಚಾಲನೆ ನೀಡಿ ಮಾತನಾಡಿದರು.

ಸಮಾನತೆಯ ಹರಿಕಾರ ಶ್ರೀ ಬಸವಣ್ಣನವರು ಜಾತಿ, ಮತ, ಪಂಥಗಳನ್ನದೇ ನಾವೆಲ್ಲ ಒಂದೇ ಎಂದು ಸಾರಿದರು. ಅದರಂತೆ ನಾವೆಲ್ಲರೂ ಬದುಕಿ ತೋರಿಸಬೇಕಿದೆ ಎಂದರು.

ಶ್ರೀ ಶಿವಾನಂದಮಠದ ಶಿವಾನಂದ ಮಹಾಸ್ವಾಮಿಗಳು ಸಾಥ್‌ ನೀಡಿದರು. ನಂತರ ಪಟ್ಟಣದ ಬೀದಿಗಳಲ್ಲಿ ವಿವಿಧ ರೀತಿಯಲ್ಲಿ ಅಲಂಕಾರಗೊಂಡ ಎತ್ತು, ಬಂಡೆ, ಜಾಂಜ್‌ಮೇಳ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಬಸವೇಶ್ವರ ಮೂರ್ತಿಯ ಮೂಲಕ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಲ್ಲಣ್ಣ ನೆರೇಗಲ್, ಶಿವಾನಂದ ಬೆಂತೂರ, ಶಿದ್ಧಪ್ಪ ಇಂಗಳ್ಳಿ, ರುದ್ರಪ್ಪ ಕಿರೇಸುರ, ಅಜ್ಜಪ್ಪ ಬಂಡಿವಾಡ, ರಾಮಣ್ಣ ಮುದೇನವರ, ಶಿವಾನಂದ ಕಟಗಿ, ಲಕ್ಷ್ಮಣ ರಂಗನಾಯ್ಕರ, ಶರಣಪ್ಪ ಅಂಗಡಿ, ರುದ್ರಪ್ಪ ಹೊಸಮನಿ, ಮುದಕಪ್ಪ ಬ್ಯಾಲಿಹಾಳ, ಮುದಕಪ್ಪ ಬೆಳಗಲಿ, ಕಲ್ಲಪ್ಪ ಬಂಡಿವಾಡ, ಸಲೀಂ ಕ್ಯಾಲಕೊಂಡ, ಸಿದ್ದು ನಾಗರಳ್ಳಿ, ಶಿವಯೋಗಪ್ಪ ನಾಗರಳ್ಳಿ, ಅಜ್ಜಪ್ಪ ತಳವಾರ ಸೇರಿದಂತೆ ನೂರಾರು ಭಕ್ತರು,ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.