ಸಾರಾಂಶ
ಬಾಗಲಕೋಟೆ: ಖಾತಾ ಬದಲಾವಣೆಗೆ ಲಂಚ ಪಡೆಯುತ್ತಿದ್ದ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಕರಡಿ ಗ್ರಾಮ ಪಂಚಾಯತಿ ಅಧಿಕಾರಿ ಲೋಕಾಯಕ್ತರ ಬಲೆಗೆ ಬಿದ್ದಿದ್ದಾರೆ.
ಬಾಗಲಕೋಟೆ: ಖಾತಾ ಬದಲಾವಣೆಗೆ ಲಂಚ ಪಡೆಯುತ್ತಿದ್ದ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಕರಡಿ ಗ್ರಾಮ ಪಂಚಾಯತಿ ಅಧಿಕಾರಿ ಲೋಕಾಯಕ್ತರ ಬಲೆಗೆ ಬಿದ್ದಿದ್ದಾರೆ. ಗ್ರಾಪಂ ಎಸ್ಡಿಎ ಚಂದ್ರಶೇಖರ ಬೂದಿಹಾಳ ಬಲೆಗೆ ಬಿದ್ದ ಅಧಿಕಾರಿ. ಸದ್ದಾಂ ಹುಸೇನ್ ನದಾಫ್ ಎಂಬುವವರು ತಮ್ಮ ಜಮೀನಿನ ವಾಟ್ನಿ ಪತ್ರದಂತೆ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದದ್ದರು. ಅರ್ಜಿ ವಿಲೇವಾರಿಗೆ ಎಸ್.ಡಿ.ಎ. ಚಂದ್ರಶೇಖರ ಬೂದಿಹಾಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಗುರುವಾರ ₹4500 ಲಂಚ ಪಡೆಯುವ ವೇಳೆ ಲೋಕಾಯುಕ್ತರು ದಾಳಿ ಮಾಡಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರು ದಾಳಿ ನಡೆಸಿ ಅಧಿಕಾರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.