ವಿದ್ಯುತ್‌ ಕರ್ತವ್ಯದಲ್ಲಿ ಎಚ್ಚರ ವಹಿಸಿ: ದೇವೇಂದ್ರಪ್ಪ

| Published : Nov 19 2024, 12:50 AM IST

ಸಾರಾಂಶ

ಬೆಸ್ಕಾಂ ಸಿಬ್ಬಂದಿ ವಿದ್ಯುತ್‌ ಸೇವೆ ಸಂಬಂಧ ಕರ್ತವ್ಯ ನಿರ್ವಹಿಸುವಾಗ ಯಾವುದೇ ಅಪಾಯಗಳು ಆಗದಂತೆ ಕೆಲಸ ನಿರ್ವಹಿಸಬೇಕೆಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.

- ಬೆಸ್ಕಾಂ ಕಾರ್ಯ-ಪಾಲನಾ ಉಪ ವಿಭಾಗ ಕಚೇರಿ ಕಟ್ಟಡ ಉದ್ಘಾಟನೆ - - - ಕನ್ನಡಪ್ರಭ ವಾರ್ತೆ ಜಗಳೂರು

ಬೆಸ್ಕಾಂ ಸಿಬ್ಬಂದಿ ವಿದ್ಯುತ್‌ ಸೇವೆ ಸಂಬಂಧ ಕರ್ತವ್ಯ ನಿರ್ವಹಿಸುವಾಗ ಯಾವುದೇ ಅಪಾಯಗಳು ಆಗದಂತೆ ಕೆಲಸ ನಿರ್ವಹಿಸಬೇಕೆಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಡಾ.ಅಂಬೇಡ್ಕರ್ ವೃತ್ತ ಸಮೀಪ ನೂತನವಾಗಿ ನಿರ್ಮಿಸಿರುವ ಬೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗ ಕಚೇರಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ನನ್ನ ಅಧಿಕಾರವಧಿಯಲ್ಲಿ ಅತಿ ಕಡಿಮೆ ಸಮಯವಾದ 9 ತಿಂಗಳಲ್ಲೇ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಇಂದು ಲೋಕಾರ್ಪಣೆ ಸಂತಸದ ಸಂಗತಿ ಎಂದರು.

ರೈತ ಬದುಕಿಗೆ ಬೆಸ್ಕಾಂ ಶ್ರಮ ಅಗತ್ಯವಾಗಿದೆ. ರೈತರ ಜಮೀನಿನ ಬೋರ್‌ನಲ್ಲಿ ಎಷ್ಟೇ ನೀರಿದ್ದರೂ ಮೇಲೆತ್ತಲು ವಿದ್ಯುತ್ ಅತ್ಯವಶ್ಯಕ. ಸಿಬ್ಬಂದಿ, ವಾಹನಗಳ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಇಂಧನ ಸಚಿವರ ಬಳಿ ಚರ್ಚಿಸಿ ಅಗತ್ಯತೆಗಳನ್ನೂ ಪೂರೈಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಇಲಾಖೆಗಳು ಬದ್ಧವಾಗಿ ಕರ್ತವ್ಯ ನಿರ್ವಹಿಸಿ, ನಿಮ್ಮೊಂದಿಗೆ ನಾವು ಇರುತ್ತೇವೆ ಎಂದು ಭರವಸೆ ನೀಡಿದರು.

ಪಪಂ ಅಧ್ಯಕ್ಷ ನವೀನ್ ಕುಮಾರ್, ಪಪಂ ಸದಸ್ಯೆ ಲಲಿತಾ, ನಿರ್ಮಲ ಕುಮಾರಿ, ಕಾರ್ಯನಿರ್ವಾಹಕ ಅಭಿಯಂತರ ಎ.ಕೆ. ತಿಪ್ಪೇಸ್ವಾಮಿ, ಅಧೀಕ್ಷಕ ಎಂಜಿನಿಯರ್ ಎಸ್.ಕೆ. ಪಟೇಲ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುಧಾಮಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಸಿಪಿಐ ಶ್ರೀನಿವಾಸ್ ರಾವ್, ಪಪಂ ನಾಮ ನಿರ್ದೇಶಿತ ಸದಸ್ಯ ಕುರಿ ಜಯಣ್ಣ, ಗುತ್ತಿಗೆದಾರ ಸಂಘದ ಅಧ್ಯಕ್ಷ ಮುನಿಯಣ್ಣ, ಕಾಂಗ್ರೆಸ್ ಮುಖಂಡ ಪಲ್ಲಾಗಟ್ಟೆ ಶೇಖರಪ್ಪ, ಬೆವಿಕಾಂ ಸಿಬ್ಬಂದಿ, ಅನೇಕರು ಉಪಸ್ಥಿತರಿದ್ದರು.

- - - -18ಜೆಜಿಎಲ್1:

ಜಗಳೂರು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಸಮೀಪ ನೂತನವಾಗಿ ನಿರ್ಮಿಸಿರುವ ಬೆಸ್ಕಾಂ ಕಾರ್ಯ ಮತ್ತು ಪಾಲನ ಉಪ ವಿಭಾಗ ಕಚೇರಿ ಕಟ್ಟಡವನ್ನು ಶಾಸಕ ಬಿ.ದೇವೇಂದ್ರಪ್ಪ ಉದ್ಘಾಟಿಸಿದರು.