ಸಾರಾಂಶ
ಕೃಷಿಯನ್ನು ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮಿಶ್ರ ಬೆಳೆ ಹಾಗೂ ಸಾವಯವ ಕೃಷಿ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕೆಂದು ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
ಚಿಕ್ಕೋಡಿ : ಗ್ರಾಮೀಣ ಪ್ರದೇಶದ ರೈತರು ತಮ್ಮ ಹಿರಿಯರು ಮೃತರಾದರು ಇನ್ನು ಅವರ ಹೆಸರಿನಲ್ಲಿಯೇ ಉತಾರಗಳಿವೆ.ಆದ್ದರಿಂದ ರೈತರು ಎಚ್ಚೆತ್ತು ತಮ್ಮ ಉತಾರ ಸರಿಪಡಿಸಿಕೊಳ್ಳಬೇಕು. ಇಂದಿನ ಆಧುನಿಕ ಯುಗದಲ್ಲಿ ಕೃಷಿಯನ್ನು ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮಿಶ್ರ ಬೆಳೆ ಹಾಗೂ ಸಾವಯವ ಕೃಷಿ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕೆಂದು ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
ಸೋಮವಾರ ತಾಲೂಕಿನ ಬೆಳಕೂಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಗ್ರಾಮ ಪಂಚಾಯತಿ ಕಟ್ಟದ ಉದ್ಘಾಟಿಸಿ ಮಾತನಾಡಿ, ಗ್ರಾಮ ಮಟ್ಟದಲ್ಲಿ ಚುನಾಯಿತ ಪ್ರತಿನಿಧಿಗಳಾದವರು ಎಲ್ಲರೂ ಒಂದಾಗಿ ರಾಜಕೀಯ ದೂರವಿಟ್ಟು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಅನುದಾನ ತಂದು ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕೆಂದರು.
ಚಿಕ್ಕೋಡಿಯ ಸಂಪಾದನಾ ಮಹಾಸ್ವಾಮಿಗಳು ಮಾತನಾಡಿ, ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಪ್ರಗತಿಯಾಗಲು ಸಾಧ್ಯ. ಆದ್ದರಿಂದ ಗ್ರಾಮ ಪಂಚಾಯತ ಸದಸ್ಯರು ಮತ್ತು ಗ್ರಾಮದ ಹಿರಿಯರು ಕೂಡಿಕೊಂಡು ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಂದು ನೇರವಾಗಿ ಗ್ರಾಮ ಪಂಚಾಯತಿಗೆ ಅನುದಾನ ನೀಡುತ್ತಿವೆ. ಅದನ್ನು ಸದ್ಬಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ಧಿಗೆ ಗ್ರಾಮ ಪಂಚಾಯತ ಸದಸ್ಯರು ಶ್ರಮಿಸಬೇಕೆಂದು ತಿಳಿಸಿದರು.
ಶಾಸಕ ದುರ್ಯೋಧನ ಐಹೋಳೆ ಮಾತನಾಡಿ, ರಾಯಬಾಗ ವಿಧಾನ ಸಭಾ ಕ್ಷೇತ್ರದ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಹೋಬಳಿಯನ್ನು ಸಂಪೂರ್ಣ ನೀರಾವರಿಯನ್ನಾಗಿ ಮಾಡುವ ಮುಖಾಂತರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವುದೇ ನನ್ನ ಗುರಿಯಾಗಿದೆ ಎಂದು ಹೇಳಿದರು.
ಚಂದರಗಿ ಕ್ರೀಡಾ ಶಾಲೆ ನಿರ್ದೇಶಕ ಮಹೇಶ ಭಾತೆ, ಹಿರಾಶುಗರ ನಿರ್ದೇಶಕ ಸುರೇಶ ಬೆಲ್ಲದ, ಪಿಡಿಒಗಳಾದ ರಾಜಾರಾಮ ರಾಜಾಪೂರೆ, ರವೀಂದ್ರ ದಶವಂತ ಮಾತನಾಡಿದರು.
ಸಮಾರಂಭಕ್ಕೂ ಮುನ್ನ ಚಿಕ್ಕೋಡಿ ಲೋಕಸಭೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಶುಭ ಹಾರೈಸಿದರು.
ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣಕ್ಕೆ ಹೆಚ್ಚುವರಿ ಜಾಗೆಯನ್ನು ದಾನವಾಗಿ ನೀಡಿದ ಗ್ರಾಪಂ ಮಾಜಿ ಅಧ್ಯಕ್ಷ ಬಸವಣ್ಣಿ ಕುಂಬಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಪಂ ಮಾಜಿ ಅಧ್ಯಕ್ಷ ಬಸವಣ್ಣಿ ಕುಂಬಾರ, ತಾಪಂ ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವೆ, ಪಿಡಿಒಗಳಾದ ರಮೇಶ ಹೂಗಾರ, ಸಂಜಯ ಚನ್ನವರ, ಅಣ್ಣಪ್ಪಾ ಇಟನಾಳೆ, ಗ್ರಾಪಂ ಅಧ್ಯಕ್ಷೆ ಸುನಂದಾ ಗಿರಿಜಾಯಿ, ಕಲ್ಮೇಶ ಕಿವಡ, ಡಾ.ಎಂ.ಬಿ. ಕುಂಬಾರ, ಶರತ ಸೊಲ್ಲಾಪೂರಕರ, ಸಿದ್ದಪ್ಪ ಮರ್‍ಯಾಯಿ, ವಿ.ಬಿ. ಈಟಿ, ಕುಮಾರ ಈಟಿ, ಜಾಗನೂರ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಮಂಗಿ, ಮಹಾಂತೇಶ ಚವ್ಹಾಣ, ದೇವರಾಜ ಪಾಶ್ಚಾಪೂರೆ, ರೋಹಿಣಿ ಕವಣಿ, ಮಲ್ಲಪ್ಪ ಅರಭಾಂವಿ, ಗೌರವ್ವ ಬೀಡ, ಕೋಕಿಲಾ ನಿಂಗಪ್ಪಗೋಳ, ಸುರೇಖಾ ಮುಗಳಿ, ವಿನೋದ ಮಗದುಮ್ಮ, ಮಹಾಂತೇಶ ಯಶವಂತ, ಮಹಾದೇವ ಪಾಮದಿನ್ನಿ, ಸಿದ್ದು ಖಿಂಡಿ, ವಿಜಯ ಕೋಠಿವಾಲೆ ಉಪಸ್ಥಿತರಿದ್ದರು.
ಚಂದ್ರಶೇಖರ ಅರಭಾಂವಿ ಸ್ವಾಗತಿಸಿದರು. ನಟರಾಜ ಹಿರೇಮಠ ನಿರೂಪಿಸಿ,ವಂದಿಸಿದರು.