ಸಾರಾಂಶ
ಬೆಂಗಳೂರಿನಲ್ಲಿ ಬಿಬಿಎಂಪಿ ನಿರ್ಮಿಸಿರುವ ಟೆಂಡರ್ ಶ್ಯೂರ್ ರಸ್ತೆ ನಿರ್ವಹಣೆಗೆ ಕಂಪನಿಗಳಿಂದ ಅರ್ಜಿ ಆಹ್ವಾನಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಟೆಂಡರ್ ಶ್ಯೂರ್ ಯೋಜನೆಯಡಿ ಅಭಿವೃದ್ಧಿ ಪಡಿಸಲಾದ 12 ರಸ್ತೆಗಳನ್ನು ‘ನಮ್ಮ ರಸ್ತೆ ಕಾರ್ಯಕ್ರಮದಡಿ’ ಸಿಎಸ್‌ಆರ್ ನಿಧಿಯಲ್ಲಿ ನಿರ್ವಹಣೆ ಮಾಡಲು ವಿವಿಧ ಖಾಸಗಿ ಸಂಸ್ಥೆಗಳಿಂದ ಬಿಬಿಎಂಪಿ ಅರ್ಜಿ ಆಹ್ವಾನಿಸಿದೆ.ನಮ್ಮ ರಸ್ತೆ ಕಾರ್ಯಕ್ರಮದಡಿ ಕಾರ್ಪೋರೇಟ್ ಸಂಸ್ಥೆಗಳು, ಐಟಿ ಕಂಪನಿಗಳು, ಬಿಲ್ಡರ್ ಹಾಗೂ ಡೆವಲಪರ್‌ಗಳು ಬಿಬಿಎಂಪಿ ಸಹಯೋಗದಲ್ಲಿ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಬಳಸಿ ರಸ್ತೆಗಳ ನಿರ್ವಹಣೆ ಮಾಸಲು ಪ್ರಸ್ತಾವನೆ ಸಲ್ಲಿಸಿವೆ. ಹೀಗಾಗಿ, ಬಿಬಿಎಂಪಿಯಿಂದ ಆಸಕ್ತಿ ಹೊಂದಿರುವ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನಿರ್ವಹಣೆ ಮಾಡುವ ಇಚ್ಚಿಸುವ ಸಂಸ್ಥೆಗಳು ಪಾದಚಾರಿ ಮಾರ್ಗವನ್ನು ಸ್ವಚ್ಛವಾಗಿ ಇರುವಂತೆ ನೋಡಿಕೊಳ್ಳಬೇಕು. ಸೈಕಲ್ ಲೈನ್‌ನಲ್ಲಿ ಪೇಂಟಿಂಗ್ ಮಾಡಬೇಕು. ಅಲಂಕಾರಿಕ ಸಸಿಗಳ ಬೇಲಿ ನಿರ್ವಹಣೆ, ಮುರಿದು ಹೋಗಿರುವ ಚರಂಡಿ ಜಾಲರಿಗಳನ್ನು ಬದಲಾವಣೆ ಮಾಡುವುದು, ಯುಟಿಲಿಟಿ ಡಕ್ಟ್‌ಗಳ ನಿರ್ವಹಣೆ, ಬೀದಿ ದೀಪಗಳ ದುರಸ್ತಿ ಮತ್ತು ನಿರ್ವಹಣೆ, ಸೌಂದರ್ಯವರ್ಧನೆಗೆ ಬೇಕಾದ ಕೆಲಸ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ.ನಿರ್ವಹಣೆ ಮಾಡುವ ಸಂಸ್ಥೆಗಳು ಪ್ರತಿ ಕಿಲೋ ಮೀಟರ್‌ನಲ್ಲಿ ನಾಲ್ಕು ಸ್ಥಳದಲ್ಲಿ 3*2 ಅಡಿಯ ಜಾಹೀರಾತು ಫಲಕ ಅಳವಡಿಕೆ ಮಾಡಿಕೊಳ್ಳಬಹುದಾಗಿದೆ. ರಸ್ತೆಯ ಡಾಂಬರೀಕರಣವನ್ನು ಬಿಬಿಎಂಪಿಯಿಂದ ಮಾಡಲಾಗುವುದು ಎಂದು ಪೂರ್ವ ವಲಯದ ರಸ್ತೆ ಮೂಲ ಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
- - -ಬಾಕ್ಸ್
12 ಟೆಂಡರ್ ಶ್ಯೂರ್ ರಸ್ತೆ ಮತ್ತು ಉದ್ದರಸ್ತೆ ಹೆಸರುಉದ್ದ(ಕಿಮೀ)
ರೆಸಿಡೆನ್ಸಿ ರಸ್ತೆ2.00ರಿಚ್ಮಂಡ್ ರಸ್ತೆ2.70
ಮ್ಯೂಸಿಯಂ ರಸ್ತೆ1.20ವಿಠಲ್ ಮಲ್ಯ ರಸ್ತೆ0.60
ಸೆಂಟ್ ಮಾರ್ಕ್ಸ್ ರಸ್ತೆ0.90ಕನ್ನಿಂಗ್ಯಾಮ್ ರಸ್ತೆ1.47
ಕೆ.ಜಿ. ರಸ್ತೆ1.10ನೃಪತುಂಗ ರಸ್ತೆ0.80
ಮೋದಿ ಆಸ್ಪತ್ರೆ ರಸ್ತೆ1.02ಚರ್ಚ್ ಸ್ಟೀಟ್ ರಸ್ತೆ0.66
ಮ್ಯೂಜಿಯಂ ಅಡ್ಡರಸ್ತೆ0.38ಒಟ್ಟು13.41