ಸಾರಾಂಶ
ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2023-24ನೇ ಸಾಲಿನಲ್ಲಿ ನಿರೀಕ್ಷಿತ ಮಟ್ಟದ ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ವಿಫಲವಾಗಿದ್ದು, ₹3,901 ಕೋಟಿ ಮಾತ್ರ ಸಂಗ್ರಹಿಸಲು ಶಕ್ತವಾಗಿದೆ.
2023-24ನೇ ಸಾಲಿನಲ್ಲಿ ₹4,561 ಕೋಟಿ ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿದ್ದ ಪಾಲಿಕೆ, ಮಾ.31ರ ಆರ್ಥಿಕ ವರ್ಷದ ಅಂತ್ಯಕ್ಕೆ ₹3,900.92 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಆದರೆ ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2022-23ರಲ್ಲಿ ₹566 ಕೋಟಿ ಹೆಚ್ಚು ತೆರಿಗೆ ಸಂಗ್ರಹಿಸಿದೆ.
ಮಹದೇವಪುರದಲ್ಲಿ ₹1 ಸಾವಿರ ಕೋಟಿ:
ಬಿಬಿಎಂಪಿಯ ಎಂಟು ವಲಯಗಳ ಪೈಕಿ ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ₹1,042 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ದಾಸರಹಳ್ಳಿ ವಲಯದಲ್ಲಿ ಅತಿ ಕಡಿಮೆ ₹127 ಕೋಟಿ ಸಂಗ್ರಹವಾಗಿದೆ.
ಫಲ ನೀಡದ ತಂತ್ರಗಳು:
ಹೆಚ್ಚಿನ ಪ್ರಮಾಣದ ಆಸ್ತಿ ತೆರಿಗೆ ವಸೂಲಿಗೆ ಬಿಬಿಎಂಪಿ ಹಲವು ಕ್ರಮ ಕೈಗೊಂಡಿತ್ತು. ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಿ ಆಸ್ತಿ ಸೀಜ್ ಮಾಡಲಾಗುತ್ತಿತ್ತು. ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರನ್ನು ಪಾಲಿಕೆ ಕಂದಾಯ ವಿಭಾಗದ ವಿಶೇಷ ಆಯುಕ್ತರ ಹುದ್ದೆಗೆ ನಿಯೋಜನೆ ಮಾಡಲಾಗಿತ್ತು. ಆದರೂ ಹೆಚ್ಚಿನ ಪ್ರಮಾಣ ಆಸ್ತಿ ತೆರಿಗೆ ವಸೂಲಿ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ.
2023-24ರ ವಲಯವಾರು ಆಸ್ತಿ ತೆರಿಗೆ ಸಂಗ್ರಹ (ಕೋಟಿ ₹)
ವಲಯಗುರಿಸಂಗ್ರಹಬೊಮ್ಮನಹಳ್ಳಿ501452.84ದಾಸರಹಳ್ಳಿ 164127.02ಪೂರ್ವ 764684.55ಮಹದೇವಪುರ 1,2381,042.60ಆರ್.ಆರ್.ನಗರ 345269.55ದಕ್ಷಿಣ 627556.64ಪಶ್ಚಿಮ 493418.03ಯಲಹಂಕ 429349.69ಒಟ್ಟು45613,900.92
ಕಳೆದ ಆರು ವರ್ಷ ತೆರಿಗೆ ಸಂಗ್ರಹ ವಿವರ (ಕೋಟಿ ₹)ವರ್ಷಗುರಿಸಂಗ್ರಹ2018-193,1002,5292019-203,5002,6592020-213,5002,8602021-224,0003,0892022-234,1893,3322023-244,5613,900.92