ನೆಲಮಂಗಲ: ವಿದ್ಯಾರ್ಥಿಗಳು ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತರಾಗದೆ ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನದ ರಾಯಭಾರಿಗಳಾಗಬೇಕು. ''''ಡ್ರಗ್ಸ್ ಗೆ ಬೇಡ ಬ್ರೊ, ಸಂದೇಶವನ್ನು ಕುಟುಂಬ, ಸ್ನೇಹವಲಯ ಹಾಗೂ ಸಮಾಜದ ಎಲ್ಲ ಹಂತಗಳಿಗೆ ತಲುಪಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧ ಹೇಳಿದರು

ನೆಲಮಂಗಲ: ವಿದ್ಯಾರ್ಥಿಗಳು ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತರಾಗದೆ ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನದ ರಾಯಭಾರಿಗಳಾಗಬೇಕು. ''''''''ಡ್ರಗ್ಸ್ ಗೆ ಬೇಡ ಬ್ರೊ, ಸಂದೇಶವನ್ನು ಕುಟುಂಬ, ಸ್ನೇಹವಲಯ ಹಾಗೂ ಸಮಾಜದ ಎಲ್ಲ ಹಂತಗಳಿಗೆ ತಲುಪಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧ ಹೇಳಿದರು.

ನೆಲಮಂಗಲದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಹಾಗೂ ನೆಲಮಂಗಲ ತಾಲೂಕು ಆಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಆಯೋಜಿಸಿದ್ದ ಬೇಡ ಬ್ರೋ, ಬೇಡ ಬ್ರೋ ಡ್ರಗ್ಸ್ ಬೇಡ ಬ್ರೋ ಅಭಿಯಾನ ಹಾಗೂ ಏಕತಾ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಪೋಷಕರ ಕನಸುಗಳಿಗೆ ದನಿಯಾಗಿರಿ. ಒಂದು ವೇಳೆ ಯಾರಾದರೂ ಈ ಜಾಲದಲ್ಲಿ ಸಿಲುಕಿದ್ದರೆ, ನಿಮ್ಮ ಸಮಸ್ಯೆಯನ್ನು ಯಾರು ಬಳಿಯೂ ಹೇಳಿಕೊಳ್ಳಲಾಗದಿದ್ದರೆ ಉಚಿತ ಸಹಾಯವಾಣಿ 1446ಕ್ಕೆ ಕರೆ ಮಾಡಿ. ಜಿಲ್ಲಾಡಳಿತ, ಸರ್ಕಾರ ಸದಾ ನಿಮ್ಮ ನೆರವಿಗೆ ನಿಲ್ಲಲಿದೆ,.ನಿಮ್ಮೊಳಗೆ ಒಂದು ವಾಟ್ಸಾಪ್ ಗುಂಪು ರಚಿಸಿಕೊಂಡು ಜಾಗೃತಿ ಮೂಡಿಸುವ ಕೆಲಸ ಮಾಡಿ ರಾಷ್ಟ್ರೀಯ ಏಕತೆ ಮತ್ತು ಮಾದಕ ದ್ರವ್ಯ ಮುಕ್ತ ಭವಿಷ್ಯದ ಸಂದೇಶವನ್ನು ಹೊತ್ತ ರ್ಯಾಲಿ ಗುಜರಾತ್ ತಲುಪಲಿದೆ ಎಂದರು.

ದುಶ್ಚಟಗಳಿಂದ ದೂರವಿರಿ:

ಸರ್ಕಾರ ಮಾದಕ ದ್ರವ್ಯಗಳನ್ನು ತಡೆಗಟ್ಟಲು ಹಲ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಡ್ರಗ್ಸ್ ಗೆ ಒಳಗಾದವರು ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನವನ್ನೇ ನಾಶ ಮಾಡಿಕೊಳ್ಳುತ್ತಾರೆ. ಆಪರೇಷನ್ ರೈಸ್ ಹಾಗೂ ಬೇಡ ಬ್ರೋ ಅಭಿಯಾನ ಯುವಜನತೆಗೆ ಪ್ರೇರಣೆಯಾಗಿದೆ. ವಿದ್ಯಾರ್ಥಿಗಳು ಇತರರಿಗೂ ಜಾಗೃತಿ ಮೂಡಿಸಿ, ದುಶ್ಚಟಗಳಿಂದ ದೂರವಿರಲು ಸಹಕರಿಸಬೇಕು ಎಂದು ಸಲಹೆ ನೀಡಿದರು.

ಎಸ್ಪಿ ಚಂದ್ರಕಾಂತ್ ಮಾತನಾಡಿ, ಪೊಲೀಸ್ ಇಲಾಖೆ ಮಾದಕ ದ್ರವ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವುದು, ಅವುಗಳ ಬಳಕೆಯನ್ನು ತಡೆಗಟ್ಟುವುದು ಮತ್ತು ಯುವಜನತೆಯನ್ನು ಮಾದಕ ವ್ಯಸನದಿಂದ ರಕ್ಷಿಸುವುದು ಈ ರ್ಯಾಲಿಯ ಪ್ರಮುಖ ಉದ್ದೇಶ ಎಂದರು.

ಅಭಿಯಾನದಲ್ಲಿ ಎಎಸ್ಪಿ ಲಕ್ಷ್ಮಿನಾರಾಯಣ, ಡಿವೈಎಸ್ ಪಿಗಳಾದ ಉಮಾರಾಣಿ, ಪಾಂಡುರಂಗ, ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ತಾಪಂ ಇಒ ಬಿಂದು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪೋಟೋ 1 :

ನೆಲಮಂಗಲದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಹಾಗೂ ತಾಲೂಕು ಆಡಳಿತ ಸಹಯೋಗದಲ್ಲಿ ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಬೇಡ ಬ್ರೋ, ಬೇಡ ಬ್ರೋ ಡ್ರಗ್ಸ್ ಬೇಡ ಬ್ರೋ ಅಭಿಯಾನ ಹಾಗೂ ಬೈಕ್ ರ್ಯಾಲಿಗೆ ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧ ಚಾಲನೆ ನೀಡಿದರು.