ನೀರು ಪೋಲಾಗದಂತೆ ಎಚ್ಚರ ವಹಿಸಿ: ಶಾಸಕ ಹರೀಶ್‌

| Published : Apr 13 2025, 02:02 AM IST

ನೀರು ಪೋಲಾಗದಂತೆ ಎಚ್ಚರ ವಹಿಸಿ: ಶಾಸಕ ಹರೀಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಸದುದ್ದೇಶದಿಂದ ಮನೆ ಮನೆಗೆ ಗಂಗೆ ಯೋಜನೆ ಜಾರಿಗೊಳಿಸಿದೆ. ನಾಗರೀಕರು ನೀರು ಪೋಲಾಗದಂತೆ ಎಚ್ಚರ ವಹಿಸಬೇಕು. ನೀರು ತುಂಬಿಕೊಂಡ ತಕ್ಷಣವೇ ನಳವನ್ನು ಬಂದ್ ಮಾಡಿ, ನೀರು ಉಳಿತಾಯಕ್ಕೆ ಸಹಕರಿಸಬೇಕು ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದ್ದಾರೆ.

- ಕಡ್ಳೆಗೊಂದಿ, ಸಲಗನಹಳ್ಳಿಯಲ್ಲಿ ನಿರಂತರ ನೀರು ಸರಬರಾಜು ಯೋಜನೆಗೆ ಚಾಲನೆ

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ಸರ್ಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಸದುದ್ದೇಶದಿಂದ ಮನೆ ಮನೆಗೆ ಗಂಗೆ ಯೋಜನೆ ಜಾರಿಗೊಳಿಸಿದೆ. ನಾಗರೀಕರು ನೀರು ಪೋಲಾಗದಂತೆ ಎಚ್ಚರ ವಹಿಸಬೇಕು. ನೀರು ತುಂಬಿಕೊಂಡ ತಕ್ಷಣವೇ ನಳವನ್ನು ಬಂದ್ ಮಾಡಿ, ನೀರು ಉಳಿತಾಯಕ್ಕೆ ಸಹಕರಿಸಬೇಕು ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ಇಲ್ಲಿಗೆ ಸಮೀಪದ ಕಡ್ಳೆಗೊಂದಿ ಮತ್ತು ಸಲಗನಹಳ್ಳಿ ಗ್ರಾಮಗಳಲ್ಲಿ ಶನಿವಾರ ೨೪/೭ ನಿರಂತರ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿ ಕಡ್ಳೆಗೊಂದಿ ಗ್ರಾಮದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ನೀರು ಬಾರದಿದ್ದಲ್ಲಿ ನಳಗಳನ್ನು ಕತ್ತರಿಸಿ ಕೆಳಭಾಗದಲ್ಲಿ ಪೈಪ್‌ಗಳನ್ನು ಅಳವಡಿಸಿಕೊಳ್ಳಬೇಡಿ. ಅದರಿಂದ ಯೋಜನೆಯ ಆಶಯ ಸಫಲವಾಗುವುದಿಲ್ಲ. ಬೇರೆ ದೇಶಗಳಲ್ಲಿ ನೀರಿಲ್ಲದೇ ಮರಣ ಸಂಭವಿಸುವುದನ್ನು ಕಾಣುತ್ತೇವೆ. ಆದಷ್ಟು ಪ್ರಕೃತಿ ಮಾತೆಯನ್ನು ಗೌರವಿಸಿ, ಜಲಮೂಲಗಳನ್ನು ರಕ್ಷಿಸಿ ಎಂದು ಮನವಿ ಮಾಡಿದರು.

ಆರಂಭದಲ್ಲಿ ಶಾಸಕ ಬಿ.ಪಿ. ಹರೀಶ್ ನೀರು ಬಳಕೆ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಾ ಮಹೇಶ್, ಉಪಾಧ್ಯಕ್ಷೆ ಮಂಜಮ್ಮ, ಪಿಡಿಒ ಲಕ್ಷ್ಮೀಬಾಯಿ, ಕಾರ್ಯದರ್ಶಿ ಕೆ.ಜಿ. ಸಿದ್ದಪ್ಪ, ಗ್ರಾಮಸ್ಥರಾದ ಹನುಮಂತ ರೆಡ್ಡಿ, ಬಸಪ್ಪರೆಡ್ಡಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಗಿರೀಶ್, ಗ್ರಾಮೀಣ ನೀರು ಸರಬರಾಜು ಇಲಾಖೆಯ ಉಮಾ ಮಹೇಶ್, ಯೋಜನಾ ವ್ಯವಸ್ಥಾಪಕ ಜಗದೀಶ್, ದೇವರಾಜ್. ಸ್ಮಿತಾ, ಗ್ರಾಪಂ ಸದಸ್ಯರು, ಮಹಿಳಾ ಸಂಘಗಳ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

- - -

(ಬಾಕ್ಸ್‌) * ನೀರು ನಿರ್ವಹಣೆಗೆ ಜಲಮಿತ್ರರ ನಿಯೋಜನೆ ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ, ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಮನೆಮನೆಗೆ ಗಂಗೆ ಯೋಜನೆ ಜಾರಿಯಾಗಿದೆ. ದಾವಣಗೆರೆ ಜಿಲ್ಲೆಯ ಐದು ಗ್ರಾಮಗಳಲ್ಲಿ ನಿರಂತರ ಶುದ್ಧ ನೀರು ನೀಡಲು ಘೋಷಣೆ ಮಾಡಲಾಗಿದೆ. ಶುದ್ಧ ನೀರು ಸೇವನೆಯಿಂದ ಜನರ ಆರೋಗ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಸುಧಾರಣೆಯಾಗಿದೆ. ನೀರು ನಿರ್ವಹಣೆಯನ್ನು ಸ್ಥಳೀಯ ಮಹಿಳಾ ಸಂಘಗಳಿಗೆ ವಹಿಸಲಾಗಿದೆ. ಇಬ್ಬರು ಮಹಿಳೆಯರನ್ನು ಜಲಮಿತ್ರರನ್ನಾಗಿ ನಿಯೋಜನೆ ಮಾಡಲಾಗಿದೆ. ನಾಗರೀಕರು ನೀರು ಬಳಸಿದ ನಂತರ ಮಾಸಿಕ ಶುಲ್ಕ ಪಾವತಿ ಮಾಡಬೇಕಿದೆ. ಆ ಶುಲ್ಕದಿಂದ ನಳ, ಪೈಪ್ ದುರಸ್ತಿಗೆ ಬಳಸಲಾಗುತ್ತದೆ ಎಂದರು.

- - -

-೧೨ಎಂಬಿಆರ್೧.ಜೆಪಿಜಿ:

ಕಡ್ಳೆಗೊಂದಿ ಗ್ರಾಮದಲ್ಲಿ ನೀರು ಹಿತಮಿತ ಬಳಕೆ ಬಗ್ಗೆ ಶಾಸಕ ಹರೀಶ್ ಪ್ರತಿಜ್ಞಾವಿಧಿ ಬೋಧಿಸಿದರು.