ಸಾರಾಂಶ
ತೀರ್ಥಹಳ್ಳಿ: ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ತಡೆಗಟ್ಟುವುದು ಮುಖ್ಯವಾಗಿದ್ದು, ಕೀಟಜನ್ಯದಿಂದ ಬರಬಹುದಾದ ಸಾಂಕ್ರಾಮಿಕ ರೋಗಗಳ ಬಗೆಗೆ ಜನರು ಜಾಗೃತಿ ವಹಿಸುವ ಅಗತ್ಯವಿದೆ ಎಂದು ಇಲ್ಲಿನ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ.ಪ್ರಕಾಶ್.ಕೆ.ಎಸ್ ತಿಳಿಸಿದರು.ತೀರ್ಥಹಳ್ಳಿ ಪಟ್ಟಣದ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್ ಮತ್ತು ವಸತಿ ಶಾಲಾ ವಾರ್ಡನ್‍ಗಳಿಗೆ ಆಯೋಜಿಸಲಾಗಿದ್ದ ಒಂದು ದಿನದ ಕೀಟಜನ್ಯ ರೋಗಗಳ ನಿಯಂತ್ರಣ ಕ್ರಮದ ಕುರಿತು ನಡೆದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಆರೋಗ್ಯ ಇಲಾಖೆಯ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಮತ್ತು ಸಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಬಹುದಾಗಿದೆ. ಸ್ವಚ್ಛತೆ ಬಹಳ ಮುಖ್ಯವಾಗಿದ್ದು, ಸ್ವಚ್ಛತೆ ಇಲ್ಲದ ಬೀದಿ ಬದಿಯ ಆಹಾರ ಸೇವನೆಯ ನಿಯಂತ್ರಣ ಅಗತ್ಯ. ಸೋಂಕು ಕಾಣಿಸಿಕೊಂಡಲ್ಲಿ ವಿಳಂಬ ಮಾಡದೇ ಚಿಕಿತ್ಸೆ ಪಡೆಯಬೇಕು. ಇಲಾಖೆಯೊಂದಿಗೆ ಸಮುದಾಯದ ಪಾಲ್ಗೊಳ್ಳುವಿಕೆಯೂ ಮುಖ್ಯ ಎಂದರು.ಸಂಪನ್ಮೂಲ ವ್ಯಕ್ತಿಗಳಾಗಿದ್ದ ಜಿಲ್ಲಾ ಎನ್‍ವಿಬಿಡಿಸಿಪಿ ಕಚೇರಿಯ ಪ್ರಭಾರ ಮೇಲ್ವಿಚಾರಕ ನಾರಾಯಣ್ ಅವರು ಸಾಂಕ್ರಾಮಿಕ ರೋಗಗಳ ಬಗ್ಗೆ ವಿವರಿಸಿ, ಹಾಸ್ಟೆಲ್ ಮತ್ತು ವಸತಿ ಶಾಲೆಗಳ ಮುಖ್ಯಸ್ಥರು ಅತ್ಯಂತ ಜಾಗರೂಕರಾಗಿರಬೇಕು. ಮತ್ತು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸುವ ಅಗತ್ಯವಿದೆ ಎಂದರು.ಜಿಲ್ಲಾ ಎನ್‍ವಿಬಿಡಿಸಿಪಿ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜು, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ವಿ.ಸತೀಶ್, ಹನುಮಂತ ರೆಡ್ಡಿ, ಸಂಜನಾ ಸೇರಿದಂತೆ ತಾಲೂಕಿನ ವಿವಿದ ಹಾಸ್ಟೆಲುಗಳ ವಾರ್ಡನ್‍ಗಳು ಭಾಗವಹಿಸಿದ್ದರು.