ರಾಮನಗರ: ರೈತರಿಗೆ ನೆರವಾಗುವ ಕ್ರಾಂತಿಕಾರಿ ಯೋಜನೆಗಳು ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಸಾಕಾರವಾಗುತ್ತಿದ್ದು, ಅವರ ಮಾರ್ಗದರ್ಶನದಲ್ಲಿ ಬಿಡಿಸಿಸಿ ಬ್ಯಾಂಕಿನ ಮೂಲಕವೂ ಉತ್ತಮ ಸೇವೆ ಒದಗಿಸಲಾಗುವುದು ಎಂದು ಬ್ಯಾಂಕಿನ ನೂತನ ನಿರ್ದೇಶಕ ಯರೇಹಳ್ಳಿ ಮಂಜು ತಿಳಿಸಿದರು.

ರಾಮನಗರ: ರೈತರಿಗೆ ನೆರವಾಗುವ ಕ್ರಾಂತಿಕಾರಿ ಯೋಜನೆಗಳು ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಸಾಕಾರವಾಗುತ್ತಿದ್ದು, ಅವರ ಮಾರ್ಗದರ್ಶನದಲ್ಲಿ ಬಿಡಿಸಿಸಿ ಬ್ಯಾಂಕಿನ ಮೂಲಕವೂ ಉತ್ತಮ ಸೇವೆ ಒದಗಿಸಲಾಗುವುದು ಎಂದು ಬ್ಯಾಂಕಿನ ನೂತನ ನಿರ್ದೇಶಕ ಯರೇಹಳ್ಳಿ ಮಂಜು ತಿಳಿಸಿದರು.

ನಗರದ ಅರ್ಚಕರಹಳ್ಳಿ ವಿಎಸ್‌ಎಸ್‌ಎನ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಅವಧಿಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಎಲ್ಲರ ಸಹಕಾರದಲ್ಲಿ ಉತ್ತಮ ಕೆಲಸ ಮಾಡಿದ ಫಲವಾಗಿ ಎರಡನೇ ಬಾರಿಗೆ ನಾನು ಬಿಡಿಸಿಸಿ ಬ್ಯಾಂಕಿಗೆ ಅವಿರೋಧವಾಗಿ ಆಯ್ಕೆಯಾಗಲು ಸಾಧ್ಯವಾಯಿತು ಎಂದರು.

ನನ್ನ ಅವಿರೋಧ ಆಯ್ಕೆಗೆ ಸಹಕರಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಶಾಸಕರಾದ ಎಚ್.ಸಿ.ಬಾಲಕೃಷ್ಣ, ಎಚ್.ಎ.ಇಕ್ಬಾಲ್‌ಹುಸೇನ್, ಸಿ.ಪಿ.ಯೋಗೇಶ್ವರ್, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಜಿಪಂ ಮಾಜಿ ಅಧ್ಯಕ್ಷ ಎಚ್.ಎನ್.ಅಶೋಕ್ , ಬ್ಯಾಂಕಿನ ಮಾಜಿ ಅಧ್ಯಕ್ಷ ವಿಜಯ್ ದೇವ್ ಹಾಗೂ ನನ್ನ ವ್ಯಾಪ್ತಿಯ 16 ವಿಎಸ್‌ಎಸ್‌ಎಸ್‌ಎನ್‌ಗಳ ಅಧ್ಯಕ್ಷರು, ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಚನ್ನಪಟ್ಟಣ ಕ್ಷೇತ್ರದ 3, ರಾಮನಗರ ಕ್ಷೇತ್ರದ 5, ಮಾಗಡಿ ಕ್ಷೇತ್ರದ 8 ವಿಎಸ್‌ಎಸ್‌ಎಸ್‌ಎನ್‌ಗಳ ಅಧ್ಯಕ್ಷರು, ನಿರ್ದೇಶಕರ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ. ಅವರೆಲ್ಲರು ನನ್ನನ್ನು ಆಯ್ಕೆ ಮಾಡಿ ಜವಾಬ್ದಾರಿ ಹೆಚ್ಚಿಸಿದ್ದಾರೆ. ಇದನ್ನು ಅಧಿಕಾರ ಎಂದು ಭಾವಿಸದೇ ಸಹಕಾರಿಗಳಿಗೆ ಸೇವೆ ಮಾಡುವ ಜವಾಬ್ದಾರಿ ಎಂದು ಭಾವಿಸಿದ್ದೇನೆ. ಎಲ್ಲ ಶಾಸಕರ ಸಹಕಾರ ಪಡೆದು ಮತ್ತಷ್ಟು ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಎಲ್ಲ ಪ್ಯಾಕ್ಸ್ ಗಳನ್ನು ಮತ್ತಷ್ಟು ಆರ್ಥಿಕವಾಗಿ ವೃದ್ದಿಸುವುದು, ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವ ಎಸ್‌ಎಚ್‌ಜಿ ಸಾಲ ಹೆಚ್ಚಿಸುವುದು ಮತ್ತು ಬಿಡಿಸಿಸಿ ಬ್ಯಾಂಕಿನೊಂದಿಗೆ ವ್ಯವಹರಿಸುವುದು, ಸಹಾಯಧನ ನೀಡುವುದು. ರೈತರಿಗೆ ಸಬ್ಸಿಡಿಸಾಲ ಹೆಚ್ಚಳದಂತಹ ಯೋಜನೆಗಳನ್ನು ಬಿಡಿಸಿಸಿ ಬ್ಯಾಂಕ್‌ನಲ್ಲಿಯೂ ಕಾರ್ಯ ರೂಪಕ್ಕೆ ತರಲಾಗುವುದು. ಐದು ಪ್ಯಾಕ್ಸ್ ಗಳಿಗೆ ಸ್ವಂತ ಕಟ್ಟಡದ ಅವಶ್ಯಕತೆಯಿದ್ದು, ಶಾಸಕರು, ವಿಧಾನ ಪರಿಷತ್ ಸದಸ್ಯರಿಂದ ಅನುದಾನ ತಂದು ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ರಸಗೊಬ್ಬರ ದಾಸ್ತಾನು ಗೋದಾಮಿಗೆ ಪಾದರಹಳ್ಳಿ ಬಳಿ 2ಎಕರೆ ಜಾಗ ಗುರುತಿಸಲಾಗಿದೆ. ರಾಜ್ಯ ಸಹಕಾರ ಮಾರಾಟ ಮಹಾಮಂಡಳದವರು ಟೆಂಡರ್ ಕರೆದು ಕೆಲಸ ಆರಂಬಿಸಬೇಕಿದೆ. ಇದಕ್ಕೆ ಶಾಸಕರಾದ ಎಚ್.ಎ.ಇಕ್ಬಾಲ್‌ಹುಸೇನ್ ಸಂಪೂರ್ಣ ಸಹಕಾರ ನೀಡಿದ್ದಾರೆ. ಇದು ಕಾರ್ಯಗತವಾದರೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ರಸಗೊಬ್ಬರವನ್ನು ಸುಲಭವಾಗಿ ಪೂರೈಸಲು ಅನುಕೂಲ ವಾಗಲಿದೆ ಎಂದು ಯರೇಹಳ್ಳಿ ಮಂಜು ತಿಳಿಸಿದರು.

ತಾಪಂ ಮಾಜಿ ಅಧ್ಯಕ್ಷ ಎಸ್.ಪಿ.ಜಗದೀಶ್ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಕಳೆದ ಅವಧಿಯಲ್ಲಿ ಯರೇಹಳ್ಳಿ ಮಂಜು ಅವರು ಮಾಡಿದ ಕೆಲಸಗಳನ್ನು ಗುರುತಿಸಿ ಎರಡನೇ ಬಾರಿಗೆ ಸಹಕಾರಿಗಳು ಅವಿರೋಧ ಆಯ್ಕೆ ಮಾಡಿದ್ದಾರೆ. ಮತ್ತಷ್ಟು ಈ ಕ್ಷೇತ್ರದಲ್ಲಿ ಕೆಲಸ ಮಾಡಲಿ ಎಂದು ಶುಭ ಕೋರಿದರು.

ಟಿಎಪಿಸಿಎಂಎಸ್ ನಿರ್ದೇಶಕ ಅಪ್ಪಾಜಿ, ವಿಎಸ್‌ಎಸ್‌ಎನ್ ಅಧ್ಯಕ್ಷರಾದ ಜಯ್‌ಕುಮಾರ್, ಶ್ರೀಧರ್, ಮುಖಂಡರಾದ ವೀರಭದ್ರಯ್ಯ, ಕೃಷ್ಣಣ್ಣ, ನರಸಿಂಹಮೂರ್ತಿ, ಪಂಚಾಕ್ಷರಿ, ಜಾಲಮಂಗಲ ದೊರೆಸ್ವಾಮಿ, ರಾಮಕೃಷ್ಣಯ್ಯ, ಅರ್ಚಕರಹಳ್ಳಿ ವಿಎಸ್‌ಎಸ್‌ಎಸ್‌ಎನ್‌ನ ಶಂಕರ್ ಇದ್ದರು.

(ಕೆಳಗಿನ ಕೋಟ್‌ನ್ನು ಪ್ಯಾನಲ್‌ನಲ್ಲಿ ಬಳಸಿ)

ಕೋಟ್ ...................

ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್‌ನ 16 ನಿರ್ದೇಶಕರು ಆಯ್ಕೆಯಾಗಿದ್ದೇವೆ. ಡಿ.ಕೆ.ಸುರೇಶ್ ಮತ್ತು ಬ್ಯಾಂಕಿನ ವ್ಯಾಪ್ತಿಗೆ ಬರುವ 18 ಶಾಸಕರು ಚರ್ಚೆ ನಡೆಸಿ ಆ ಸ್ಥಾನಗಳನ್ನು ನಿಭಾಯಿಸಲು ಯಾರು ಅರ್ಹರೆಂಬುದನ್ನು ತೀರ್ಮಾನಿಸುವರು. ಅವರ ಮಾರ್ಗದರ್ಶನ, ಅಣತಿಯಂತಿಯೇ ಎಲ್ಲ ನಿರ್ದೇಶಕರು ನಡೆದುಕೊಳ್ಳುತ್ತೇವೆ. ನಮ್ಮೆಲ್ಲರ ಉದ್ದೇಶ ಸಹಕಾರಿಗಳ ಜೊತೆಯಿದ್ದು, ಅವರಿಗೆ ಸರ್ಕಾರದ ಸವಲತ್ತು ನೀಡಿ ಆರ್ಥಿಕವಾಗಿ ಸಬಲರನ್ನಾಗಿಸಲು ನೆರವಾಗುವ ಕೆಲಸ ಮಾಡುತ್ತೇವೆ.

-ಯರೇಹಳ್ಳಿ ಮಂಜು, ನಿರ್ದೇಶಕರು, ಬಿಡಿಸಿಸಿ ಬ್ಯಾಂಕ್

9ಕೆಆರ್ ಎಂಎನ್ 3.ಜೆಪಿಜಿ

ಬಿಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಯರೇಹಳ್ಳಿ ಮಂಜು ಅವರನ್ನು ಪ್ಯಾಕ್ಸ್ ವತಿಯಿಂದ ಅಭಿನಂದಿಸಲಾಯಿತು.

---------------------------