ಕುಳಗಟ್ಟೆ ವ್ಯಾಪ್ತಿಯಲ್ಲಿ ಕರಡಿ ಪ್ರತ್ಯಕ್ಷ: ಗ್ರಾಮಸ್ಥರ ಆತಂಕ

| Published : Mar 27 2024, 01:00 AM IST

ಕುಳಗಟ್ಟೆ ವ್ಯಾಪ್ತಿಯಲ್ಲಿ ಕರಡಿ ಪ್ರತ್ಯಕ್ಷ: ಗ್ರಾಮಸ್ಥರ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಸಮೀಪದ ಕುಳಗಟ್ಟೆಯಲ್ಲಿ ಭದ್ರಾ ಕಾಲುವೆ ಸಮೀಪ ಕಂಚಿಬೀಳು ಚಿಕ್ತೆ ರಸ್ತೆಯ ಅಕ್ಕಪಕ್ಕದ ತೋಟಗಳಲ್ಲಿ ಕರಡಿಯೊಂದು ಕಾಣಿಸಿಕೊಳ್ಳುತ್ತಿದೆ. ತೋಟಗಳಿಗೆ ನೀರು ಹಾಯಿಸಲು ಹೋಗುವ ರೈತರಿಗೆ 15 ದಿನಗಳಿಂದಲೂ ಕರಡಿ ದರ್ಶನವಾಗುತ್ತಿದೆ. ಹೆಚ್ಚಿನ ಅನಾಹುತಕ್ಕೆ ಮೊದಲು ಅರಣ್ಯ ಇಲಾಖೆಯವರು ಕರಡಿಯನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹೊನ್ನಾಳಿ: ತಾಲೂಕಿನ ಸಾಸ್ವೇಹಳ್ಳಿ ಸಮೀಪದ ಕುಳಗಟ್ಟೆಯಲ್ಲಿ ಭದ್ರಾ ಕಾಲುವೆ ಸಮೀಪ ಕಂಚಿಬೀಳು ಚಿಕ್ತೆ ರಸ್ತೆಯ ಅಕ್ಕಪಕ್ಕದ ತೋಟಗಳಲ್ಲಿ ಕರಡಿಯೊಂದು ಕಾಣಿಸಿಕೊಳ್ಳುತ್ತಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇದ್ದು, ನೀರು ಕುಡಿಯಲು ಕರಡಿ ರಾತ್ರಿ, ಹಗಲು ಎಲ್ಲ ಸಮಯಗಳಲ್ಲಿ ಓಡಾಡುತ್ತಿದೆ. ಮಳೆ ಇಲ್ಲದೇ ತೋಟಗಳು ಒಣಗುತ್ತಿವೆ. ತೋಟಗಳಿಗೆ ನೀರು ಹಾಯಿಸಲು ಹೋಗುವ ರೈತರಿಗೆ 15 ದಿನಗಳಿಂದಲೂ ಕರಡಿ ದರ್ಶನವಾಗುತ್ತಿದೆ. ಹೆಚ್ಚಿನ ಅನಾಹುತಕ್ಕೆ ಮೊದಲು ಅರಣ್ಯ ಇಲಾಖೆಯವರು ಕರಡಿಯನ್ನು ಸೆರೆಹಿಡಿಯಬೇಕು. ಆ ಮೂಲಕ ಈ ಭಾಗದ ರೈತರು, ಮಕ್ಕಳು, ಹಿಳೆಯರಿಗೆ ರಕ್ಷಣೆ ನೀಡಬೇಕು ಎಂದಿದ್ದಾರೆ.

ಕರಡಿ ಭಯದಿಂದಾಗಿ ರಾತ್ರಿ ವೇಳೆ ನೀರು ಹರಿಸಲು ಹೋಗುವ ರೈತರು ಅಡಕೆ ಗರಿಗಳು, ಸೈಕಲ್ ಟೈರ್‌ಗಳಿಗೆ ಬೆಂಕಿ ಹಂಚಿಕೊಂಡು ಹೋಗುತ್ತಿದ್ದಾರೆ. ಆದಷ್ಟು ಬೇಗ ಕರಡಿ ಸೆರೆಹಿಡಿಯಬೇಕು ಎಂದು ರೈತರಾದ ಕೋರಿ ಸೋಮಶೇಖರಪ್ಪ, ನಾಗರಾಜಪ್ಪ, ಹರಳಹಳ್ಳಿ ರವಿ, ಹಿರೇಬಾಸೂರು ಕಿಟ್ಟಿ ಮತ್ತಿತರರು ಒತ್ತಾಯ ಮಾಡಿದ್ದಾರೆ.

- - - (-ಸಾಂದರ್ಭಿಕ ಚಿತ್ರ)

ಬಿಇಎಆರ್‌.ಜೆಪಿಜಿ: