ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಉದ್ಯೋಗಸ್ಥರಾಗಿ

| Published : Nov 17 2023, 06:45 PM IST

ಸಾರಾಂಶ

ಸ್ವಯಂ ಉದ್ಯೋಗ ಕೈಗೊಳ್ಳಲು ಸರ್ಕಾರದಿಂದ ಹಲವಾರು ಯೋಜನೆಗಳಿದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಉದ್ಯೋಗಸ್ಥರಾಗಬೇಕು ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಬಸನಗೌಡ ತಿಳಿಸಿದರು.

ಕನ್ನಡ ಪ್ರಭ ವಾರ್ತೆ ದಾವಣಗೆರೆ

ಸ್ವಯಂ ಉದ್ಯೋಗ ಕೈಗೊಳ್ಳಲು ಸರ್ಕಾರದಿಂದ ಹಲವಾರು ಯೋಜನೆಗಳಿದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಉದ್ಯೋಗಸ್ಥರಾಗಬೇಕು ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಬಸನಗೌಡ ತಿಳಿಸಿದರು.

ನಗರದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಮಹಿಳಾ ಸಂಘದ, ಸಭಾಂಗಣದಲ್ಲಿ ಉದ್ಯಮಾಕಾಂಕ್ಷಿಗಳಿಗೆ ಹಮ್ಮಿಕೊಳ್ಳಲಾದ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವಯಂ ಉದ್ಯೋಗ ಮಾಡಲು ಹಲವಾರು ಅವಕಾಶಗಳಿವೆ. ಅವುಗಳಲ್ಲಿ ನಮಗೆ ಯಾವುದು ಸರಿಯಾದದು ಎಂದು ಆಯ್ಕೆಮಾಡಿಕೊಳ್ಳಬೇಕು. ಅಲ್ಲದೆ ಸ್ವಂತ ಉದ್ಯಮ ಮಾಡುವವರಿಗೆ ಸರ್ಕಾರದಿಂದ ಪಿಎಂ ಸ್ವನಿಧಿ ಯೋಜನೆ, ಪಿಎಂ ವಿಶ್ವಕರ್ಮ ಯೋಜನೆ ಇನ್ನೂ ಅನೇಕ ಯೋಜನೆಗಳಿವೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಮತ್ತು ಹತ್ತು ದಿನಗಳ ಉದ್ಯಮಶೀಲತಾಭಿವೃದ್ದಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕು. ಬೇರೆಯವರಿಗೂ ಕೂಡಾ ಉದ್ಯೋಗವನ್ನು ಕೊಡುವಂತವರಾಗಬೇಕು ಆಗ ಮಾತ್ರ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯ ಎಂದರು.

ಇ-ಕಾರ್ಟ್ ಸರ್ವಿಸ್, ವಿಸ್ ಮಾಸ್ಟರ್ ಆರ್. ಮಧುಶ್ರೀ, ಲೀಡ್ ಬ್ಯಾಂಕ್, ಜಿಲ್ಲಾ ವಿಭಾಗೀಯ ಮಾರ್ಗದರ್ಶಿ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಿಡಾಕ್ ಜಂಟಿ ನಿರ್ದೇಶಕ ಆರ್.ಪಿ. ಪಾಟೀಲ್, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿರಾಯಣ್ಣ ಮಹಿಳಾ ಸಂಘದ ಅಧ್ಯಕ್ಷೆ ಶಿಲ್ಪಾ, ಸಿಡಾಕ್ ಸಂಸ್ಥೆಯ ತರಬೇತುದಾರರಾದ ವಿನಯ್‌ ಜಿ.ಕೆ, ಬಸವರಾಜ ಜಿ.ಬಿ, ಜಿಲ್ಲಾ ಕೌಶಲ್ಯ ಮಿಶನ್ ಸಹಾಯಕ ನಿರ್ದೇಶಕ ಡಾ. ಸಿದ್ದೇಶ್, ಮಿಷನ್ ಮ್ಯಾನೇಜರ್ ಡಾ.ವಿ.ಟಿ. ಬಸವರಾಜ್, ಮೇಲ್ವಿಚಾರಕ ಹರೀಶ್ ಉಪಸ್ಥಿತರಿದ್ದರು.