ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸಲು ಉತ್ಸಾಹ ತೋರಿ

| Published : Sep 28 2024, 01:18 AM IST

ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸಲು ಉತ್ಸಾಹ ತೋರಿ
Share this Article
  • FB
  • TW
  • Linkdin
  • Email

ಸಾರಾಂಶ

ಜನಪರ ಆಗಿರುವ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಇಲಾಖೆಗಳು ಉತ್ಸಾಹ ತೋರಿಸಬೇಕು. ಗೊಂದಲಗಳ ಬಗ್ಗೆ ಕೇಳಿಕೊಂಡು ಬರುವ ಜನರಿಗೆ ಉಡಾಫೆ, ಬೇಜವಾಬ್ದಾರಿ ಉತ್ತರ ನೀಡದೇ ಸೂಕ್ತ ಮಾರ್ಗದರ್ಶನ, ಸಲಹೆ ನೀಡಬೇಕು.

ಹುಬ್ಬಳ್ಳಿ:

ಪೂರ್ವ ವಿಧಾನಸಭಾ ಕ್ಷೇತ್ರ 72 ಹಾಗೂ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ 73 ವ್ಯಾಪ್ತಿಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಮಹಾನಗರ ಪಾಲಿಕೆ ಸಮಿತಿ ಸಭೆ ಸ್ಥಳೀಯ ಮಹಾನಗರ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ಗುರುವಾರ ಜರುಗಿತು.

ಜನಪರ ಆಗಿರುವ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಇಲಾಖೆಗಳು ಉತ್ಸಾಹ ತೋರಿಸಬೇಕು. ಗೊಂದಲಗಳ ಬಗ್ಗೆ ಕೇಳಿಕೊಂಡು ಬರುವ ಜನರಿಗೆ ಉಡಾಫೆ, ಬೇಜವಾಬ್ದಾರಿ ಉತ್ತರ ನೀಡದೇ ಸೂಕ್ತ ಮಾರ್ಗದರ್ಶನ, ಸಲಹೆ ನೀಡಬೇಕೆಂದು ಅನುಷ್ಠಾನ ಪ್ರಾಧಿಕಾರದ ಪೂರ್ವ ಕ್ಷೇತ್ರದ ಅಧ್ಯಕ್ಷ ರಶೀದ್‌ ಭೋಲಾಬಾಯಿ ಅಧಿಕಾರಿಗಳಿಗೆ ತಿಳಿಸಿದರು.

ಪ್ರಾಧಿಕಾರ ಸದಸ್ಯ ವಾದಿರಾಜ ಕುಲಕರ್ಣಿ ಮಾತನಾಡಿ, ಗ್ಯಾರಂಟಿ ಯೋಜನೆಯ ಮಹತ್ವದ್ದು ಎನಿಸಿರುವ ಶಕ್ತಿ ಯೋಜನೆಗೆ ವ್ಯಾಪಕ ಬೇಡಿಕೆ ಇದೆ. ಆದರೆ, ಬಸ್‌ಗಳ ಸಂಖ್ಯೆ ಕಡಿಮೆ ಇವೆ. ಮೊದಲು 3 ಇದ್ದ ಬಸ್‌ಗಳು 2ಕ್ಕೆ ಇಳಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಅಧ್ಯಕ್ಷರು ಸರ್ಕಾರದ ಗಮನಕ್ಕೆ ತಂದು ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕೆಂದು ಸಲಹೆ ನೀಡಿದರು.

ವೀರಭದ್ರಯ್ಯಾ ಹಿರೇಹಾಳ, ಫಕೀರಪ್ಪ ದೊಡಮನಿ, ಮಂಜುನಾಥ ಮಟ್ಟಿ, ದಾವಲಸಾಬ್‌ ನದಾಫ, ಯಲ್ಲಪ್ಪ ಮೆಹರವಾಡೆ, ಇನಾಯತಖಾನ ಪಠಾಣ, ಇಮ್ರಾನ್‌ ಸಿಧ್ದಕಿ, ನದೀಮ ಆಚಮಟ್ಟಿ, ನಾಗಾರ್ಜುನ ಕತ್ರಿಮಲ್ಲ, ರಾಹುಲ್‌ ಬೆಳದಡಿ, ಸೆಂಟ್ರಲ್‌ ಕ್ಷೇತ್ರದ ಅಧ್ಯಕ್ಷ ಅಬ್ದುಲ್‌ ಗಣಿ ವಲಿಅಹ್ಮದ್‌ ಹಾಗೂ ಸದಸ್ಯರಾದ ಅಬ್ದುಲ್‌ ಅಜೀಜ್‌ ಮುಲ್ಲಾ, ಪ್ರವೀಣ ಶಲವಡಿ, ಲಕ್ಷ್ಮಣ ಗಡ್ಡಿ, ಸಂತೋಷ ನಾಯಕ, ಬಾಳಮ್ಮ ಜಂಗಿನವರ, ಪ್ರಕಾಶ ಮಾಯಕರ, ಉಮೇಶ ಕೋಟೆನ್ನವರ ಹಾಗೂ ಇತರರು ಇದ್ದರು.

ಪಾಲಿಕೆಯ ಉಪ ಆಯುಕ್ತ ಆನಂದ ಕಲ್ಲೊಳಿಕರ, ಸಿಡಿಪಿಒ ಮುತ್ತಣ, ಆಹಾರ ಇಲಾಖೆ ಸಹಾಯಕ ನಿರ್ದೇಶಕಿ ಡಾ. ವಸುಂದರಾ ಹೆಗಡೆ, ವಾಕರಸಾ ಸಂಸ್ಥೆಯ ಪಾರ್ವತಿ ಹುನಗುಂದ, ಹೆಸ್ಕಾಂ ಪ್ರವೀಣ, ಯುವನಿಧಿ ವಿಭಾಗದ ಮಹೇಶಶ್‌ ಹಾಗೂ ಇನ್ನಿತರರು ಉಪಸ್ಥಿತರಿದ್ದರು.