ಕನ್ನಡಪ್ರಭದ ನಂದಿಹಾಳಗೆ ಸನ್ಮಾನಿಸಿದ ಬಸವೇಶ್ವರ ಸೇವಾ ಸಮಿತಿ

| Published : Aug 03 2024, 12:35 AM IST

ಸಾರಾಂಶ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಸಕ್ತ ವರ್ಷದ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಬಸವನಬಾಗೇವಾಡಿ ತಾಲೂಕಿನ ಕನ್ನಡಪ್ರಭ ವರದಿಗಾರ ಬಸವರಾಜ.ಎಸ್.ನಂದಿಹಾಳ ಅವರಿಗೆ ಶುಕ್ರವಾರ ಸ್ಥಳೀಯ ಬಸವೇಶ್ವರ ಸೇವಾ ಸಮಿತಿಯಿಂದ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಸಕ್ತ ವರ್ಷದ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಬಸವನಬಾಗೇವಾಡಿ ತಾಲೂಕಿನ ಕನ್ನಡಪ್ರಭ ವರದಿಗಾರ ಬಸವರಾಜ.ಎಸ್.ನಂದಿಹಾಳ ಅವರಿಗೆ ಶುಕ್ರವಾರ ಸ್ಥಳೀಯ ಬಸವೇಶ್ವರ ಸೇವಾ ಸಮಿತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬಸವೇಶ್ವರ ಸೇವಾ ಸಮಿತಿಯ ಸದಸ್ಯರಾದ ಬಸವರಾಜ ಗೊಳಸಂಗಿ, ಸಂಗಣ್ಣ ಕಲ್ಲೂರ, ಚಂದ್ರಶೇಖರಗೌಡ ಪಾಟೀಲ, ಶೇಖರ ಗೊಳಸಂಗಿ, ಬಸವರಾಜ ಕೋಟಿ, ಬಸವರಾಜ ಹಾರಿವಾಳ, ಎಂ.ಬಿ.ತೋಟದ, ರಮೇಶ ಯಳಮೇಲಿ, ನಿವೃತ್ತ ಪ್ರಾಚಾರ್ಯ ಸುರೇಶಗೌಡ ಪಾಟೀಲ, ಸಂಕನಗೌಡ ಪಾಟೀಲ, ಉಮೇಶ ಹಾರಿವಾಳ, ರವಿ ರಾಠೋಡ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಮುದುಕು ಬಸರಕೋಡ, ನಿವೃತ್ತ ಶಿಕ್ಷಕ ಎಂ.ಜಿ.ಆದಿಗೊಂಡ ಸೇರಿದಂತೆ ಬಸವೇಶ್ವರ ಸೇವಾ ಸಮಿತಿಯ ಸದಸ್ಯರು ಇದ್ದರು.

ಕಳೆದ ೧೮ ವರ್ಷಗಳಿಂದ ಕನ್ನಡಪ್ರಭ ದಿನಪತ್ರಿಕೆಯ ತಾಲೂಕು ವರದಿಗಾರರಾಗಿ ಕಾರ್ಯನಿರ್ವಹಿಸುವ ಮೂಲಕ ಪತ್ರಿಕಾರಂಗಕ್ಕೆ ಸೇವೆ ಸಲ್ಲಿಸುತ್ತಿರುವ ಬಸವರಾಜ ನಂದಿಹಾಳ ಅವರ ಕಾರ್ಯ ಅನುಪಮ. ಇವರು ಪತ್ರಿಕಾ ರಂಗಕ್ಕೆ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಶ್ಲಾಘನೀಯ. ಸಾಹಿತಿಕವಾದ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವೆ ಇನ್ನಷ್ಟು ಸಮಾಜಕ್ಕೆ ಸಿಗುವಂತಾಗಲಿ.

-ಎಂ.ಜಿ.ಆದಿಗೊಂಡ,

ನಿವೃತ್ತ ಶಿಕ್ಷಕರು.