ಸಾರಾಂಶ
ತರೀಕೆರೆ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸುವ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಊರ್ಮಿಳಾ ಹೇಳಿದರು.
ತರೀಕೆರೆಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸುವ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಊರ್ಮಿಳಾ ಹೇಳಿದರು.ಕಾನೂನು ನೆರವು ಸಮಿತಿ, ವಕೀಲರ ಸಂಘ, ಶಿಶು ಅಭಿವೃದ್ಧಿ ಇಲಾಖೆ, ಪೊಲೀಸ್ ಮತ್ತು ಶಿಕ್ಷಣ ಇಲಾಖೆ, ಬಾಲಿಕಾ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಲವು ಫೇಕ್ ವೀಡಿಯೋಗಳು ಕೆಲವರನ್ನು ದಾರಿ ತಪ್ಪಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಬಹಳ ಜನರನ್ನು ದಾರಿ ತಪ್ಪಿಸುವ ಹಂತ ತಲುಪಿದೆ. ವಿದ್ಯಾರ್ಥಿಗಳು ಫೋಕ್ಸೊ ಕಾಯ್ದೆ ಬಗ್ಗೆ ತಿಳಿಯಬೇಕು. ಅಪರಿಚಿತರು ಚಾಕಲೇಟ್, ಮೊಬೈಲ್, ಬಟ್ಟೆ ಕೊಡಿಸುತ್ತೇನೆ ಎಂದು ಕರೆದರೆ ಯಾರು ಹೋಗಬಾರದು, ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.ನಿಮನ್ನು ಲೈಂಗಿಕವಾಗಿ ಬಲಾತ್ಕಾರವಾಗಿ ಹಿಂಸೆ ಕೊಟ್ಟರೆ, ಶಾಲೆಯಲ್ಲಿ ಇಂತಹ ಘಟನೆ ನಡೆದರೆ ಮುಖ್ಯೋಪಾದ್ಯಾಯರಿಗೆ ತಿಳಿಸಿ, ಅಂಗನವಾಡಿ, ಪೊಲೀಸ್, ಶಿಶು ಅಭಿವೃದ್ಧಿ ಇಲಾಖೆಗೆ ತಿಳಿಸಿದರೆ ನಿಮ್ಮ ರಕ್ಷಣೆ ಮಾಡಲಾಗುತ್ತದೆ ಇಂದಿನ ದಿನಗಳಲ್ಲಿ ಡ್ರಗ್ಸ್ ಜಾಲ ಹೆಚ್ಚಾಗುತ್ತಿದೆ. ಚಾಕಲೇಟ್ ತರಹದ ಡಗ್ಸ್ ನೀಡಿ ನಿಮ್ಮನ್ನು ಕೆಟ್ಟ ಹಾದಿಗೆ ತರುತ್ತಿದ್ದಾರೆ ಎಂದು ವಿವರಿಸಿದರು.ಹಿರಿಯ ವಕೀಲ ಎಸ್.ಸುರೇಶ್ ಚಂದ್ರ ಮಾತನಾಡಿ ಕಾನೂನು ಸೇವಾ ಸಮಿತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ವಕೀಲ ಎನ್.ವೀರಭದ್ರಪ್ಪ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ಶಾಲೆಗೆ ಕೀರ್ತಿ ತರಬೇಕು. ಸಾಂತ್ವನ ಕೇಂದ್ರದ ಬಗ್ಗೆ ಮಾಹಿತಿ ತಿಳಿಸಿದರು.
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನಾಗೇಂದ್ರ ನಾಯ್ಕ ಮಾತನಾಡಿ ಮಕ್ಕಳು ವಾಹನ ಓಡಿಸುತ್ತಿರುವುದು ಕಂಡು ಬರುತ್ತಿದೆ. 18 ವರ್ಷ ಮೇಲ್ಪಟ್ಟವರು ಲೈಸನ್ಸ್ ಪಡೆದು ಮಾತ್ರ ಓಡಿಸಬೇಕು. ಪ್ರೀತಿ ಪ್ರೇಮ ಬಲೆಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಹೇಳಿದರು.ವಕೀಲ ಬಿ.ಪಿ.ವಿಕಾಸ್ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.--
30ಕೆಟಿಆರ್.ಕೆ.6ಃ ತರೀಕೆರೆಯಲ್ಲಿ ನಡೆದ ಕಾರ್ಯಕ್ರಮವನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಊರ್ಮಿಳಾ ಉದ್ಘಾಟಿಸಿದರು. ಹಿರಿಯ ವಕೀಲ ಎಸ್.ಸುರೇಶ್ ಚಂದ್ರ ಮತ್ತಿತರರು ಇದ್ದರು.