ಹಿರಿಯ ನಾಗರಿಕರ ಗೌರವಿಸುವ ಕಾರ್ಯ ಆಗಲಿ: ನ್ಯಾ. ರಂಗಸ್ವಾಮಿ

| Published : Oct 02 2024, 01:03 AM IST

ಸಾರಾಂಶ

ಹಿರಿಯರ ಮನಸ್ಸು ಮಕ್ಕಳ ಮನಸ್ಸಿದ್ದಂತೆ. ಹಿರಿಯರನ್ನು ಗೌರವಿಸುವ ಕಾರ್ಯ ಆಗಬೇಕು.

ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಯಲಬುರ್ಗಾ ಹಿರಿಯ ಸಿವಿಲ್ ನ್ಯಾಯಾಧೀಶ

ಕನ್ನಡಪ್ರಭ ವಾರ್ತೆ ಕುಕನೂರು

ಹಿರಿಯರ ಮನಸ್ಸು ಮಕ್ಕಳ ಮನಸ್ಸಿದ್ದಂತೆ. ಹಿರಿಯರನ್ನು ಗೌರವಿಸುವ ಕಾರ್ಯ ಆಗಬೇಕು ಎಂದು ಯಲಬುರ್ಗಾ ಹಿರಿಯ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜೆ. ಹೇಳಿದರು.

ತಾಲೂಕಿನ ತಳಕಲ್ ಗ್ರಾಮದ ಅಬ್ದುಲ್ ಅಜೀಜ್ ಸಮುದಾಯ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಗ್ರಾಮ ಪಂಚಾಯಿತಿ ತಳಕಲ್, ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಜರುಗಿದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ನಾಗರಿಕರನ್ನು ಗೌರವಿಸಬೇಕು. ಹಿರಿಯರು ಅನುಭವದ ಕಣಜ ಇದ್ದಂತೆ. ಹಿರಿಯರ ಅನುಭವ, ಆಶೀರ್ವಾದ ಸದಾ ಪ್ರತಿಯೊಬ್ಬರಿಗೂ ಇರಬೇಕು. ಹಿರಿಯ ನಾಗರಿಕರಿಗೆ ಸಿಗುವ ಸೌಲಭ್ಯವನ್ನು ಸರ್ಕಾರದಿಂದ ಅವರಿಗೆ ತಲುಪಿಸುವುದು ಪ್ರತಿಯೊಬ್ಬರ ಹೊಣೆ. ಆ ನಿಟ್ಟಿನಲ್ಲಿ ಹಿರಿಯ ನಾಗರಿಕರಿಗೆ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೆ ತೆರಳಿ ತಲುಪಿಸುವ ಕಾರ್ಯ ಆಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಳಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾಹೀರ ಬೇಗಂ ಜಾಕಿರ್ ಹುಸೇನ್ ಕೊಪ್ಪಳ ವಹಿಸಿದ್ದರು. ಉಪತಹಸೀಲ್ದಾರ ಮುರಳೀಧರರಾವ್ ಕುಲಕರ್ಣಿ, ಸಹಾಯಕ ಸರ್ಕಾರಿ ಅಭಿಯೋಜಕ ರವಿ ಹುಣಸಿ ಮರದ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಎಸ್. ಪಾಟೀಲ್, ಎಎಸ್ಐ ನಿಂಗಮ್ಮ, ವಕೀಲರಾದ ಈರಣ್ಣ ಕೋಳೂರು, ಆರ್‌.ಜಿ. ಕುಷ್ಟಗಿ, ಎಂ.ಎಸ್. ಸಾವಳಿಗೆಮಠ, ರಮೇಶ ಗಜಕೋಶ, ಜಗದೀಶ ತೊಂಡಿಹಾಳ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಿಂದಾಬಿ ಗುಡಗುಡಿ, ಗ್ರಾಪಂ ಸದಸ್ಯರಾದ ತಿಮ್ಮಣ್ಣ ಚವಡಿ, ಮಹಮ್ಮದ್ ಸಿರಾಜುದ್ದೀನ್, ಉಮೇಶಗೌಡ ಪೊಲೀಸ್ ಪಾಟೀಲ್, ವೀರೇಶ ಬಿಸನಳ್ಳಿ, ಚೈತ್ರಾ ಹಿರೇಗೌಡ್ರು, ರೇಣುಕಾ ಮಡಿವಾಳರ, ಗಂಗಾಧರರೆಡ್ಡಿ ಸೋಮರೆಡ್ಡಿ, ಕವಿತಾ ಹೈತಾಪುರ್, ಗ್ರಾಮ ಪಂಚಾಯಿತಿಯ ಪಿಡಿಒ ವೀರನಗೌಡ ಚನ್ನವೀರಗೌಡ್ರು ಇತರರಿದ್ದರು.