ಕ್ರಮ ಬದ್ಧ ಅಧ್ಯಯನ ಇರಲಿ

| Published : Feb 14 2024, 02:20 AM IST

ಸಾರಾಂಶ

ಈ ಭಾಗದ ವಿದ್ಯಾರ್ಥಿಗಳಿಗೆ ಭಾರತೀಯ ಆಡಳಿತ ಸೇವೆಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಹಾಗೂ ಆಸಕ್ತಿಯ ಕೊರತೆ ಇದೆ. ಕ್ರಮಬದ್ಧ ಅಧ್ಯಯನದಿಂದ ಅಂತಹ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯ ಎಂದು ಪರಿತ್ರಾಣಾಯ ಐಎಎಸ್ ತರಬೇತಿ ಕೇಂದ್ರದ ಅಧ್ಯಕ್ಷ ರಾಜೇಶ ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಈ ಭಾಗದ ವಿದ್ಯಾರ್ಥಿಗಳಿಗೆ ಭಾರತೀಯ ಆಡಳಿತ ಸೇವೆಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಹಾಗೂ ಆಸಕ್ತಿಯ ಕೊರತೆ ಇದೆ. ಕ್ರಮಬದ್ಧ ಅಧ್ಯಯನದಿಂದ ಅಂತಹ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯ ಎಂದು ಪರಿತ್ರಾಣಾಯ ಐಎಎಸ್‌ ತರಬೇತಿ ಕೇಂದ್ರದ ಅಧ್ಯಕ್ಷ ರಾಜೇಶ ಬಿರಾದಾರ ಹೇಳಿದರು.

ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪೂರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಈ ಪರೀಕ್ಷೆಯನ್ನುಕನ್ನಡದಲ್ಲಿಯೂ ಬರೆಯಬಹುದಾಗಿದ್ದರೂ ಇಂಗ್ಲಿಷ್‌ನ ಜ್ಞಾನ ಹೊಂದುವುದು ಅವಶ್ಯ. ನಿಯಮಿತವಾಗಿ ಪ್ರಮುಖ ಆಂಗ್ಲ ಪತ್ರಿಕೆಗಳನ್ನು ಓದಿ ಶಬ್ಧ ಭಂಡಾರ ಹೆಚ್ಚಿಸಿಕೊಳ್ಳಬೇಕು. ಜೊತೆಗೆ ಸಂವಹನ ಹಾಗೂ ಕಂಪ್ಯೂಟರ್‌ ಕೌಶಲಗಳನ್ನೂ ಬೆಳೆಸಿಕೊಳ್ಳಬೇಕು ಎಂದರು.

ಇತಿಹಾಸದ ಅಧ್ಯಯನದ ಜೊತೆಗೆ ಬೇರೆ ವಿಷಯಗಳ ಬಗ್ಗೆ ಕುತೂಹಲ ಬೇಕು. ವಿವಿಧ ಮೂಲಗಳಿಂದ ಮಾಹಿತಿ ಪಡೆದು ಜ್ಞಾನದ ಕ್ಷಿತಿಜ ವಿಸ್ತರಿಸಿಕೊಳ್ಳಲು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿ, ಪ್ರಾಮಾಣಿಕ ಪ್ರಯತ್ನ ಮತ್ತು ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಲಭ್ಯವಾಗುವ ಅವಕಾಶಗಳನ್ನು ಸರಿಯಾದ ಸಮಯದಲ್ಲಿ ಬಳಸಿಕೊಳ್ಳಬೇಕು. ಪೂರ್ವ ನಿರ್ಧರಿತ ಗುರಿಯನ್ನು ತಲುಪಲು ನಿರಂತರ ಪ್ರಯತ್ನ ಬೇಕು ಎಂದರು.

ಶ್ರೇಯಾ ಮುತ್ತತ್ತಿ ಪ್ರಾರ್ಥಿಸಿದರು. ಸುಷ್ಮಾ ದೇಸಾಯಿ ಸ್ವಾಗತಿಸಿದರು. ಪರಶುರಾಮ ಶಿಕ್ಕೇರಿ ಪರಿಚಯಿಸಿದರು. ಮೀನಾಕ್ಷಿ ಮನಗೂಳಿ ವಂದಿಸಿದರು. ಪಲ್ಲವಿ ಗೌಡರ ನಿರೂಪಿಸಿದರು. ಸಂಯೋಜಕ ಎಸ್.ವೈ.ಬೊಮ್ಮಣ್ಣವರ, ವಿದ್ಯಾರ್ಥಿ ಪ್ರತಿನಿಧಿ ಕಲ್ಮೇಶ ನಾವಿ, ಉಪನ್ಯಾಸಕರಾದ ಎಂ.ಡಿ.ಕೋರವಾರ, ಎ.ಎಸ್.ಚವ್ಹಾಣ, ಮೈತ್ರಾಗುಡೂರಇದ್ದರು.

--

(ಫೋಟೋ 12ಬಿಕೆಟಿ1