ಸಮಯ ಪ್ರಜ್ಞೆ ಜೊತೆಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಸಚಿವ ಆರ್.ಬಿ.ತಿಮ್ಮಾಪೂರ

| Published : Jan 31 2025, 12:46 AM IST

ಸಮಯ ಪ್ರಜ್ಞೆ ಜೊತೆಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಸಚಿವ ಆರ್.ಬಿ.ತಿಮ್ಮಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆ ಜೊತೆಗೆ ಆತ್ಮವಿಶ್ವಾಸ ಬೆಳೆಸಿಕೊಂಡರೆ ಯಶಸ್ವಿ ಜೀವನ ಹೊಂದಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ(ರ-ಬ)

ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆ ಜೊತೆಗೆ ಆತ್ಮವಿಶ್ವಾಸ ಬೆಳೆಸಿಕೊಂಡರೆ ಯಶಸ್ವಿ ಜೀವನ ಹೊಂದಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ಸ್ಥಳೀಯ ಅಕ್ಷರ ವಿದ್ಯಾ ವಿಹಾರ ಶಾಲೆಯ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹಕೂಟವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಮಕ್ಕಳಿಗೆ ನೈತಿಕ ಶಿಕ್ಷಣ ಬೋಧನೆ ಮಾಡುವ ಕೌಶಲ್ಯ ಬೆಳೆಸಿಕೊಳ್ಳಬೇಕು. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಗುರುಕುಲ ಶಿಕ್ಷಣ ವ್ಯವಸ್ಥೆಯು ಜಗತ್ತಿನ ಅತ್ಯಂತ ಪುರಾತನ ಶಿಕ್ಷಣ ವ್ಯವಸ್ಥೆ ಆಗಿದೆ ಎಂದರು.

ಶಾಸಕ ಸಿದ್ದು ಸವದಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಆಟದೊಂದಿಗೆ ಪಾಠ ಕಲಿಸುವ ಪ್ರವೃತ್ತಿ ಮೈಗೂಡಿಸಿಕೊಳ್ಳಬೇಕು. ಪಾಲಕರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ನಿತ್ಯ ಬದುಕಿನ ಕೆಲ ಸಮಯ ಮೀಸಲಿಡಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿ ಓದಿನತ್ತ ಗಮನ ಹರಿಸಿ ಎಂದರು.ವಿಶೇಷ ಉಪನ್ಯಾಸಕರಾಗಿದ್ದ ವಾಸುದೇವ್ ಸುತದಾಸ, ಭಗವಂತ ಭೂಮಿಯ ಮೇಲೆ ಅನಾಚಾರ, ಅತ್ಯಾಚಾರ ಹೆಚ್ಚಾಗಿ ಧರ್ಮದ ಮೇಲೆ ದಾಳಿಯಾಗಿ ಧರ್ಮ ನಶಿಸುವ ಸಮಯ ಬಂದಾಗ ಪುನಃ ಪುನಃ ನಾನಾ ಅವತಾರದಲ್ಲಿ ಅವತರಿಸಿ ರಕ್ಷಿಸುತ್ತಾನೆ. ವಿಷ್ಣು ದಶಾವತಾರ ತಾಳಿ ಜಗತ್ತನ್ನು ಮತ್ತು ಸರ್ವ ಜೀವಿಗಳನ್ನು ರಕ್ಷಣೆ ಮಾಡಿದ ಎಂದರು.

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ ಶಿರೋಳದ ರಾಮರೂಢ ಮಠದ ಶಂಕರಾರೂಢ ಸ್ವಾಮೀಜಿ ಆಶೀರ್ವಚನ ನೀಡಿದರು. ಅನೇಕ ಸಾಧಕರಿಗೆ ಪ್ರಶಸ್ತಿ ನೀಡಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಅನೇಕ ಸಾಧಕ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾ.ಎ.ಆರ್‌.ಬೆಳಗಲಿ, ಪ್ರಕಾಶ್ ಮೇತ್ರಿ, ಡಾ.ವಿನೋದ್ ಮೇತ್ರಿ, ಸಂಗಮೇಶ್ ಬಬಲೇಶ್ವರ್, ಮನ್ನಯ್ಯನವರಮಠ, ಡಾ ತೇಜಸ್ವಿತಾ ಮೇತ್ರಿ ಸೇರಿ ಗಣ್ಯರು ವೇದಿಕೆ ಮೇಲಿದ್ದರು. ಯುವ ಮುಖಂಡರಾದ ಪುರಸಭೆ ಸದಸ್ಯ ರವಿ ಜವಳಗಿ, ವಿವೇಕ ಧಪಳಾಪುರ, ಬಾಲಕೃಷ್ಣ ಬಾಳವದೆ, ಶ್ರೀಕಾಂತ್ ಮಾಗಿ, ಪ್ರಕಾಶ್ ಮಮದಾಪುರ ಹಾಗೂ ವಿದ್ಯಾರ್ಥಿಗಳು ಮತ್ತು ಪಾಲಕರು ಸೇರಿದಂತೆ ಅನೇಕರಿದ್ದರು.