ಬಿಡಿಸಿಸಿ ಎಟಿಎಂ ಸ್ಥಗಿತ, ಗ್ರಾಹಕರ ಪರದಾಟ

| Published : Jul 05 2024, 12:58 AM IST

ಸಾರಾಂಶ

ಸಾವಳಗಿ: ಹದಿನೈದು ದಿನದಿಂದ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಸಾವಳಗಿ ಶಾಖೆಯಲ್ಲಿನ ಎಟಿಎಂ ಸ್ಥಗಿತವಾಗಿದ್ದು, ಗ್ರಾಹಕರು ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಸಾವಳಗಿ

ಹದಿನೈದು ದಿನದಿಂದ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಸಾವಳಗಿ ಶಾಖೆಯಲ್ಲಿನ ಎಟಿಎಂ ಸ್ಥಗಿತವಾಗಿದ್ದು, ಬ್ಯಾಂಕ್‌ ಖಾತೆಯಲ್ಲಿ ಹಣವಿದ್ದರೂ ಸುಲಭವಾಗಿ ಪಡೆಯಲು ಸಾಧ್ಯವಾಗದೇ ಗ್ರಾಹಕರು ಪರದಾಡುವಂತಾಗಿದೆ.

ಸಾವಳಗಿಯಲ್ಲಿ ಬೆರಳೆಣಿಕೆಯಷ್ಟು ಎಟಿಎಂ ಯಂತ್ರಗಳಿದ್ದು, ಯಾವುದೇ ಒಂದು ಯಂತ್ರದಲ್ಲಿ ಹಣ ಇಲ್ಲವೆಂದರೆ ಜನರು ಹಣಕ್ಕಾಗಿ ಪರದಾಡಬೇಕಾಗುತ್ತದೆ. ದೂರದ ಊರುಗಳಿಗೆ ಹೋಗುವವರು, ಪೆಟ್ರೋಲಲ್‌ ಹಾಕಿಸಿಕೊಳ್ಳು, ಹೋಟೆಲ್‌ನಲ್ಲಿ ಉಪಹಾರ ಮಾಡುವವರಿಗೆ ಎಟಿಎಂ ಬಂದ್‌ ಆಗಿರುವುದರಿಂದ ಹಣ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಬ್ಯಾಂಕ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಇದ್ದರೂ ಸಮಯಕ್ಕೆ ಸರಿಯಾಗಿ ಸಿಗದಿದ್ದರೆ ಪ್ರಯೋಜನವೇನು ಎನ್ನುತ್ತಾರೆ ನೊಂದ ಗ್ರಾಹಕರು. ಶಾಖಾ ವ್ಯವಸ್ಥಾಪಕರಿಗೆ ಎಟಿಎಂ ಕುರಿತು ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಹೊರತು ಪ್ರಾರಂಭಿಸುವ ಕೆಲಸವಾಗುತ್ತಿಲ್ಲ ಎನ್ನುತ್ತಿದ್ದಾರೆ ಗ್ರಾಹಕರು.