ಸಾರಾಂಶ
ಪರಿಸರ, ಆರೋಗ್ಯ ಸುರಕ್ಷತೆ ನಿಯಮ ಪಾಲಿಸಿ. ಹಗಲು ವೇಳೆಯೇ ಗಣಪತಿ ವಿಸರ್ಜನೆ ಮಾಡಿ. ಹಬ್ಬದಲ್ಲಿ ಬಳಸುವ ಬಾಳೆಕಂದು, ಹೂವು, ಮಾವಿನ ಸೊಪ್ಪು ಮತ್ತಿತರ ವಸ್ತುಗಳನ್ನು ಕೆರೆಕಟ್ಟೆಗೆ ಬಿಸಾಡದೆ ಹೊರಗಡೆ ಒಂದೆಡೆ ಹಾಕಿ. ರಸಮಂಜರಿ ಮತ್ತಿತರ ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಕಡ್ಡಾಯವಾಗಿ ಪಡೆಯಬೇಕು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪರಿಸರ, ಸಾರ್ವಜನಿಕರಿಗೆ ಕಿರಿಕಿರಿಯಾಗದಂತೆ ಗಣೇಶೋತ್ಸವ ಆಚರಿಸುವಂತೆ ಕಿಕ್ಕೇರಿ ಠಾಣೆಇನ್ಸ್ ಪೆಕ್ಟರ್ ರೇವತಿ ಹೇಳಿದರು.ಪಟ್ಟಣದ ಕುರುಹಿನಶೆಟ್ಟಿ ಯುವಬಳಗ ಏರ್ಪಡಿಸಿದ್ದ ಗಣೇಶೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಗಣೇಶ ಹಬ್ಬ ಸಾಮರಸ್ಯ, ಭಾವೈಕ್ಯತೆ ಬೆಸೆಯುವ ಹಬ್ಬ. ರಸ್ತೆ ಜಾಮ್ ಮಾಡುವುದು, ಪಟಾಕಿ ಸುಟ್ಟು ಪರಿಸರ ಮಾಲಿನ್ಯ ಮಾಡುವುದು, ಡಿಜೆ ಹಾಕಿಕೊಂಡು ವಯೋವೃದ್ಧರಿಗೆ, ಎಳೆಯ ಮಕ್ಕಳಿಗೆ, ಗರ್ಭಿಣಿಯರಿಗೆ, ಹೃದ್ರೋಗಿಗಳಿಗೆ ಅತಿಯಾದ ಶಬ್ಧದಿಂದ ಹಿಂಸೆ ನೀಡುವುದನ್ನು ಮಾಡಬಾರದು ಎಂದರು.
ಪರಿಸರ, ಆರೋಗ್ಯ ಸುರಕ್ಷತೆ ನಿಯಮ ಪಾಲಿಸಿ. ಹಗಲು ವೇಳೆಯೇ ಗಣಪತಿ ವಿಸರ್ಜನೆ ಮಾಡಿ. ಹಬ್ಬದಲ್ಲಿ ಬಳಸುವ ಬಾಳೆಕಂದು, ಹೂವು, ಮಾವಿನ ಸೊಪ್ಪು ಮತ್ತಿತರ ವಸ್ತುಗಳನ್ನು ಕೆರೆಕಟ್ಟೆಗೆ ಬಿಸಾಡದೆ ಹೊರಗಡೆ ಒಂದೆಡೆ ಹಾಕಿ. ರಸಮಂಜರಿ ಮತ್ತಿತರ ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಕಡ್ಡಾಯವಾಗಿ ಪಡೆಯಬೇಕು ಎಂದರು.ಈ ವೇಳೆ ಸೂರ್ಯನಾರಾಯಣ, ಉಮೇಶ್, ವೆಂಕಟೇಶ, ನವೀನ, ಸೋಮ, ದೀಪು, ಲಕ್ಷ್ಮೀಕಾಂತ ಮತ್ತಿತರರು ಉಪಸ್ಥಿತರಿದ್ದರು.ಗಣೇಶಮೂರ್ತಿ ಅದ್ಧೂರಿ ಮೆರವಣಿಗೆ, ವಿಸರ್ಜನೆ
ಹಲಗೂರು:ವಿದ್ಯಾ ಗಣಪತಿ ದೇವಸ್ಥಾನದಲ್ಲಿ ವಿನಾಯಕ ಯುವಕ ಮಿತ್ರ ಮಂಡಳಿಯಿಂದ ಗಣೇಶಹಬ್ಬದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿಗೆ ಮೂರು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಿಜೃಂಬಣೆಯಿಂದ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು.
ಶ್ರೀವಿದ್ಯಾ ಗಣಪತಿ ದೇವಸ್ಥಾನದ ಆವರಣದಿಂದ ಟ್ರ್ಯಾಕ್ಟರ್‌ನಲ್ಲಿ ಗಣಪತಿ ಮೂರ್ತಿ ಕೂರಿಸಿ ವಿವಿಧ ಪುಷ್ಪಗಳಿಂದ ಅಲಂಕರಿಸಿ ಮೆರವಣಿಗೆ ನಡೆಸಿದರು. ಈ ವೇಳೆ ದೇವರ ಕುಣಿತ, ವೀರಗಾಸೆ ಕುಣಿತ ನಡುವೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗಮನ ಸೆಳೆಯಿತು. ನಂತರ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.