ಸಾರಾಂಶ
ಪೌರೋಹಿತ್ಯಶಾಹಿ ನಡೆಸುತ್ತಿದ್ದ ಮಾನಸಿಕ ಭಯೋತ್ಪಾದಕತೆ, ವರ್ಣಾಶ್ರಮ ಪದ್ಧತಿ, ಜಾತಿ ವ್ಯವಸ್ಥೆ, ಪ್ರಾಣಿ ಬಲಿ, ಸೇರಿದಂತೆ ಅಂದಿನ ಸಮಾಜ ಕಸಿದುಕೊಂಡಿದ್ದ ಸ್ತ್ರೀಸ್ವಾತಂತ್ರ್ಯದ ವಿರುದ್ಧ ಲಿಂಗಾಯತ ಚಳುವಳಿ ಆರಂಭಿಸಿದ 12ನೇ ಶತಮಾನದ ತತ್ವಜ್ಞಾನಿ ಬಸವೇಶ್ವರರು ವಿಶ್ವಕಂಡ ಒಬ್ಬ ಶ್ರೇಷ್ಠ ರಾಜನೀತಿಜ್ಞ ಎಂದು ಲಿಂಗಾಯತ ಸಮಾಜದ ಮುಖಂಡ ಶಂಕರಗೌಡ್ರ ಪಾಟೀಲ ಬಣ್ಣಿಸಿದರು.
ಬ್ಯಾಡಗಿ: ಪೌರೋಹಿತ್ಯಶಾಹಿ ನಡೆಸುತ್ತಿದ್ದ ಮಾನಸಿಕ ಭಯೋತ್ಪಾದಕತೆ, ವರ್ಣಾಶ್ರಮ ಪದ್ಧತಿ, ಜಾತಿ ವ್ಯವಸ್ಥೆ, ಪ್ರಾಣಿ ಬಲಿ, ಸೇರಿದಂತೆ ಅಂದಿನ ಸಮಾಜ ಕಸಿದುಕೊಂಡಿದ್ದ ಸ್ತ್ರೀಸ್ವಾತಂತ್ರ್ಯದ ವಿರುದ್ಧ ಲಿಂಗಾಯತ ಚಳುವಳಿ ಆರಂಭಿಸಿದ 12ನೇ ಶತಮಾನದ ತತ್ವಜ್ಞಾನಿ ಬಸವೇಶ್ವರರು ವಿಶ್ವಕಂಡ ಒಬ್ಬ ಶ್ರೇಷ್ಠ ರಾಜನೀತಿಜ್ಞ ಎಂದು ಲಿಂಗಾಯತ ಸಮಾಜದ ಮುಖಂಡ ಶಂಕರಗೌಡ್ರ ಪಾಟೀಲ ಬಣ್ಣಿಸಿದರು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಶುಕ್ರವಾರ ಜಗಜ್ಯೋತಿ ಬಸವೇಶ್ವರರು ಹಾಗೂ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ ನಿಮಿತ್ತ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಲಿಂಗ ಅಸಮಾನತೆ ಸಾಮಾಜಿಕ ತಾರತಮ್ಯ, ಮೂಢನಂಬಿಕೆ ಮತ್ತು ಆಚರಣೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ ಬಸವೇಶ್ವರರು ಎಲ್ಲರಿಗೂ ಅರ್ಥವಾಗುವ ಸರಳಭಾಷೆಯಲ್ಲಿ ವಚನಗಳನ್ನು ರಚಿಸುವ ಮೂಲಕ ಸಮಾಜದ ಜನರಲ್ಲಿ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾಗಿದ್ಧಾರೆ ಎಂದರು.ಸಂವಿಧಾನಕ್ಕೆ ಭದ್ರ ಬುನಾದಿ: ಟಿಇಒ ಕೆ.ಎಂ.ಮಲ್ಲಿಕಾರ್ಜುನ ಮಾತನಾಡಿ, ‘ಕಾಯಕವೇ ಕೈಲಾಸ’ ನಿತ್ಯ ಕಾಯಕದಲ್ಲಿ ತೊಡಗದಿದ್ದರೇ ತಿನ್ನುವ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂಬ ಸಂದೇಶ ತಿಳಿಸುವ ಮೂಲಕ ಸಮಾಜದಲ್ಲಿ ದಾಸ್ಯ ಪದ್ಧತಿ ಮತ್ತು ಆಲಸ್ಯತನ ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದು, ಜಾತಿ ಶ್ರೇಣೀಕರಣ, ಜ್ಯೋತಿಷ್ಯ, ದೇವಾಲಯ ನಿರ್ಮಾಣ, ಮಾಂತ್ರಿಕ ಆಚರಣೆ ಇನ್ನಿತರ ಸಾಮಾಜಿಕ ಮೌಢ್ಯಗಳ ವಿರುದ್ಧ ನಿಂತಿದ್ದ ಅವರು, ವಚನ ಮತ್ತು ಪ್ರವಚನಗಳ ಮೂಲಕ ಅವುಗಳನ್ನು ಖಂಡಿಸಿದ್ದಾರೆ ಎಂದರು.ಸಂವಿಧಾನಕ್ಕೆ ಭದ್ರಬುನಾದಿ: ತಹಸೀಲ್ದಾರ ಪಟ್ಟರಾಜಗೌಡ ಮಾತನಾಡಿ, ಶರಣ ಚಳುವಳಿ ಆರಂಭಿಸಿದ ಬಸವೇಶ್ವರರು, ಅನುಭವ ಮಂಟಪದಂತಹ ಸಾರ್ವಜನಿಕ ಸಂಸ್ಥೆಯೊಂದನ್ನು ಸ್ಥಾಪಿಸಿ, ತನ್ಮೂಲಕ ಜಾತಿಪದ್ಧತಿ ಇನ್ನಿತರ ಅಮಾನವೀಯ ಆಚರಣೆಗಳ ವಿರುದ್ಧ ಹೋರಾಡಿದ್ದಲ್ಲದೇ, ಪ್ರಜಾಪ್ರಭುತ್ವದ ಸಿದ್ಧಾಂತ ಹಾಗೂ ಸಂವಿಧಾನ ರಚನೆಗೆ ಹೋಲಿಕೆಯಾಗುವ ವಿಷಯ ಚರ್ಚೆಗೆ ಒಳಪಡಿಸಿದ್ದಾಗಿ ತಿಳಿಸಿದರು.ವಚನಗಳು ವೈಜ್ಞಾನಿಕ ಚಿಂತನೆ: ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ಕೋಟಿ ಮಾತನಾಡಿ, ಬಸವೇಶ್ವರರ ವಚನ ಅಕ್ಷರಶಃ ವೈಜ್ಞಾನಿಕ ಚಿಂತನೆಗಳಾಗಿವೆ, ಅವುಗಳಲ್ಲಿ ಏನು ಹೇಳಲಾಗುತ್ತದೆ ಎಂಬುದನ್ನು ಸರಳವಾಗಿ ಅನುವಾದಿಸಬಹುದಾಗಿದೆ. ದೇವರು ಮತ್ತು ದೇವತೆಗಳ ಕುರಿತು ದಂತಕಥೆ ಹಾಗೂ ಅಣಕು ಆಚರಣೆ ಧಿಕ್ಕರಿಸಿದ ಬಸವೇಶ್ವರರು ಭವಿಷ್ಯದ ಬದುಕಿಗೆ ಭದ್ರತೆ ರೂಪಿಸಿದ್ದಾರೆ. ಎಷ್ಟೇ ಹಾಸ್ಯ ಮತ್ತು ಅಪಹಾಸ್ಯ ಎದುರಾದರೂ ಸಹ ಧರ್ಮವನ್ನು ಔಪಚಾರಿಕ ರೀತಿಯಲ್ಲಿ ನೋಡಿದ್ದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮುರಿಗೆಪ್ಪ ಶೆಟ್ಟರ, ನ್ಯಾಯವಾದಿ ಡಿ.ಎಚ್. ಬುಡ್ಡನಗೌಡ್ರ, ಸಂತೋಷ ಮೂಲಿಮನಿ, ಶಿರಸ್ತೇದಾರ ಹತ್ತಿಮತ್ತೂರ, ಸಿಬ್ಬಂದಿಗಳಾದ ಎಂ.ಜಿ.ಹಿರೇಮಠ, ಮಾಲತೇಶ ಮಡಿವಾಳರ ಸೇರಿದಂತೆ ಹಲವರು ಉಪಸ್ಥಿತರಿದ್ದರು.