Be aware of the POCSO Act, children: Justice Kishan B. Madalagi

ಗಂಗಾಪರಮೇಶ್ವರ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

---

ಕನ್ನಡ ಪ್ರಭ ವಾರ್ತೆ ಚಿತ್ತಾಪುರ

ಪದವಿ ಅಥವಾ ಉನ್ನತ ಶಿಕ್ಷಣ ಪಡೆಯುತ್ತಿರುವ ಯುವ ಪೀಳಿಗೆ ಕೇವಲ ಪಠ್ಯದ ಜ್ಞಾನವಿದ್ದರೆ ಸಾಲದು ಸಮಾಜವನ್ನು ಸುರಕ್ಷಿತವಾಗಿಡಲು ಕಾನೂನಿನ ಅರಿವು ಪಡೆಯುವದು ಅನಿವಾರ್ಯ ಎಂದು ಹಿರಿಯ ಸಿವಿಲ್ ನ್ಯಾ. ಕಿಶನ್.ಬಿ.ಮಾಡಲಗಿ ಹೇಳಿದರು.

ಗಂಗಾಪರಮೇಶ್ವರ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಗಂಗಾಪರಮೇಶ್ವರಿ ಕಾಲೇಜಿನವರ ಸಂಯುಕ್ತಾಶ್ರಯದಲ್ಲಿ ಪೋಕ್ಸೋ ಕಾಯ್ದೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇತ್ತೀಚೆಗೆ ಸೈಬರ್ ಜಗತ್ತಿನಲ್ಲಿ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವ ಜಾಲ ಹೆಚ್ಚಾಗಿವೆ. ಈ ಕುರಿತು ಯುವ ಪೀಳಿಗೆ ಎಚ್ಚೆತ್ತುಕೊಳ್ಳಬೇಕು. ಪೊಕ್ಸೊ ಕಾಯ್ದೆಯನ್ನು ಭಾರತ ಸರ್ಕಾರವು ೨೦೧೨ ರಲ್ಲಿ ಜಾರಿಗೆ ತರಲಾಗಿದೆ.

ಈ ಕಾನೂನಿನ ಪ್ರಕಾರ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಬ್ಬರನ್ನು ಮಗು ಎಂದು ಪರಿಗಣಿಸಲಾಗುತ್ತದೆ.

ಮಕ್ಕಳ ಮೇಲೆ ನಡೆವ ಲೈಂಗಿಕ ದೌರ್ಜನ್ಯ ಕಿರುಕುಳ, ಅಶ್ಲೀಲತೆಯಂತಹ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವುದು ಈ ಕಾಯ್ದೆಯ ಮುಖ್ಯ ಉದ್ದೇಶ ಎಂದರು.

ನಮ್ಮ ಸುತ್ತಮುತ್ತಲಿನವರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ತಿಳಿದರೆ ಅದನ್ನು ತಕ್ಷಣ ಪೊಲಿಸರಿಗೆ ಅಥವಾ ಮಕ್ಕಳಸಹಾಯವಾಣಿಗೆ ತಿಳಿಸಬೇಕು ಇದು ಪ್ರತಿಯೊಬ್ಬರ ಜವಬ್ದಾರಿಯುತ ನಾಗರಿಕರ ಕರ್ತವ್ಯವಾಗಿದೆ ಎಂದು ಹೇಳಿದರು.

ನ್ಯಾ. ಅಭಿಷೇಕ ಆರ್‌. ಜೊಷಿ, ಪ್ರಾಚಾರ್ಯ ಮುರುಳಿಧರ ಪಾಟೀಲ್ ಮಾತನಾಡಿದರು.

ನ್ಯಾಯವಾದಿ ಎ.ಎಮ್ ಅವಂಟಿ ಪೊಕ್ಸೊ ಕಾಯ್ದೆ ಹಾಗೂ ಜೀವನದಲ್ಲಿ ಕುರಿತು ಉಪನ್ಯಾಸ ನೀಡದರು.

ಅಪರ ಜಿಲ್ಲಾ ಸರ್ಕಾರಿ ವಕೀಲ ವಿ.ಅರ್ ಕಾಂತಾ, ಸಹಾಯಕ ಸರ್ಕಾರಿ ಅಭಿಯೊಜಕಿ ಅಂಜನಾದೇವಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸೊಮಶೇಖರ ಕರದಳ್ಳಿ ಇದ್ದರು.

ಪೋಟೋ: ೨೮-೧೦ ಸಿಟಿಪಿಅರ್ ೧

ಚಿತ್ತಾಪುರ ಗಂಗಾಪರಮೇಶ್ವರಿ ಕಾಲೇಜು ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಗಂಗಾಪರಮೇಶ್ವರಿ ಕಾಲೇಜಿನವರ ಸಂಯುಕ್ತಾಶ್ರಯದಲ್ಲಿ ಪೋಕ್ಸೋ ಕಾಯ್ದೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾ. ಕಿಶನ್ ಮಾಡಲಗಿ ಉದ್ಘಾಟಿಸಿದರು.