ಸಾರಾಂಶ
ಹಗರಿಬೊಮ್ಮನಹಳ್ಳಿ: ಮಹಾನ್ ಮಾನವತಾವಾದಿ, ಸಮಾನತೆಯ ಹರಿಕಾರ ಜಗಜ್ಯೋತಿ ಬಸವೇಶ್ವರರ ಚಿಂತನೆಗಳು ದಾರಿದೀಪವಾಗಿವೆ ಎಂದು ಪುರಸಭೆ ಅಧ್ಯಕ್ಷ ಎಂ. ಮರಿರಾಮಪ್ಪ ತಿಳಿಸಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ವಿಶ್ವಗುರು ಬಸವ ಜಯಂತ್ಯುತ್ಸವದ ನಿಮಿತ್ತ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಬಸವಣ್ಣನವರು ಕೇವಲ ಒಂದು ಜಾತಿ ಮತ್ತು ವರ್ಗಕ್ಕೆ ಸೀಮಿತವಲ್ಲ. ಸಕಲ ಜೀವರಾಶಿಗಳಿಗೂ ಒಳಿತನ್ನೆ ಬಯಸುವ ತತ್ವಾದರ್ಶದ ಶೋಷಣೆಮುಕ್ತ ಸಮಸಮಾಜ ಕಟ್ಟುವ ಆಶಯ ಬಸವಣ್ಣ ಅವರದಾಗಿತ್ತು.ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಬಸವಣ್ಣನವರು ನಿರಂತರವಾಗಿ ಶ್ರಮಿಸಿದ್ದರು ಎಂದರು.
ಪುರಸಭೆ ಸದಸ್ಯರಾದ ನವೀನ್‌ಕುಮಾರ್, ಕಮಲಮ್ಮ, ಅಜೀಜುಲ್ಲಾ, ದೀಪಕ್ ಸಾ ಕಠಾರೆ, ತಾಪಂ ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೇಂದ್ರಪ್ಪ, ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ್, ಸಮುದಾಯ ಸಂಘಟನಾಧಿಕಾರಿ ಬಸವರಾಜ ಮಾತನಾಡಿದರು.ಪುರಸಭೆ ಸದಸ್ಯೆ ಎಚ್.ಎಂ. ಚನ್ನಮ್ಮ ವಿಜಯಕುಮಾರ್, ಉಪ್ಪಾರ ಬಾಳಪ್ಪ, ತ್ಯಾವಣಗಿ ಕೊಟ್ರೇಶ್, ಬಡಲಡಕಿ ಕೃಷ್ಣಪ್ಪ, ಚಿಂತ್ರಪಳ್ಳಿ ಮಂಜುನಾಥ, ಮಾಜಿ ಸದಸ್ಯ ಅಲ್ಲಾಭಕ್ಷಿ, ಗ್ರಾಪಂ ಮಾಜಿ ಅಧ್ಯಕ್ಷ ಗುಂಡ್ರು ಹನುಮಂತಪ್ಪ, ಸದಸ್ಯ ಸೆರೆಗಾರ ಹುಚ್ಚಪ್ಪ, ವಿಎಸ್ಸೆಸ್ಸೆನ್ ಅಧ್ಯಕ್ಷ ದಾದಮ್ಮನವರ ಬಸವರಾಜ, ಉಪಾಧ್ಯಕ್ಷ ಎಚ್.ಎಂ. ಗಂಗಾಧಯ್ಯ, ಸದಸ್ಯ ಗೋಟೂರು ಬಸವರಾಜ, ಎಚ್.ಎಂ. ವಿಜಯಕುಮಾರ್, ಕಂದಾಯ ಅಧಿಕಾರಿ ಮಾರೆಣ್ಣ, ವ್ಯವಸ್ಥಾಪಕ ಚಂದ್ರಶೇಖರ ಇತರರಿದ್ದರು. ಜೆಇ ಹುಸೇನ್ ಬಾಷಾ, ಕಿರಿಯ ಆರೋಗ್ಯ ನಿರೀಕ್ಷಕಿ ಕೆ. ಜಯಲಕ್ಷ್ಮೀ ನಿರ್ವಹಿಸಿದರು.