ಇಲ್ಲಿನ ರುಡ್ ಸೆಟ್ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಲಾದ ಬ್ಯೂಟಿ ಪಾರ್ಲರ್ ತರಬೇತಿಯ ಸಮಾರೋಪ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.
ಬ್ರಹ್ಮಾವರ: ಇಲ್ಲಿನ ರುಡ್ ಸೆಟ್ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಲಾದ ಬ್ಯೂಟಿ ಪಾರ್ಲರ್ ತರಬೇತಿಯ ಸಮಾರೋಪ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಎಂ. ಮಾತನಾಡಿ, 35 ದಿನಗಳ ತರಬೇತಿ ನಿಜವಾದ ಅರ್ಥದಲ್ಲಿ ಯಶಸ್ವಿಯಾಗುವುದು ನೀವು ಸ್ವಂತ ಉದ್ಯಮ ಆರಂಭಿಸಿ ಯಶಸ್ಸು ಸಾಧಿಸಿದಾಗ ಮಾತ್ರ. ಸಂಸ್ಥೆಗೆ ನೀವು ನೀಡುವ ಅತಿ ದೊಡ್ಡ ಕೊಡುಗೆ ನಿಮ್ಮ ಯಶಸ್ಸೇ ಆಗಿದೆ ಎಂದರು.ಚಾಂತಾರು ಗ್ರಾಪಂ ಪಿಡಿಒ ಮೀರಾ ಮುಖ್ಯ ಅತಿಥಿಯಾಗಿದ್ದರು. ಸಂಸ್ಥೆಯ ಅತಿಥಿ ಉಪನ್ಯಾಸಕಿ ಹರಿಣಿ ಅಜಯ್ ರಾವ್ ಶುಭ ಹಾರೈಸಿದರು. ಮಹಾದೇವಿ, ಅಕ್ಷತಾ ವಿ.ಎ., ಕಾಳಮ್ಮ ಹಾಗೂ ಸುಕನ್ಯಾ ಅನುಭವಗಳನ್ನು ಹಂಚಿಕೊಂಡರು.
ಉಪನ್ಯಾಸಕಿ ಚೈತ್ರ ಕೆ. ನಿರೂಪಿಸಿದರು. ಕಚೇರಿ ಸಹಾಯಕ ಶಾಂತಪ್ಪ ಸ್ವಾಗತಿಸಿದರು. ಹಿರಿಯ ಕಚೇರಿ ಸಹಾಯಕ ರವಿ ವಂದಿಸಿದರು.