ದೊಡ್ಡಬಳ್ಳಾಪುರ: ಇಲ್ಲಿನ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯಿಂದ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪಟ್ಟಣ ಪಂಚಾಯತಿ ಅಧ್ಯಕ್ಷ ಪ್ರೇಮ್ ಕುಮಾರ್ ಮಾತನಾಡಿ, ಸಂಘಟನೆಗಳು ಈ ರೀತಿಯಾಗಿ ಪ್ರೇರೇಪಿಸುವುದರಿಂದ ಕಾರ್ಮಿಕರು ಇನ್ನು ಉತ್ತಮ ಕೆಲಸ ಮಾಡಲು ಮುಂದಾಗುತ್ತಾರೆ. ಇಂತಹ ಸಾರ್ಥಕ ಕಾರ್ಯಕ್ಕಾಗಿ ಕರವೇ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್ ಮಾತನಾಡಿ, ಮಹಿಳಾ ಪೌರಕಾರ್ಮಿಕರು ಸಮಾಜದ ಮೊದಲ ವೈದರಿದ್ದಂತೆ. ಅವರು ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿಕೊಂಡು ಬರುವುದರಿಂದ ಸಮಾಜ ಸ್ವಚ್ಛವಾಗಿ ಹಾಗೂ ರೋಗಮುಕ್ತವಾಗಿ ಇರಲು ಕಾರಣವಾಗಿದೆ. ನಗರ ಸ್ವಚ್ಛತೆಯಂತಹ ಉತ್ತಮ ಕೆಲಸಕ್ಕೆ ಸಮಾಜ ಮನ್ನಣೆ ನೀಡಬೇಕು ಎಂದರು.
ಮುಖ್ಯಾಧಿಕಾರಿ ನರಸಿಂಹಮೂರ್ತಿ,ಸಂಘಟನಾ ಕಾರ್ಯದರ್ಶಿ ಅರವಿಂದಪ್ಪ. ರಾಜ್ಯ ಮುಖಂಡ ಪಿ. ವಾಸು, ತಾಲೂಕು ಕಾರ್ಯಾಧ್ಯಕ್ಷ ಪ್ರದೀಪ್ ಕುಮಾರ್, ಕಾರ್ಮಿಕ ಘಟಕದ ಅಧ್ಯಕ್ಷ ಶಿವಶಂಕರ್ ರೆಡ್ಡಿ. ಮುಖಂಡರಾದ ಶಿವಶಂಕರಪ್ಪ ಹಾಗೂ ವೇದಿಕೆ ಕಾರ್ಯಕರ್ತರು ಭಾಗವಹಿಸಿದ್ದರು.12ಕೆಡಿಬಿಪಿ5- ದೊಡ್ಡಬಳ್ಳಾಪುರ ತಾಲೂಕು ಬಾಶೆಟ್ಟಿಹಳ್ಳಿ ಪಪಂ ವ್ಯಾಪ್ತಿಯ ಮಹಿಳಾ ಪೌರಕಾರ್ಮಿಕರಿಗೆ ಕರವೇ ಕನ್ನಡಿಗರ ಬಣದಿಂದ ಸನ್ಮಾನಿಸಲಾಯಿತು.