ಕಲಾವಿದರು ತಮ್ಮ ಪಾತ್ರದೊಳಗೆ ಪ್ರವೇಶ ಮಾಡಿ ಕಥೆಯೊಂದಿಗೆ ತಮ್ಮ ಕಲೆ ಅನಾವರಣಗೊಳಿಸುವ ಕಲೆ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ
ಕುರುಗೋಡು: ಗ್ರಾಮೀಣ ಕಲೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಶಾಪುರ ದೊಡ್ಡರಂಗಪ್ಪ ಹೇಳಿದರು.
ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ವರ ಸಿಂಚನ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ವೀರ ಅಭಿಮಾನ್ಯ ಕಾಳಗ ಬಯಲಾಟಕ್ಕೆ ಚಾಲನೆ ನೀಡಿ ಮಾತನಾಡಿದರು.ಬಯಲಾಟ ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿದೆ. ಸಂಸ್ಕೃತಿ ವಿಕೃತಿಯಾಗುತ್ತಿರುವ ಸಂದರ್ಭದಲ್ಲಿ ಬಯಲಾಟ, ಸಣ್ಣಾಟ, ಗೊಂದಲಿಗರ ಹಾಡು, ಲಂಬಾಣಿ ನೃತ್ಯ ಮೊದಲಾದ ಕಲೆಗಳು ಉಳಿದು ನಮ್ಮ ಸಂಸ್ಕೃತಿಯ ಬೆಳವಣಿಗೆಗೆ ಕಾರಣವಾಗಿವೆ. ಕಲಾವಿದರು ತಮ್ಮ ಪಾತ್ರದೊಳಗೆ ಪ್ರವೇಶ ಮಾಡಿ ಕಥೆಯೊಂದಿಗೆ ತಮ್ಮ ಕಲೆ ಅನಾವರಣಗೊಳಿಸುವ ಕಲೆ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ ಎಂದರು.
ಸ್ವರ ಸಿಂಚನ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷ ಕರಿಬಸವನಗೌಡ ಮಾತನಾಡಿದರು. ನಮ್ಮ ದೇಶದ ಸಂಸ್ಕೃತಿ ಹಾಗೂ ಪರಂಪರೆ ಉಳಿವಿಗಾಗಿ ಇಂತಹ ಬಯಲು ನಾಟಕ, ಸುಗಮ ಸಂಗೀತ ಸೇರಿದಂತೆ ಇನ್ನಿತರ ರಂಗಭೂಮಿಯ ಕಲಾವಿದರಿಗೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಭಾಗದ ಜನ ಬಯಲು ನಾಟಕ, ರಂಗಭೂಮಿ ಕಲೆ ನಮ್ಮ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.ಈ ಸಂದರ್ಭದಲ್ಲಿ ಮಹೇಶ ಗೌಡ, ಈಶ್ವರಗೌಡ್ರು, ಭಟ್ರಳ್ಳಿ ರಾಮಣ್ಣ, ಶಂಭುನಗೌಡ, ಗಾಳಿ ಮಲ್ಲಯ್ಯ, ಗುತ್ತಿಗನೂರು ವಿಶ್ವನಾಥ್, ದೇವೇಂದ್ರ, ಶರಣಬಸವ, ಹಾರ್ಮೋನಿಯಂ, ಚಂದ್ರಶೇಖರ್, ನಾಗನಗೌಡ. ತಬಲಾ ವಾದಕರಾಗಿ ಯರಿನಾಗೇಶ, ಬಸವರಾಜ್ ಸ್ವಾಮಿ, ನಂದಿ ಸ್ವಾಮಿ,ರೇಣುಕಾ ಸ್ವಾಮಿ, ತಿಪ್ಪೇಸ್ವಾಮಿ ಗಾದಿಲಿಂಗಪ್ಪ, ಬಸವರಾಜಪ್ಪ, ನಾಗರಾಜ್, ವೆಂಕಾರೆಡ್ಡಿ, ಹುಲುಗಪ್ಪ ಇದ್ದರು.