ಸಾರಾಂಶ
ಕ್ಷಯ ರೋಗದ ಬಗ್ಗೆ ನಿರ್ಲಕ್ಷ ವಹಿಸುವುದು ಸೂಕ್ತವಲ್ಲ. ಸಕಾಲಕ್ಕೆ ಔಷಧಿ ಮಾತ್ರೆ ಪಡೆದುಕೊಂಡರೆ ರೋಗ ಬರದಂತೆ ತಡೆಗಟ್ಟಬಹುದು. ಆದ್ದರಿಂದ ಪ್ರತಿಯೊಬ್ಬರು ಎಚ್ಚರಿಕೆ ಹಾಗೂ ಮುಂಜಾಗ್ರತೆಯಿಂದ ಇರಬೇಕು. ಕ್ಷಯ ರೋಗದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಹೋಗಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕ್ಷಯ ರೋಗವಾದರೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ.
ಕನ್ನಡಪ್ರಭ ವಾರ್ತೆ ಹಲಗೂರು
ಕ್ಷಯರೋಗದ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸೌಮ್ಯಶ್ರೀ ತಿಳಿಸಿದರು.ಚನ್ನಪಟ್ಟಣದ ರಸ್ತೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆರೋಗ್ಯದ ಬಗ್ಗೆ ಇರಲಿ ಗಮನ, ಟಿಬಿ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ನೂರು ದಿನಗಳಲ್ಲಿ ಕ್ಷಯರೋಗ ಮತ್ತು ಚಿಕಿತ್ಸೆ ಆಂದೋಲನದೊಂದಿಗೆ 2025ಕ್ಕೆ ಪ್ರತಿ ಗ್ರಾಮವನ್ನು ಕ್ಷಯರೋಗ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ನಡೆಸಿದ್ದೇವೆ ಎಂದರು.
ಕ್ಷಯ ರೋಗದ ಬಗ್ಗೆ ನಿರ್ಲಕ್ಷ ವಹಿಸುವುದು ಸೂಕ್ತವಲ್ಲ. ಸಕಾಲಕ್ಕೆ ಔಷಧಿ ಮಾತ್ರೆ ಪಡೆದುಕೊಂಡರೆ ರೋಗ ಬರದಂತೆ ತಡೆಗಟ್ಟಬಹುದು. ಆದ್ದರಿಂದ ಪ್ರತಿಯೊಬ್ಬರು ಎಚ್ಚರಿಕೆ ಹಾಗೂ ಮುಂಜಾಗ್ರತೆಯಿಂದ ಇರಬೇಕು ಎಂದರು.ಕ್ಷಯ ರೋಗದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಹೋಗಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕ್ಷಯ ರೋಗವಾದರೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಎಲ್ಲಾ ಸೌಲಭ್ಯ ದೊರಕುತ್ತದೆ. ಯಾರಿಗಾದರೂ ಎದೆ ನೋವು ಕಂಡು ಬಂದರೆ ಅತಿಯಾಗಿ ಬೆವರುವುದು, ಸುಸ್ತಾಗುವುದು, ತಲೆ ಸುತ್ತುವುದು, ವಾಂತಿ ಬರುವಂತೆ ಆಗುವ ಲಕ್ಷಣ ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಬಂದರೆ ಈಸಿಜಿ ಪರೀಕ್ಷೆ ಉಚಿತವಾಗಿ ನಡೆಸಲಾಗುತ್ತದೆ ಎಂದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ಆರ್.ಶಶಿಕಲಾ ಶ್ರೀನಿವಾಸಾಚಾರಿ ಅವರು, ಕ್ಷಯ ರೋಗ ತಡೆಗಟ್ಟುವ ಹಾಗೂ ಹೇಗೆ ಮುಂಜಾಗ್ರತೆ ವಹಿಸಬೇಕು ಎಂಬ ಎಚ್ಚರಿಕೆ ಪತ್ರ ಬಿಡುಗಡೆ ಮಾಡಿದರು.
ಈ ವೇಳೆ ಕೆ.ಎಂ.ನಂದೀಶ್, ಆಶಾಲತಾ, ಆಶಾ ಕಾರ್ಯಕರ್ತರು, ಹಲಗೂರು ಲಯನ್ಸ್ ಕ್ಲಬ್ ಸದಸ್ಯರಾದ ಡಿ.ಎಲ್. ಮಾದೇಗೌಡ, ಎಚ್.ವಿ.ರಾಜು, ಮನೋಹರ, ಪದ್ಮನಾಭ , ಶಿವರಾಜು, ಎಚ್.ಎಸ್ .ಕೃಷ್ಣ ಸೇರಿದಂತೆ ಇತರರು ಹಾಜರಿದ್ದರು.