ಬೆಟ್ಟದಲ್ಲಿ ಮರಿಯೊಂದಿಗೆ ಕರಡಿಯ ಆಟ

| Published : Jul 19 2025, 01:00 AM IST

ಸಾರಾಂಶ

ರಾಮನಗರ: ತಾಲೂಕಿನ ಕೈಲಾಂಚ ಹೋಬಳಿಯ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸ ತಾಣವಾಗಿರುವ ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ಬೆಟ್ಟದ ಪಕ್ಕದ ಬೆಟ್ಟದಲ್ಲಿ ಕರಡಿಯೊಂದು ತನ್ನ ಮರಿಯೊಂದಿಗೆ ಆಟವಾಡುತ್ತಿರುವ ದೃಶ್ಯವು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಾಮನಗರ: ತಾಲೂಕಿನ ಕೈಲಾಂಚ ಹೋಬಳಿಯ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸ ತಾಣವಾಗಿರುವ ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ಬೆಟ್ಟದ ಪಕ್ಕದ ಬೆಟ್ಟದಲ್ಲಿ ಕರಡಿಯೊಂದು ತನ್ನ ಮರಿಯೊಂದಿಗೆ ಆಟವಾಡುತ್ತಿರುವ ದೃಶ್ಯವು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಟ್ಟದ ತುದಿಯಲ್ಲಿ ತಾಯಿಯೊಂದಿಗೆ ಚಿನ್ನಾಟವಾಡುತ್ತಿರುವ ಮರಿಯ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಬೆಟ್ಟದ ಸೌಂದರ್ಯವನ್ನು ಸೆರೆ ಹಿಡಿಯುವುದಕ್ಕಾಗಿ ಇತ್ತೀಚೆಗೆ ಹವ್ಯಾಸಿ ಛಾಯಾಗ್ರಾಹಕರೊಬ್ಬರು ಡ್ರೋನ್ ಕ್ಯಾಮೆರಾವನ್ನು ಬೆಟ್ಟದ ಮೇಲಕ್ಕೆ ಹಾರಿಸಿದ್ದಾಗ ಈ ದೃಶ್ಯ ಕಂಡಿದೆ. ಕ್ಯಾಮೆರಾವು ಬೆಟ್ಟದ ತುದಿ ತಲುಪಿದಾಗ ಮರಿಯು ತನ್ನ ತಾಯಿಯೊಂದಿಗೆ ಆಟವಾಡುತ್ತಿತ್ತು. ಅದನ್ನು ಗಮನಿಸಿದ ಛಾಯಾಗ್ರಾಹಕ ಕ್ಯಾಮೆರಾವನ್ನು ಕರಡಿಗಳ ಸಮೀಪಕ್ಕೆ ಸ್ವಲ್ಪ ಇಳಿಸಿದ್ದಾನೆ. ಕ್ಯಾಮೆರಾದ ಶಬ್ದಕ್ಕೆ ಬೆದರಿದ ತಾಯಿ ಕರಡಿ ಸಮೀಪದ ಕಲ್ಲಿನ ಪೊಟರೆಯೊಳಕ್ಕೆ ಮರಿಯೊಂದಿಗೆ ಸೇರಿಕೊಂಡಿತು.